BREAKING NEWS
Search

2020-ರ ಬಜೆಟ್ ನಲ್ಲಿ ಏನಿದೆ? ಯಾವುದಕ್ಕೆ ಎಷ್ಟು !ಏರಿಳಿತವೇನು? ಸಂಪೂರ್ಣ ಬಜೆಟ್ ಹೈಲೆಟ್ಸ್

714

ನವದೆಹಲಿ: ಇದು ಜನಸಾಮಾನ್ಯರ ಬಜೆಟ್ ಎನ್ನುತ್ತಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾವು ಸಾಯಬಾರದು ಕೋಲು ಮುರಿಯಬಾರದೆಂಬ ಲೆಕ್ಕಾಚಾರದಲ್ಲಿ ಅಯವ್ಯಯ ಮಂಡಿಸಿದ್ದಾರೆ.

2 ಗಂಟೆ 40 ನಿಮಿಷಗಳ ಸುದೀರ್ಘ ಬಜೆಟ್ ಭಾಷಣದಲ್ಲಿ ಮೇಲ್ನೋಟಕ್ಕೆ ಹಲವು ವರಗಳನ್ನು ಘೋಷಣೆ ಮಾಡಿದರು. ಆದರೆ ಎಲ್ಲಾ ಮುಗಿದ ಮೇಲೆ ಬಜೆಟ್ ಆಳಕ್ಕೆ ಇಳಿದಾಗ ಅಸಲಿಯತ್ತು ಬಯಲಾಗಿದೆ.

ಮಧ್ಯಮವರ್ಗಕ್ಕೆ ಸರ್ಕಾರ ವರಗಳನ್ನು ಕೊಟ್ಟಂತೆ ಕೊಟ್ಟು ಹಾಗೆಯೇ ಕಸಿದುಕೊಂಡಿದೆ.

ಕೃಷಿ ಮತ್ತು ಗ್ರಾಮೀಣಾ ಭಾಗಕ್ಕೆ ಹೆಚ್ಚು ಒತ್ತು ನೀಡಿದ್ದು ಪ್ರಮುಖವಾಗಿದೆ.

ವಿತ್ತಿಯ ಕೊರತೆ ನೀಗಿಸಲು ಸರ್ಕಾರಿ ಸ್ವಾಮ್ಯದ ಎಲ್‍ಐಸಿಯಂತಹ ಕಂಪನಿಗಳಲ್ಲಿ ಹೂಡಿಕೆ ಹಿಂತೆಗೆತಕ್ಕೆ ಅವಕಾಶ ನೀಡಿದೆ.

ಏರಿಕೆ ಕಾಣುತ್ತಿರುವ ಬಂಗಾರ, ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡುವ ಯಾವುದೇ ಮುನ್ಸೂಚನೆ ನೀಡದೇ ಜನಸಾಮನ್ಯರ ಮೇಲೆ ಬರೆ ಎಳೆದಿದೆ.

ಕುಸಿಯುತ್ತಿರು ರಿಯಲ್ ಎಸ್ಟೇಟ್, ಆಟೋ ಮೊಬೈಲ್ ರಂಗಕ್ಕೆ ಹೆಚ್ಚು ಒತ್ತು ನೀಡಿಲ್ಲ.

ಆದಾಯ ತೆರಿಗೆಯಲ್ಲಿ ಹಳೆ ಪದ್ಧತಿಯನ್ನು ಮುಂದುವರೆಸುತ್ತಲೇ, ಹೊಸ ವಿಧಾನವನ್ನು ಪರಿಚಯ ಮಾಡಿರೋ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಿರೋ ನಿಮಗೆ ಬಿಟ್ಟಿದ್ದು ಎಂದಿದ್ದಾರೆ.

ಹೊಸ ತೆರಿಗೆ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವುದು ಐಚ್ಛಿಕ ಎಂದಿದ್ದಾರೆ.

ತೆರಿಗೆ ವಿನಾಯಿತಿಗಳನ್ನು ಹೊಂದಬೇಕೋ ಅಥವಾ ಬೇಡವೋ? ಎನ್ನುವುದು ವೇತನದಾರನ ನಿರ್ಣಯದ ಮೇಲೆ ಅವಲಂಬಿತವಾಗಿರುತ್ತದೆ. ಹೊಸ ಆದಾಯ ತೆರಿಗೆ ವಿಧಾನವನ್ನು ನೀವು ಬಯಸಿದಲ್ಲಿ 80 ಸಿ ಅಡಿ ಬರುವ ವಿನಾಯಿತಿಗಳು ತೆರಿಗೆ ದಾರನಿಗೆ ಸಿಗುವುದಿಲ್ಲ.

ಆದಾಯ ತೆರಿಗೆ ಲೆಕ್ಕಾಚಾರ ಹೀಗಿದೆ:-

1)2.5 ಲಕ್ಷದಿಂದ 5 ಲಕ್ಷದವರೆಗೆ ಶೇ.5 ತೆರಿಗೆ
2) 5 ಲಕ್ಷ ರೂ.ಯಿಂದ 7.5 ಲಕ್ಷ ರೂ.ವರೆಗೆ ತೆರಿಗೆ ಶೇ.20ರ ಬದಲಾಗಿ ಶೇ.10 ಅನ್ವಯವಾಗುವುದು
3)7.5 ಲಕ್ಷ ನಿಂದ 10 ಲಕ್ಷವರೆಗೆ ಶೇ.20ರ ಬದಲಾಗಿ ಶೇ.15 ಅನ್ವಯ
4) 10 ಲಕ್ಷದಿಂದ 12.5 ಲಕ್ಷಕ್ಕೆ ತೆರಿಗೆ ಶೇ.30ರ ಬದಲಾಗಿ ಶೇ.20 ಅನ್ವಯ
5) 12.5 ಲಕ್ಷದಿಂದ 15 ಲಕ್ಷದವರೆಗೆ ಶೇ.30ರ ಬದಲಾಗಿ ಶೇ. 25 ಅನ್ವಯ
6)15 ಲಕ್ಷಕ್ಕಿಂತ ಅಧಿಕ ಆದಾಯಕ್ಕೆ ಶೇ.30 ಅನ್ವಯ.
7) ಹೊಸ ತೆರಿಗೆಯಿಂದಾಗಿ 15 ಲಕ್ಷ ಅಧಿಕ ಆದಾಯ ಹೊಂದಿದ ತೆರಿಗೆದಾರನಿಗೆ 78 ಸಾವಿರ ರೂ. ಲಾಭವಾಗಲಿದೆ.
8)ಹೊಸ ವ್ಯವಸ್ಥೆಯಲ್ಲಿ ವಿವಿಧ 70 ಕಡಿತಗಳನ್ನು ತೆಗೆದು ಹಾಕಲಾಗಿದೆ. ಒಂದು ವೇಳೆ ತೆರಿಗೆದಾರ ಬಯಸಿದ್ರೆ ಹಳೆಯ ವ್ಯವಸ್ಥೆಯ ಲಾಭ ಪಡೆಯಬಹುದು.
9)ಡೈರೆಕ್ಟ್ ಟ್ಯಾಕ್ಸ್ (ನೇರ ತೆರಿಗೆ) ಹೊಂದಿರುವ ವಿವಾದಗಳನ್ನು ಶಮನಗೊಳಿಸುವದಕ್ಕಾಗಿ `ವಿವಾದ ಸೇ ವಿಶ್ವಾಸ್ ಯೋಜನೆ’ಯಲ್ಲಿ ಬಡ್ಡಿ ಮತ್ತು ದಂಡದಿಂದ ವಿನಾಯ್ತಿ

10) ಕಂಪನಿಯ ಡಿವಿಡೆಂಟ್ ಮೇಲಿನ ಲಾಭಾಂಶ ತೆರಿಗೆ ಕಂಪನಿಗಳ ಬದಲಾಗಿ ಶೇರುದಾರನಿಗೆ ಅನ್ವಯವಾಗಲಿದೆ. ಲಾಭಾಂಶ ತೆರಿಗೆಯನ್ನು ಶೇರುದಾರ ಪಾವತಿಸೋದು.

11) ಆಧಾರ್ ಕಾರ್ಡ್ ಮೂಲಕ ಅರ್ಜಿ ಸಲ್ಲಿಸುವ ಅರ್ಜಿದಾರನಿಗೆ ಕಡಿಮೆ ಸಮಯದಲ್ಲಿ ಪ್ಯಾನ್ ಕಾರ್ಡ್ ನೀಡಲಾಗುವುದು.

80 ಸಿ ಶಾಕ್!

ಹೊಸ ತೆರಿಗೆ ಪದ್ಧತಿಯನ್ನು ನೀವು ಆಯ್ಕೆ ಮಾಡಿಕೊಂಡ್ರೆ ನಿಮಗೆ 80 ಸಿ ಅನ್ವಯ ಸಿಗಬೇಕಾದ ಯಾವುದೇ ವಿನಾಯಿತಿಗಳು ಸಿಗಲ್ಲ. ಯಾವುದಕ್ಕೆ ತೆರಿಗೆ ವಿನಾಯಿತಿ ಸಿಗಲ್ಲ ಎಂಬುವುದು ಈ ಕೆಳಗಿನಂತಿದೆ.

1)ಮನೆ ಬಾಡಿಗೆ ಭತ್ಯೆಗೆ ತೆರಿಗೆ ವಿನಾಯಿತಿ ಇರಲ್ಲ.
2) ಟಿಎ, ಡಿಎಗಳಿಗೆ ತೆರಿಗೆ ವಿನಾಯಿತಿ ಇಲ್ಲ.
3) ವಿಕಲಚೇತನರಿಗೆ ಸಿಗುತ್ತಿದ್ದ ತೆರಿಗೆ ವಿನಾಯಿತಿ ಇರಲ್ಲ.
4)50 ಸಾವಿರ ರೂ. ಸ್ಟಾಂಡರ್ಡ್ ಡಿಡಕ್ಷನ್‍ಗೆ ತೆರಿಗೆ ವಿನಾಯಿತಿ ಇರಲ್ಲ.
5)ಕುಟುಂಬ ಪಿಂಚಣಿ ಅಡಿ 15 ಸಾವಿರ ಡಿಡಕ್ಷನ್‍ಗೆ ಅವಕಾಶ ಇರಲ್ಲ.
6)ಜೀವವಿಮೆಗೆ ತೆರಿಗೆ ವಿನಾಯಿತಿ ಇರಲ್ಲ.
7)ಸುಕನ್ಯ ಸಮೃದ್ಧಿ ಯೋಜನೆ ತೆರಿಗೆ ವಿನಾಯಿತಿ ಇರಲ್ಲ.
8)ಪಿಪಿಎಫ್‍ಗೆ ತೆರಿಗೆ ವಿನಾಯಿತಿ ಇರಲ್ಲ.
9)ಈಕ್ವಿಟಿ ಲಿಂಕ್ಡ್ ಉಳಿತಾಯ ಯೋಜನೆಗೆ ತೆರಿಗೆ ವಿನಾಯಿತಿ ಇರಲ್ಲ.
10)ನಿಶ್ಚಿತ ಠೇವಣಿಗೆ ತೆರಿಗೆ ವಿನಾಯಿತಿ ಇರಲ್ಲ.
11) ಹಿರಿಯ ನಾಗರಿಕರ ಉಳಿತಾಯಕ್ಕೆ ತೆರಿಗೆ ವಿನಾಯಿತಿ ಇರಲ್ಲ.
12)ಮನೆ ಸಾಲಗಳಿಗೆ ತೆರಿಗೆ ವಿನಾಯಿತಿ ಇರಲ್ಲ.
13)ಸಂಸ್ಥೆಗಳಿಗೆ ನೀಡುವ ಡೊನೇಷನ್‍ಗೆ ತೆರಿಗೆ ವಿನಾಯಿತಿ ಇಲ್ಲ.

ಏರಿಕೆಯಾದುದ್ದು ಏನು?

1)ಪೆಟ್ರೋಲ್, ಡೀಸೆಲ್, ಚಿನ್ನ ದರ ಏರಿಕೆಯಾಗಲಿದೆ.

2) ಗೃಹ ಉಪಯೋಗಿ ವಸ್ತುಗಳ ಮೇಲಿನ ಜಿಎಸ್‍ಟಿ ದುಪ್ಪಟ್ಟಾಗಿದೆ.

3)ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ಮೇಲೆನ ತೆರಿಗೆ ಏರಿಕೆ ಮಾಡಲಾಗಿದೆ.

4)ಚೀನಾ ಸೆರಾಮಿಕ್, ಜೇಡಿ ಮಣ್ಣಿನಿಂದ ತಯಾರಿಸಿದ ಗೃಹ ಉಪಯೋಗಿ ವಸ್ತುಗಳ ಮೇಲಿನ ತೆರಿಗೆ ಏರಿಕೆಯಾಗಿದೆ.

5) ಗೃಹ ಉಪಯೋಗಿ ವಸ್ತುಗಳ ಮೇಲಿನ ಜಿಎಸ್‍ಟಿ ಶೇ.10ರಿಂದ ಶೆ. 20ರಷ್ಟು ಏರಿಕೆಯಾಗಿದೆ.

6)ಪಿಂಗಾಣಿ ಕಪ್, ಮಗ್, ತಾಮ್ರ, ಸ್ಟೀಲ್ ಪಾತ್ರೆಗಳ ಮೇಲಿನ ತೆರಿಗೆ ಏರಿಕೆಯಾಗಿದೆ.

8) ವಾಣಿಜ್ಯ ವಾಹನಗಳ ಬಿಡಿ ಭಾಗಗಳ ಮೇಲಿನ ತೆರಿಗೆ ಹಾಗೂ ವಾಣಿಜ್ಯ ವಾಹನಗಳ ಮೇಲಿನ ತೆರಿಗೆಯಲ್ಲಿ ಏರಿಕೆ.

9) ಆಟೋ, ಬೈಕ್, ಕಾರು ದುಬಾರಿ

10) ಚಪ್ಪಲಿ, ಫರ್ನಿಚರ್ ದುಬಾರಿ

11)ಪೀಠೋಪಕರಣಗಳು ಹಾಗೂ ಗೃಹೋಪಯೋಗಿ ವಸ್ತುಗಳ ದರ ಏರಿಕೆ.

12) ಕೆನೆ ತೆಗೆದ ಹಾಲಿನ ಉತ್ಪನ್ನಗಳು ಇನ್ಮುಂದೆ ಮತ್ತಷ್ಟು ತುಟ್ಟಿಯಾಗಲಿವೆ.

13)ಸಕ್ಕರೆ ಬೆಲೆ ಏರಿಕೆ.

14) ಸೋಯಾ ಫೈಬರ್ ಉತ್ಪನ್ನಗಳ ದರ ಏರಿಕೆ.

15) ವೈದ್ಯಕೀಯ ಸಲಕರಣೆಗಳ ಮೇಲಿನ ತೆರಿಗೆ ಏರಿಕೆ ಆಗಿರೋದ್ರಿಂದ ಆಸ್ಪತ್ರೆ ಖರ್ಚು ಹೆಚ್ಚಲಿದೆ.

ಇಳಿಕೆ ಕಂಡಿದ್ದು ಕೆಳಗಿನಂತಿವೆ:-

1) ನ್ಯೂಸ್ ಪ್ರಿಂಟ್‍ಗಳ ದರ ಇಳಿಕೆ.

2) ಹಗುರ ಕೋಟೆಡ್ ಕಾಗಗದ ದರ ಇಳಿಕೆ.

ಬಜೆಟ್ ಹೈಲೆಟ್ಸ್ :-

1) 6 ಲಕ್ಷ ಅಂಗನವಾಡಿ ಕಾರ್ಯಕರ್ತರಿಗೆ ಸ್ಮಾರ್ಟ ಫೋನ್ .

2)ಗರ್ಭಿಣಿಯರಿಗೆ ಸಾವು ತಡೆಯಲು ಹೊಸ ಟಾಸ್ಕ ಪೋರ್ಸ.

3)ಎಸ್.ಟಿ. ಎಸ್.ಟಿ ,ಓಬಿಸಿ ಸಮುದಾಯಕ್ಕೆ 85 ಸಾವಿರ ಕೋಟಿ ಅನುದಾನ.

4) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 28600 ಕೋಟಿ ಅನುದಾನ.

5)ಸಾಗರ ಮಿತ್ರ ಯೋಜನೆಯಡಿ ಮೀನುಗಾರಿಕಾ ಪ್ರೋತ್ಸಾಹ.

6) ಆಯುಷ್ಮಾನ್ ಯೋಜನೆಯಡಿ
112 ಜಿಲ್ಲೆಗಳಿಗೆ ಆಸ್ಪತ್ರೆ ಸ್ಥಾಪನೆ.

7) 5 ಪುರಾತತ್ವ ಸ್ಥಳಗಳನ್ನು ಘೋಷಣೆ.

8)ಧನಲಕ್ಷ್ಮಿ ,ಧಾನ್ಯ ಲಕ್ಷ್ಮಿ ಯೋಜನೆ (ಮಹಿಳಾ ಸಂಘಗಳ)

9)ಸೌಲಭ್ಯ ವಂಚಿತ ವಿಧ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಶಿಕ್ಷಣ ಯೋಜನೆ.

10)ಪರಿಸರ ಮಾಲಿನ್ಯ ನಿಯಂತ್ರಣಕ್ಕೆ 4400ಕೋಟಿ ಅನುದಾನ.

11)ಮಹಿಳೆಯರ ವಿವಾಹ ವಯೋಮಿತಿ ನಿರ್ಧಾರಕ್ಕೆ ಹೊಸ ಟಾಸ್ಕ ಪೋರ್ಸ್ .

12)ಹೆಚ್ವಿನ ವಿಷಕಾರಿ ಸೂಸುವ ವಿದ್ಯುತ್ ಘಟಕ ಮುಚ್ಚಲು ನಿರ್ಧಾರ.(ಥರ್ಮಲ್ ಘಟಕಗಳು)

13)ರಾಷ್ಟ್ರೀಯ ಭದ್ರತೆಗೆ ಮೊದಲ ಆಧ್ಯತೆ.

14)ಬೆಂಗಳೂರು ಸಬ್ ಅರ್ಬನ್ ಗೆ ಶೇ 60% ಅನುದಾನ.18,600ಕೋಟಿ

15)ಗೆಜಟೆಡ್ ಏತರ ಹುದ್ದೆಗಳಿಗೆ ಒಂದೇ ಪರೀಕ್ಷೆ.
ಆನ್ ಲೈನ್ ಮೂಲಕ ಸರ್ಕಾರಿ ಪರೀಕ್ಷೆ.

16) ರಾಷ್ಟ್ರೀಯ ನೇಮಕಾತಿ ಸಂಸ್ಥೆ ಸ್ಥಾಪನೆ.

17)ಕಾಶ್ಮೀರಕ್ಕೆ 37 ಸಾವಿರ ಕೋಟಿ ಅನುದಾನ.
ಲಡಾಕ್ ಪ್ರಾಂತ್ಯಕ್ಕೆ 5958 ಕೋಟಿ ಅನುದಾನ.

18)22ಸಾವಿರ ಕೋಟಿ ಇಂಧನ ಇಲಾಖೆಗೆ.

19)2.83 ಕೋಟಿ ಕೃಷಿಗೆ ಮೀಸಲು.

20) 12300 ಕೋಟಿ ಸ್ಪಚ್ಛಭಾರತ್ ಯೋಜನೆಗೆ.

21)3000ಕೋಟಿ ಕೌಶಲ್ಯಾಭಿವೃದ್ಧಿ ಇಲಾಖೆಗೆ.

22)IDBI ಬ್ಯಾಂಕ್ ಸಂಪೂರ್ಣ ಖಾಸಗೀಕರಣ

23)ಠೇವಣಿ ವಿಮೆ ಹಣ ಒಂದುವಲಕ್ಷದಿಂದ ಐದು ಲಕ್ಷಕ್ಕೆ ಏರಿಕೆ.

25)28000 ಕೋಟಿ ಮಹಿಳಾ ಅಭಿವೃದ್ಧಿ .

24)3150 ಕೋಟಿ ಸಂಸ್ಕೃತಿ ಸಚಿವಾಲಯಕ್ಕೆ ಅನುದಾನ.

26)1ಲಕ್ಷ ಗ್ರಾ.ಪಂ ಗಳಿಗೆ ಡಿಜಿಟಲ್ ಸಂಪರ್ಕ .

27)LIC ಬಾಂಡ್ ಗಳ ಮಾರಾಟ ಘೋಷಣೆ ಹಾಗೂ ಖಾಸಗೀಕರಣಕ್ಕೆ ಒತ್ತು.

28)ಸರ್ಕಾರಿ ಸಾಮ್ಯದ ಕಂಪನಿಗಳಿಂದ ಬಂಡವಾಳ ಹಿಂತೆಗೆತ.

29)ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ.

30)2024 ರ ವೇಳೆಯಲ್ಲಿ 100 ಹೊಸ ಏರ್ ಪೋರ್ಟ ಗಳು.
Leave a Reply

Your email address will not be published. Required fields are marked *