BREAKING NEWS
Search

ಮೊಹಮದ್ ಕೈಫ್ ತನ್ನ ತಂಡದ ಆಟಗಾರರ ಬಗ್ಗೆ ಹೇಳಿದ್ದೇನು ಗೊತ್ತಾ?

255

ಗಂಗೂಲಿ ಹಾಗೂ ದ್ರಾವಿಡ್ ಇಬ್ಬರೂ ಭಾರತ ತಂಡದ ಅದ್ಭುತ ಆಟಗಾರರು. ಭಾರತಕ್ಕಾಗಿ ಈ ಇಬ್ಬರು ಆಟಗಾರರು ಮಡಿದ ಸಾಧನೆ ಬಹಳ. ಆದರೆ ದುರದೃಷ್ಟದ ಸಂಗತಿ ಎಂದರೆ ಈ ಇಬ್ಬರೂ ಆಟಗಾರರಿಗೆ ವಿಶ್ವಕಪ್ ಸಿಗಲಿಲ್ಲ ಎನ್ನುವುದು.

ಈ ಆಟಗಾರರಿಗೆ ವಿಶ್ವಕಪ್ ಎತ್ತುವ ಅವಕಾಶವೇ ಸಿಗಲಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮೊಹಮದ್ ಕೈಫ್ ಹೇಳಿದ್ದಾರೆ.

Helo ಲೈವ್ ನಲ್ಲಿ ಮಾತನಾಡಿದ ಅವರು ಸೌರವ್ ಗಂಗೂಲಿ ಭಾರತ ತಂಡ ಕಂಡ ಉತ್ತಮ ನಾಯಕ. ಆದರೆ ಮಹೇಂದ್ರ ಸಿಂಗ್ ಧೋನಿಗೆ ನಾಯಕತ್ವ ಸಿಕ್ಕಿದ್ದು ಅದೃಷ್ಟದ ಬಲದಿಂದ.

ಸೌರವ್ ಗಂಗೂಲಿ ಗೆ ನಾಯಕತ್ವ ಸಿಕ್ಕಾಗ ಭಾರತದ ಪರಿಸ್ಥಿತಿ ಬಹಳ ಗಂಭೀರವಾಗಿತ್ತು. ಸಚಿನ್ ತೆಂಡೂಲ್ಕರ್ ಆಗಸ್ಟ್ ನಾಯಕತ್ವ ತೊರೆದಿದ್ದರು. ಮ್ಯಾಚ್ ಫಿಕ್ಸಿಂ ಹಗರಣದಲ್ಲಿ ಭಾರತ ಒದ್ದಾಡಿತ್ತು. ಈ ವೇಳೆ ಭಾರತ ತಂಡದ ಚುಕ್ಕಾಣಿ ಹಿಡಿದು, ಅದನ್ನು ಮುನ್ನಡೆಸಿದವರು ಸೌರವ್ ಗಂಗೂಲಿ, ಹೀಗಾಗಿ ಧೋನಿ-ಗಂಗೂಲಿ ನಡುವೆ ಗಂಗೂಲಿ ಅತ್ಯುತ್ತಮ ನಾಯಕ ಎನ್ನುವುದು ನನ್ನ ಆಯ್ಕೆ. ಧೋನಿಗೆ ಉತ್ತಮ ಆಟಗಾರರ ಬೆಂಬಲ ಸಿಕ್ಕು ಯಶಸ್ವಿ ಆದವರು ಎಂದು ಕೈಫ್ ಹೇಳಿದರು.

ಭಾರತ ತಂಡದ ಮಾಜಿ ಕೋಚ್ ಗ್ರೆಗ್ ಚಾಪೆಲ್ ಗೆ ಬ್ಯಾಟಿಂಗ್ ಬಗ್ಗೆ ಬಹಳ ತಿಳುವಳಿಕೆ ಇತ್ತು. ಇದರಿಂದ ಬಹಳ ಆಟಗಾರರಿಗೆ ಅನುಕೂಲ ಆಯಿತು.

ಆದರೆ ಟೀಮ್ ಬೆಳೆಸುವುದರಲ್ಲಿ ಹಿಂದೆ ಬಿದ್ದರು. ರೈನಾ ಗೆ ಅನುಕೂಲ ಆಯಿತು, ದಿನೇಶ್ ಕಾರ್ತಿಕ್ ಗೆ ಕೂಡ ಅವಕಾಶ ಸಿಕ್ಕಿತು. ನಾನು ಹೇಳಿದ್ದನ್ನು ಯಾರು ಕೇಳುತ್ತಾರೋ ಅಂತವರನ್ನು ಚಾಪೆಲ್ ಬಹಳ ಇಷ್ಟ ಪಡುತ್ತಿದ್ದರು. ದ್ರಾವಿಡ್ ಅವರು ಚಾಪೆಲ್ ಗೆ ಬಹಳ ಗೌರವ ಕೊಡುತ್ತಿದ್ದರು ಎಂದು ಕೈಫ್ ಹೇಳಿದ್ದಾರೆ.

ಸಚಿನ್ ಬ್ಯಾಟಿಂಗ್ ನೋಡುವುದು ಬಹಳ ಇಷ್ಟ, ಕೊಹ್ಲಿ ಸಿಕ್ಕಾಪಟ್ಟೆ ದಾಖಲೆ ಮಾಡಬಹುದು, ಆದರೆ ತೆಂಡೂಲ್ಕರ್ ಬ್ಯಾಟಿಂಗ್ ನೋಡುವುದು ಬಹಳ ಇಷ್ಟ. ಕಾಪಿ ಬುಕ್ ಶಾಟ್ ಸಚಿನ್ ಅವರದ್ದು ಎಂದು ಕೈಫ್ ಹೇಳಿದ್ದಾರೆ.

ನಾನು ಕವರ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕಾರಣ, ಜಾಸ್ತಿ ಮಾತನಾಡಿ, ಬ್ಯಾಟ್ಸಮನ್ ಗಮನ ಹಾಳುಮಾಡಬೇಕು ಎಂದು ಸೌರವ್ ಗಂಗೂಲಿ ಹೇಳಿದ್ದರು. ನಾನು ಬಹಳ ಮಾತನಾಡುತ್ತಿದ್ದೆ. ಆಗ ಇಂಗ್ಲೆಂಡಿನ ನಾಸಿರ್ ಹುಸೈನ್ ನನ್ನನ್ನು ಬಸ್ ಡ್ರೈವರ್ ಎಂದು ನಿಂದಿಸಿದ್ದರು. ಆದರೆ ನಾನು ನಾಟ್ ವೆಸ್ಟ್ ಮ್ಯಾಚ್ ಗೆಲ್ಲಿಸಿ ಉತ್ತರ ನೀಡಿದೆ.

ಮೊಹಮದ್ ಕೈಫ್ ಮಾತುಗಳು ಹೀಗಿತ್ತು..

ಭಾರತದ ಈಗಿನ ತಂಡದಲ್ಲಿ ಫೀಲ್ಡಿಂಗ್ ವಿಚಾರದಲ್ಲಿ ಬಹಳ ಸುಧಾರಣೆ ಆಗಿದೆ. ಆಗ ಯುವರಾಜ್ ಸಿಂಗ್ ಅದ್ಭುತ ಫೀಲ್ಡಿಂಗ್ ಮಾಡ್ತಿದ್ದರು. ದ್ರಾವಿಡ್ ಸ್ಲಿಪ್ ನಲ್ಲಿ ಉತ್ತಮ ಕ್ಯಾಚರ್ ಎನ್ನಿಸಿದ್ದರು. ಲಕ್ಷ್ಮಣ್ ಇದ್ದರು. ಈಗಿನ ತಂಡದಲ್ಲಿ ವಿರಾಟ್ ಕೊಹ್ಲಿ ಬಹಳ ಒಳ್ಳೆಯ ಫೀಲ್ಡರ್, ನಾಯಕನಾಗಿ ಅವರೇ ಫೀಲ್ಡಿಂಗ್ ಮಾಡುವುದರ ಮೂಲಕ ಎಲ್ಲರನ್ನು ಮುನ್ನಡೆಸುತ್ತಿದ್ದಾರೆ. ರವೀಂದ್ರ ಜಡೇಜಾ ಅದ್ಬುತ ಫೀಲ್ಡರ್, ಜಡೇಜಾಗೆ ವಯಸ್ಸು ಹೆಚ್ಚಾದಂತೆಲ್ಲ ಫೀಲ್ಡಿಂಗ್ ಮತ್ತಷ್ಟು ಚನ್ನಾಗಿ ಆಗುತ್ತಿದೆ. ಸುರೇಶ್ ರೈನಾ ಉತ್ತಮ ಫೀಲ್ಡರ್. ಯುವರಾಜ್ ಸಿಂಗ್ ಬಹಳ ಡೈರೆಕ್ಟ್ ಹಿಟ್ ಮಾಡುತ್ತಿದ್ದರು. ರಾಬಿನ್ ಸಿಂಗ್ ಕೂಡ ಬಹಳ ಉತ್ತಮ ಫೆಲ್ಡರ್ ಆಗಿದ್ದರು. ಎಡಗೈ ಆಗಿರುವ ಕಾರಣ ಯುವರಾಜ್ ಸಿಂಗ್ ಫೀಲ್ಡಿಂಗ್ ಗೆ ಬಹಳ ಅನುಕೂಲ ಆಗುತ್ತಿತ್ತು.

ವಿಶ್ವ ಮಟ್ಟದಲ್ಲಿ ಮಟ್ಟದಲ್ಲಿ ಡೇವಿಡ್ ವಾರ್ನರ್ ಕೂಡ ಉತ್ತಮ ಫೀಲ್ಡರ್. ಸ್ಟೀವ್ ಸ್ಮಿತ್, ಎಬಿಡಿ ವಿಲಿಯರ್ಸ್ ಉತ್ತಮವಾಗಿ ಫೀಲ್ಡಿಂಗ್ ಮಾಡುತ್ತಾರೆ.

ಯುವರಾಜ್ ಸಿಂಗ್ ಸ್ವಲ್ಪ ಎಮೋಷನಲ್ ವ್ಯಕ್ತಿ. ಅವನ ಜೊತೆ ಆದ ಕಥೆಗಳು ಬಹಳ ದಿನಗಳ ಕಾಲ ಉಳಿಯುತ್ತದೆ. ಭಾರತ ತಂಡದಲ್ಲಿ ನಂಬರ್ 5 ಯಾರು ಎನ್ನುವ ಸಮಸ್ಯೆ ಕಾಡುತ್ತಿದೆ. ಧೋನಿ ತಂಡದಲ್ಲಿಲ್ಲ, ಪಂದ್ಯ ಗಾಯಗೊಂಡಿದರೆ. ಇಂತ ಸಮಯದಲ್ಲಿ ಯುವಿ ಅಥವಾ ಸುರೇಶ ರೈನಾ ಬಹಳ ಅಗತ್ಯ. ಫಿನಿಶರ್ ಅಗತ್ಯ. ಕೊಹ್ಲಿಗೂ ಇದು ಅರಿವಾಗಿರಬಹುದು.

ಹಾರ್ದಿಕ್ ಪಾಂಡ್ಯ 6 , 7 ನೇ ಕ್ರಮಾಂಕಕ್ಕೆ ಸೂಕ್ತ. ಪಾಂಡ್ಯ ಬಹಳ ಒಳ್ಳೆಯ ಆಟಗಾರ. ಪಾಂಡ್ಯ ತನ್ನ ಫಿಟ್ನೆಸ್ ಚನ್ನಾಗಿ ಇಟ್ಟುಕೊಂಡರೆ ಬಹಳ ದೀರ್ಘ ಕಾಲ ಆಡಬಲ್ಲರು. ಬುಮ್ರಾ ಕೂಡ ಉತ್ತಮ ಆಟಗಾರ. ಬುಮ್ರಾ ಫಿಟ್ನೆಸ್ ಬಗ್ಗೆ ಬಿಸಿಸಿಐ ಗಮನ ಹರಿಸಬೇಕಿದೆ.

ಇತರರನ್ನು ನೋಡಿ ನೀವು ನಿಮ್ಮನ್ನು ಬದಲಾಯಿಸಿಕೊಳ್ಳಬೇಡಿ, ನಿಮಗೆ ಏನು ಬರುತ್ತದೆಯೋ ಅದರಲ್ಲಿ ಸಾಧನೆ ಮಾಡಿ, ನಿಮ್ಮ ಶಕ್ತಿ ಏನಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ನಿಮ್ಮ ಮೇಲೆ ನೀವು ನಂಬಿಕೆ ಇಟ್ಟುಕೊಳ್ಳಿ. ಚಿಕ್ಕ ನಗರಗಳಿಂದ ಬರುವುದು ಸುಲಭದ ಕೆಲಸವಲ್ಲ

  • ಜಹೀರ್ ಖಾನ್ ಉತ್ತಮ ಬೌಲರ್
  • ಕುಂಬ್ಳೆ ಅತ್ಯುತ್ತಮ ಸ್ಪಿನ್ನರ್, ಕುಂಬ್ಳೆ ದಾಖಲೆ ಅದ್ಭುತ
  • ರಾಹುಲ್ ದ್ರಾವಿಡ್ ಅತ್ಯುತ್ತಮ ಆಟಗಾರ (ಲಕ್ಷ್ಮಣ್). ದ್ರಾವಿಡ್ ಬಹಳ ಬೇರೆ ಲೆವೆಲ್ ಆಟಗಾರ. ಅವರನ್ನು ಏನೆಲ್ಲಾ ಬಳಕೆ ಮಾಡಿಕೊಳ್ಳಲಾಯಿತು.
  • ಜಾನ್ ರೈಟ್ ಅತ್ಯುತ್ತಮ ಕೋಚ್ (ಚಾಪೆಲ್)
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ