ಡ್ರೈವಿಂಗ್ ಪರೀಕ್ಷೆ ಇಲ್ಲದೆ ಇನ್ಮುಂದೆ ಡಿ.ಎಲ್ |ಕೇಂದ್ರದಿಂದ ಕರಡು ಅಧಿಸೂಚನೆ ಪ್ರಕಟ.

2164

ನವದೆಹಲಿ: ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆ, ಅಥಾವ ವಾಹನ ಚಾಲನೆಗೆ ಅನುಮತಿ ನೀಡುವ ವೇಳೇಯಲ್ಲಿ ಇರುವ ಅಡೆತಡೆಗಳನ್ನು ನಿವಾರಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಈನಿಟ್ಟಿನಲ್ಲಿ ಸರ್ಕಾರ ಹೊಸ ವ್ಯವಸ್ಥೆಯನ್ನು ರೂಪಿಸಲಿದೆ ಎನ್ನಲಾಗಿದೆ. ಆರ್‌ಟಿಓ ಕಚೇರಿಗಳಲ್ಲಿ ಡ್ರೈವಿಂಗ್ ಲೈಸೆನ್ಸ್ (ಡಿಎಲ್) ಪಡೆಯಬೇಕಾದ್ರೆ, ಹಲವು ಹಂತಗಳನ್ನು ದಾಟಿಕೊಂಡು, ಹಣವನ್ನು ನಿಗದಿತ ಪ್ರಮಾಣಕ್ಕಿಂತ ಬ್ರೋಕರ್ ಗಳಿಗೂ ಸೇರಿ ಹೆಚ್ಚಾಗಿ ತೆತ್ತು, ಹಲವಾರು ದಿನಗಳ ಕಾಲ ಕಾಯಬೇಕಾದ ಸನ್ನಿವೇಶವಿದ್ದು, ಇದರಿಂದ ಜನತೆಯಲ್ಲಿ ಬೇಸರ ಉಂಟು ಮಾಡುತ್ತದೆ.

ಆರ್‌ಎಲ್‌.ಎಲ್‌ಎಲ್‌. ಡಿಎಲ್‌,ಬ್ಯಾಡೆಜ್‌ಗಳನ್ನು ಪಡೆದಬೇಕಾದ್ರೆ ಇನ್ನಿಲ್ಲದ ಕಸರತ್ತನು ಸಾರಿಗೆ ಇಲಾಖೆಯಲ್ಲಿ ಮಾಡಬೇಕಾಗಿದೆ.

ಇದಕ್ಕಾಗಿ ದೇಶದಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ನಾಗರಿಕರಿಗೆ ಗುಣಮಟ್ಟದ ಡ್ರೈವರ್ ತರಬೇತಿ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ವರ್ಷಾಂತ್ಯದೊಳಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಚಾಲನಾ ತರಬೇತಿ ಕೇಂದ್ರಗಳಿಗೆ ಮಾನ್ಯತೆ ಪ್ರಮಾಣಪತ್ರ ಗಳನ್ನು ನೀಡಲು ಮುಂದಾಗಿದೆ.

ಈ ಕೇಂದ್ರಗಳಲ್ಲಿ ಯಶಸ್ವಿ ಚಾಲನಾ ತರಬೇತಿ ಪಡೆಯುವವರಿಗೆ ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸುವಾಗ ಚಾಲನಾ ಪರೀಕ್ಷೆಯ ಅಗತ್ಯದಿಂದ ವಿನಾಯಿತಿ ನೀಡಲಾಗುವುದು.

ಆದರೆ, ಕೆಲವು ಮಾನದಂಡಗಳನ್ನು ಸಾಧಿಸಿದ ನಂತರ ಅಂತಹ ಸಂಸ್ಥೆಗಳು ಅಥವಾ ತರಬೇತಿ ಕೇಂದ್ರಗಳಿಗೆ ಪ್ರಮಾಣಪತ್ರಗಳನ್ನು ಒದಗಿಸಲಾಗುವುದು.

ರಸ್ತೆ ಅಪಘಾತಗಳಲ್ಲಿ ಸಾವಿರಾರು ಜೀವಗಳನ್ನು ಉಳಿಸಲು, ವಾಹನ ಚಾಲನೆಯ ಉತ್ಕೃಷ್ಟತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಕ್ರಮ ಕೈಗೊಂಡಿದೆ.

ಈ ಸಂಬಂಧ ಚಾಲನಾ ತರಬೇತಿ ಕೇಂದ್ರಗಳ ಮಾನ್ಯತೆ ಗೆ ಸಂಬಂಧಿಸಿದಂತೆ ಸಚಿವಾಲಯವು ಕರಡು ಅಧಿಸೂಚನೆಹೊರಡಿಸಿದೆ.

ಅಂತಹ ತರಬೇತಿ ಕೇಂದ್ರಗಳು ಮಾನ್ಯತೆ ನೀಡುವ ಮುನ್ನ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರವಾದ ಅಗತ್ಯಗಳನ್ನು ಸಚಿವಾಲಯ ಪ್ರಸ್ತಾಪಿಸಿದೆ’ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ತರಬೇತಿ ಕೇಂದ್ರಗಳಿಂದ ಚಾಲನಾ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಯಾವುದೇ ವ್ಯಕ್ತಿಯು ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸುವಾಗ ಚಾಲನಾ ಪರೀಕ್ಷೆಯ ಅಗತ್ಯದಿಂದ ವಿನಾಯಿತಿ ನೀಡಲಾಗುತ್ತಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!