add

ರೈಲು ಪ್ರಯಾಣಕ್ಕೂ ಮುನ್ನ ಈ ನಿಯಮಗಳು ಪಾಲಿಸಬೇಕು ಏನು ನಿಯಮ ಗೊತ್ತಾ?

780

ನವದೆಹಲಿ : ದೇಶದ್ಯಾಂತ ಪ್ರಮುಖ ಹದಿನೈದು ನಗರಗಳಿಗೆ ಸೀಮಿತ ರೈಲು ಸಂಚಾರ ಪುನಾರಂಭವಾದ ಬೆನ್ನೆಲೆ ಕೇಂದ್ರ ಗೃಹ ಇಲಾಖೆ ಪ್ರಯಾಣದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಇಂದು ಸಂಜೆ ನಾಲ್ಕು ಗಂಟೆಯಿಂದ ಬುಕ್ಕಿಂಗ್ ಆರಂಭವಾಗಿದ್ದು ಅದಕ್ಕೂ ಮುನ್ನ ಪ್ರಯಾಣದ ನಿಯಮಗಳನ್ನು ಬಿಡುಗಡೆ ಮಾಡಲಾಗಿದೆ. ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿಗಳ ಪ್ರಕಾರ ಟಿಕೇಟ್ ಕನ್ಪರ್ಮ್ ಆದವರಿಗೆ ಮಾತ್ರ ರೈಲ್ವೆ ಸ್ಟೇಷನ್ ಪ್ರವೇಶ ಮತ್ತು ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.

ಪ್ರಯಾಣಕ್ಕೂ ಮುನ್ನ ರೈಲ್ವೆ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಒಳಪಡಬೇಕು ಸೋಂಕಿನ ಗುಣಲಕ್ಷಣಗಳು ಖಚಿತಪಡಿಸಿಕೊಳ್ಳಬೇಕು,‌ರೋಗದ ಗುಣಲಕ್ಷಣಗಳು ಇಲ್ಲದ ವ್ಯಕ್ತಿಗಳಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲು ಸೂಚಿಸಲಾಗಿದೆ.

ಪ್ರಯಾಣ ಆರಂಭಕ್ಕೂ ಮುನ್ನ ಮತ್ತು ಅಂತ್ಯದ ವೇಳೆ ಸ್ವಾನಿಟೈಜಿಂಗ್ ಕಡ್ಡಾಯವಾಗಿ ಮಾಡಿಕೊಳ್ಳಬೇಕು, ಸ್ಯಾಜಿಟೈಜ್ ಜೊತೆಗಿಟ್ಟುಕೊಳ್ಳುವುದು ಉತ್ತಮ ಎಂದು ಗೃಹ ಇಲಾಖೆ ಹೇಳಿದೆ. ಪ್ರಯಾಣದ ಅವಧಿಯಲ್ಲಿ ಫೇಸ್ ಮಾಸ್ಕ್ ಮತ್ತು ಮಾಸ್ಕ್ ಕಡ್ಡಾಯ ಎಂದು ಸಾರ್ವಜನಿಕರಿಗೆ ತಿಳಿಸಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ