ಚಿನ್ನ,ಬೆಳ್ಳಿ ದರದಲ್ಲಿ ಇಳಿಕೆ-ಕೊಂಡುಕೊಳ್ಳುವವರಿಗೆ ಇದು ಸಕಾಲ

889

ಕೈಗೆಟುಕದ ಬಂಗಾರ,ಬೆಳ್ಳಿಯ ಬೆಲೆ ಈ ವರ್ಷದ ಮಾರ್ಚ್ ನಿಂದ ಸೆಪ್ಟೆಂಬರ್ 26, 2020ಕ್ಕೆ ಕೊನೆಯಾದ ವಾರದಲ್ಲಿ ಚಿನ್ನ ಹಾಗೂ ಬೆಳ್ಳಿ ಅತಿ ದೊಡ್ಡ ಪ್ರಮಾಣದ ವಾರದ ಇಳಿಕೆ ದಾಖಲಿಸಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಈ ವಾರ 4.4% ಬೆಲೆ ಇಳಿಕೆ ಆಗಿದ್ದು ಬೆಳ್ಳಿಯ ದರದಲ್ಲಿ 15% ದರ ಇಳಿದಿದೆ.

ಇಳಿಕೆಗೆ ಕಾರಣವಾಗಿದ್ದು ಯುಎಸ್ ಡಾಲರ್ ನಲ್ಲಿ ಗಳಿಕೆ. ಏಪ್ರಿಲ್ ನಿಂದ ಈಚೆಗೆ ಯುಎಸ್ ಡಾಲರ್ ಮೌಲ್ಯವು ಅತುತ್ತಮ ಗಳಿಕೆ ಕಂಡ ವಾರವಾಗಿತ್ತು.

ಹೂಡಿಕೆದಾರರಿಗೆ ಚಿನ್ನ ಹಾಗೂ ಬೆಳ್ಳಿ ಫೇವರಿಟ್ ಆಗಿದೆ. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಅನಿಶ್ಚಿತತೆ ತಲೆದೋರಿರುವಾಗ ಹೂಡಿಕೆದಾರರು ಯುಎಸ್ ಡಾಲರ್ ಕಡೆಗೆ ವಾಲಿದ್ದಾರೆ.

ಯುಎಸ್ ಆರ್ಥಿಕ ಉತ್ತೇಜನದ ಅನಿಶ್ಚಿತತೆ
ಬೇರೆ ಕರೆನ್ಸಿಗಳನ್ನು ಬಳಸಿ ಚಿನ್ನದ ವ್ಯವಹಾರ ಮಾಡಬೇಕು ಅಂದರೆ ಅದು ಕೂಡ ದುಬಾರಿ ಎನ್ನುವಂತೆ ಮಾಡಿದೆ ಯುಎಸ್ ಡಾಲರ್.

ಯುರೋಪ್ ನಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು, ಹೆಚ್ಚುವರಿ ಆರ್ಥಿಕ ಉತ್ತೇಜನದ ಬಗ್ಗೆ ಯುಎಸ್ ಸರ್ಕಾರದ ಅನಿಶ್ಚಿತತೆಯಿಂದಾಗಿ ಹೂಡಿಕೆದಾರರ ಭರವಸೆಗೆ ಬಿದ್ದಿರುವ ಪೆಟ್ಟಿನಿಂದಾಗಿ ಡಾಲರ್ ಮೌಲ್ಯವನ್ನು ಹೆಚ್ಚಿಸಿದೆ.

ಹೀಗಾಗಿ ಭಾರತದಲ್ಲಿ ಪ್ರತಿ 10 ಗ್ರಾಮ್ ಗೆ 49,659 ರು.ನಂತೆ ವಹಿವಾಟು ನಡೆದಿದೆ.

ಇನ್ನು ಸ್ಪಾಟ್ ಚಿನ್ನ 0.3% ಇಳಿಕೆ ಕಂಡು, ಪ್ರತಿ ಔನ್ಸ್ ಗೆ (28.3495) $ 1861.58ರಂತೆ ವಹಿವಾಟು ನಡೆಸಿತು. ಭಾರತದಲ್ಲಿ ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್ (ಎಂಸಿಎಕ್ಸ್) ಚಿನ್ನದ ಫ್ಯೂಚರ್ಸ್ 0.5% ಇಳಿಕೆಯಾಗಿ, ಪ್ರತಿ 10 ಗ್ರಾಮ್ ಗೆ 49,659 ರುಪಾಯಿಯಂತೆ ವಹಿವಾಟು ನಡೆಸಿತು.

ಚಿನ್ನದ ಬೆಲೆ ಇಳಿಕೆ ತಾತ್ಕಾಲಿಕವೇ?

ತಜ್ಞರು ಹೇಳುವಂತೆ, ಚಿನ್ನದ ಬೆಲೆ ಇಳಿಕೆ ತಾತ್ಕಾಲಿಕ. ಅದು ಯುಎಸ್ ಅಧ್ಯಕ್ಷೀಯ ಚುನಾವಣೆ ಬಗೆಗಿನ ಅನಿಶ್ಚಿತತೆ ಇಂಥದ್ದೊಂದು ವಾತಾವರಣ ಸೃಷ್ಟಿಸಿದೆ. ಆದರೆ ಇತಿಹಾಸವನ್ನು ಗಮನಿಸಿ ನೋಡಿದರೆ, ಬೌಗೋಳಿಕ ರಾಜಕೀಯ ಹಾಗೂ ಆರ್ಥಿಕ ಅನಿಶ್ಚಿತತೆಯಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿರುವುದೇ ಕಂಡುಬರುತ್ತದೆ.

ಹೀಗಾಗಿ ಸದ್ಯ ಚಿನ್ನ ಕೊಳ್ಳಬೇಕೆನ್ನುವವರು ಶೀಘ್ರವೇ ಕೊಂಡಲ್ಲಿ ಲಾಭ ಸಿಗೋದ್ರಲ್ಲಿ ಅನುಮಾನವಿಲ್ಲ.
Leave a Reply

Your email address will not be published. Required fields are marked *