20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ ಪ್ರಧಾನಿ ಮೋದಿ

1453

ನವದೆಹಲಿ: ಕೊರೋನಾ ಸಂಕಷ್ಟದ ಹೊತ್ತಲ್ಲಿ ಪ್ರಧಾನಿ ಮೋದಿ ದೇಶದ ಜನರನ್ನುದ್ದೇಶಿಸಿ 5 ನೇ ಬಾರಿಗೆ ಭಾಷಣ ಮಾಡಿದ್ದಾರೆ.

ಕೃಷಿ ಕ್ಷೇತ್ರದ ಮೇಲೆ ಕೊರೋನಾ ಪರಿಣಾಮ ಬೀರಿದೆ. ಎಲ್ಲವೂ ಬಂದ್ ಇದ್ದಾಗಲೂ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. 20 ಲಕ್ಷ ಕೋಟಿ ರೂಪಾಯಿ ಮೌಲ್ಯದ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಸ್ವಾವಲಂಬಿ ಭಾರತಕ್ಕಾಗಿ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಬದಲಾವಣೆಗಳು ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ. ಮಧ್ಯಮವರ್ಗಕ್ಕೆ ಅನುಕೂಲವಾಗಲಿದೆ. 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದು ಪ್ಯಾಕೇಜ್ ಬಗ್ಗೆ ಹಂತಹಂತವಾಗಿ ಮಾಹಿತಿ ನೀಡಲಾಗುವುದು. ಸರ್ಕಾರ ನೀಡುವ ಪ್ರತಿ ಪೈಸೆಯೂ ಬಡವರು ರೈತರಿಗೆ ಸಿಗಲಿದೆ. ಶ್ರಮಿಕರು ರೈತರಿಗೆ ಹಗಲಿರುಳು ದುಡಿಯುವವರಿಗೆ ಮಧ್ಯಮವರ್ಗಕ್ಕೆ ಪ್ಯಾಕೇಜ್ ನಿಂದ ಅನುಕೂಲವಾಗಲಿದೆ.

ಬಡವರ ರೈತರ ಜೇಬಿಗೆ ನೇರವಾಗಿ ಹಣ ಬೀಳಲಿದೆ. ಆರ್ಥಿಕ ಪ್ಯಾಕೇಜ್ ಬಗ್ಗೆ ನಾಳೆ ಹಣಕಾಸು ಸಚಿವರು ವಿವರಣೆ ನೀಡಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.
Leave a Reply

Your email address will not be published. Required fields are marked *