BREAKING NEWS
Search

ಅವಕಾಶ ಕೊಡಿ ಉಚಿತವಾಗಿ ಆಡಲು ಸಿದ್ದ- ಶ್ರೀಶಾಂತ್

367

ಕನ್ನಡವಾಣಿ ನ್ಯೂಸ್ ಡೆಸ್ಕ:- ಅವಕಾಶ ಕೊಡಿ, ಉಚಿತವಾಗಿ ಆಡಲು ಸಿದ್ಧ ಇನ್ನೈದು ವರ್ಷ ಕ್ರಿಕೆಟ್‌ ಆಡುತ್ತೇನೆ ಹಾಗೂ ಮತ್ತೆ ಟೀಂ ಇಂಡಿಯಾಕ್ಕೆ ಬಂದು ಕೊಹ್ಲಿ, ರೋಹಿತ್‌, ರಾಹುಲ್‌ ಜತೆ ಡ್ರೆಸ್ಸಿಂಗ್‌ ರೂಮ್‌ ಹಂಚಿಕೊಳ್ಳುತ್ತೇನೆ. ಅವಕಾಶ ಕೊಟ್ಟರೆ ಉಚಿತವಾಗಿ ಐಪಿಎಲ್‌ ಆಡಲು ಕೂಡ ತಯಾರಿದ್ದೇನೆ. ಒಟ್ಟಾಗಿ ಮತ್ತೆ ನನಗೆ ವೃತ್ತಿಪರ ಕ್ರಿಕೆಟಿಗೆ ಬರಬೇಕಿದೆ ಎಂದು ಕೇರಳ ವೇಗಿ ಎಸ್‌ ಶ್ರೀಶಾಂತ್‌ ಶಪಥ ಮಾಡಿದ್ದಾರೆ.

Helo ಲೈವ್‌ನಲ್ಲಿ ಭಾಗವಹಿಸಿದ್ದ ಶ್ರೀಶಾಂತ್‌, ಕ್ರಿಕೆಟ್‌ ಮರು ಪ್ರವೇಶದ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದು, ಈಗಾಗಲೇ ಕೇರಳ ತಂಡದ ತರಬೇತಿಯಲ್ಲಿ ಭಾಗಿಯಾಗುತ್ತಿದ್ಧೇನೆ. ಸೆಪ್ಟೆಂಬರ್‌ನಲ್ಲಿ ರಣಜಿ ಹಾಗೂ ನಂತರ ಇರಾನಿ ಟ್ರೋಫಿಯಲ್ಲಿ ಕೇರಳಕ್ಕೆ ಗೆಲುವು ದೊರಕಿಸಿಕೊಡುವುದು ನನ್ನ ಪ್ರಾಥಮಿಕ ಉದ್ದೇಶ. ನಂತರ ಭಾರತ ತಂಡದ ಪರ ಆಡಿ ನನ್ನ ಶಕ್ತಿ ತೋರಿಸಬೇಕು. ನನ್ನ ಛಲ ಹಾಗೂ ಹಠ ಬಿಡುವುದಿಲ್ಲ ಎಂದು ಶ್ರೀಶಾಂತ್‌ ಮನಬಿಚ್ಚಿ ಮಾತನಾಡಿದ್ದಾರೆ.

ರಾಹುಲ್‌ ಭವಿಷ್ಯದ ನಾಯಕ
ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಬಳಿಕ ಕರ್ನಾಟಕದ ಕೆ ಎಲ್‌ ರಾಹುಲ್‌ ಟೀಂ ಇಂಡಿಯಾದ ನಾಯಕರಾಗಬಹುದು. ಅವರಲ್ಲಿ ಕ್ರಿಕೆಟ್‌ ಬಗೆಗಿನ ಆಸಕ್ತಿ ಹಾಗೂ ಶಿಸ್ತು ನನಗೆ ಖುಷಿ ಕೊಟ್ಟಿದೆ. ಕ್ರಿಕೆಟ್‌ ಆಟವನು ಅವರು ಪ್ರೀತಿಸುವ ಪರಿ ಅದ್ಭುತ ಎಂದು ಕನ್ನಡಿಗನ ಬಗ್ಗೆ ಶ್ರೀಶಾಂತ್‌ ವಿಶೇಷ ಮಾತು ಹೇಳಿದ್ದಾರೆ.
ಯಾವುದೇ ಮಾದರಿ ಕ್ರಿಕೆಟ್‌ ಇರಲಿ, ಅವರ ಆಟ ಅತ್ಯದ್ಭುತ. ಹಾಗೆಯೇ ಅವರ ಶಿಸ್ತು ಕೂಡ ಮೆಚ್ಚುವಂಥದ್ದು.

ಕೊಹ್ಲಿ ರೀತಿಯೇ ಆಟದ ಬಗ್ಗೆ ಶ್ರದ್ಧೆ ಇದೆ. ವೈಯಕ್ತಿಕ ದಾಖಲೆಗಿಂತ ತಂಡದ ಪರವಾಗಿ ಆಡುವ ಗುಣವಿದೆ. ಶತಕದಂಚಿನಲ್ಲಿದ್ದರೂ ತಂಡಕ್ಕೆ ಸಿಕ್ಸ್‌ ಬೇಕಿದ್ದರೆ ಸಿಕ್ಸ್‌ ಭಾರಿಸಲು ಹಿಂದೆ ಮುಂದೆ ನೋಡುವುದಿಲ್.‌ ಇಂತಹ ಆಟಗಾರರಿಂದಲೇ ತಂಡ ಬೆಳೆಯುತ್ತದೆ. ಅದಲ್ಲದೇ ವಿಕೆಟ್‌ ಕೀಪಿಂಗ್‌ ಮಾಡಿಯೂ ಶತಕ ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ.

ಇದು ನಾವು ಗಮನಿಸಬೇಕಾದ ವಿಚಾರ. ಕೊಹ್ಲಿ ಜತೆಗಿದ್ದು ಈಗಾಗಲೇ ಕ್ರಿಕೆಟ್‌ನ್ನು ತುಂಬಾ ಅರ್ಥ ಮಾಡಿಕೊಂಡಿದ್ದಾರೆ. ತಮ್ಮ ಪ್ರದರ್ಶನದ ಮೂಲಕವೇ ತಂಡದಲ್ಲಿ ಸ್ಥಾನ ಗಟ್ಟಿಮಾಡಿಕೊಂಡ ಆಟಗಾರ ಇವರು ಎಂದು ಹೊಗಳಿಕೆಯ ಮಹಾಪೂರ ಹರಿಸಿದ್ದಾರೆ

ರಾಹುಲ್‌, ರೋಹಿತ್‌ ತ್ರಿಶತಕ!

ಏಕದಿನ ಕ್ರಿಕೆಟ್‌ ಪಂದ್ಯಗಳಲ್ಲಿ ಇನು ತ್ರಿಶತಕ ಬಂದರೂ ಆಶ್ಚರ್ಯವಿಲ್ಲ. ಕನ್ನಡಿಗ ಕೆ ಎಲ್‌ ರಾಹುಲ್‌ ಹಾಗೂ ರೋಹಿತ್‌ ಶರ್ಮಾ ಈ ದಾಖಲೆ ಮಾಡಬಹುದು. ಇಂಗ್ಲೆಂಡಿನ ಬೆನ್‌ ಸ್ಟೋಕ್ಸ್‌ ಮೊದಲೇ ಬ್ಯಾಟಿಂಗ್‌ ಬಂದರೇ ಅವರಿಂದಲೂ ಸಾಧ್ಯ ಎಂದು ಹೇಳಿದ್ದಾರೆ.
Leave a Reply

Your email address will not be published. Required fields are marked *