BREAKING NEWS
Search

ಗೂಗಲ್‌ನಿಂದ ರೈಲು ಪ್ರಾಯಾಣಿಕರಿಗೆ ಕಹಿ ಸುದ್ದಿ.! ಇನ್ನುಮುಂದೆ ಸಿಗೋದಿಲ್ಲ ಉಚಿತ ವೈಫೈ!

206

ನವದೆಹಲಿ : ರೈಲು ನಿಲ್ದಾಣಗಳಲ್ಲಿ ಗೂಗಲ್ ನೀಡುತಿದ್ದ ಉಚಿತ ವೈಫೈ ಸೌಲಭ್ಯ ಇನ್ಮುಂದೆ ಪ್ರಯಾಣಿಕರಿಗೆ ಸೇವೆ ಸ್ಥಗಿತ ಗೊಳಿಸುತ್ತಿದೆ.

ದೇಶದ ಹಲವು ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ ಸ್ಥಗಿತದ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಗೂಗಲ್ ರೈಲು ವಿಭಾಗಕ್ಕೆ ನೀಡುತ್ತಿದ್ದ ಉಚಿತ ವೈಫೈ ವ್ಯವಸ್ಥೆ ರದ್ದು ಮಾಡಿರುವುದಾಗಿ ಹೇಳಿದೆ.

ಭಾರತದಲ್ಲಿ ನೀಡಲಾಗುತ್ತಿರುವ ಅಗ್ಗದ ದರದ ಡೇಟಾ ಸೇವೆಗಳ ಕಾರಣ ಫ್ರೀ ವೈಫೈ ಸೇವೆಯಿಂದ ಕಂಪನಿಗೆ ಹೆಚ್ಚಿನ ಲಾಭ ಬರುತ್ತಿಲ್ಲ ,ಈ ಹಿನ್ನಲೆ ರೈಲ್ವೆ ಇಲಾಖೆಯೊಂದಿಗೆ ಒಪ್ಪಂದ ರದ್ದು ಮಾಡಿಕೊಂಡಿದೆ ಎಂದು ಗೂಗಲ್ ಹೇಳಿಕೊಂಡಿದೆ.

ಪ್ರಯಾಣಿಕನೊರ್ವ ವೈಫೈ ಬಳಕೆ ಮಾಡಿ ಗೂಗಲ್ ಸೇವೆಗೆ ಲಾಗಿನ್ ಆಗುವಾಗ ಜಾಹೀರಾತುಗಳನ್ನು ನೀಡಿ ಗೂಗಲ್ ತನ್ನ ಹೂಡಿಕೆಯ ಹಣ ವಸೂಲಿ ಮಾಡುತ್ತಿತ್ತು. ಆದರೆ, ಇದೀಗ ಮೊಬೈಲ್ ಸೇವೆ ಒದಗಿಸುವ ಕಂಪನಿಗಳು ಭಾರತದಲ್ಲಿ ಅಗ್ಗದ ದರದಲ್ಲಿ ಇಂಟರ್ನೆಟ್ ಸೇವೆಗಳನ್ನು ಒದಗಿಸುತ್ತಿವೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಸ್ಟೇಷನ್ ಗಳ ಮೇಲೆ ಲಭ್ಯವಿರುವ ಉಚಿತ ವೈಫೈ ಸೇವೆಯ ಬಳಕೆಯನ್ನು ಮಾಡುತ್ತಿಲ್ಲ. ಹೀಗಾಗಿ ಕಡಿಮೆ ಬಳಕೆದಾರರು ಈ ಸೇವೆಯನ್ನು ಬಳಸುತ್ತಿರುವ ಕಾರಣ ತಾನು ಈ ಸೇವೆಯಿಂದ ಹಿಂದೆ ಸರಿಯುತ್ತಿರುವುದಾಗಿ ಗೂಗಲ್ ಹೇಳಿದೆ. ಸದ್ಯ ದೇಶದ ಸುಮಾರು 415 A1, A ಹಾಗೂ C ಶ್ರೇಣಿಯ ರೈಲು ನಿಲ್ದಾಣಗಳಲ್ಲಿ ಗೂತಲ್ ತನ್ನ ಉಚಿತ ವೈಫೈ ಸೇವೆ ಒದಗಿಸುತ್ತಿದೆ.

ಗೂಗಲ್‌ನ ಈ ನಿರ್ಧಾರದ ಬಳಿಕ ಭಾರತೀಯ ರೇಲ್ವೆಯಡಿ ಕಾರ್ಯನಿರ್ವಹಿಸುವ ರೈಲ್ ಟೈಲ್ ಸಂಸ್ಥೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಗೂಗಲ್ ಬದಲಿಗೆ ತಾನು ಸೇವೆ ನೀಡುವುದಾಗಿ ಹೇಳಿದೆ. ಈಗಾಗಲೇ 5600 ನಿಲ್ದಾಣಗಳಲ್ಲಿ ರೈಲ್ ಟೈಲ್ ಸೇವೆ ನೀಡುತ್ತಿದ್ದು ಗೂಗಲ್ ಸೇವೆ ನೀಡುತ್ತಿದ್ದ ನಿಲ್ದಾಣಗಳಗೆ ವಿಸ್ತರಿಸುವುದಾಗಿ ಅದು ಹೇಳಿದೆ.




Leave a Reply

Your email address will not be published. Required fields are marked *