BREAKING NEWS
Search

ಐ.ಎನ್ .ಎಸ್ ವಿಕ್ರಮಾದಿತ್ಯ ನೋಡೋದನ್ನು ಮಿಸ್ ಮಾಡಿಕೊಂಡ್ರಾ? ಹಾಗಿದ್ರೆ ಈ ವಿಡಿಯೋ ನೋಡಿ

1373

ವಿಕ್ರಮಾದಿತ್ಯ ಹಡಗಿನ ಒಳನೋಟದ ವಿಡಿಯೋ ನೋಡಿ:-

ಕಾರವಾರ:- ನೌಕಾ ದಿನದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದಂಬ ನೌಕಾನೆಲೆಯಲ್ಲಿ ದೇಶದ ಅತಿದೊಡ್ಡ ಯುದ್ಧ ವಿಮಾನ ವಾಹಕ ನೌಕೆ ವೀಕ್ಷಣೆಗೆ ಭಾರತೀಯ ನೌಕಾ ದಳ ಇಂದು ಅವಕಾಶ ಮಾಡಿಕೊಟ್ಟಿತ್ತು.

ಇಂದು ಬೆಳಗ್ಗೆ 10 ಘಂಟೆಯಿಂದ ಸಂಜೆ 5 ಘಂಟೆ ವರೆಗೆ ಕಾರವಾರದ ಕದಂಬ ನೌಕಾ ನೆಲೆಯಲ್ಲಿ ಐ.ಎನ್.ಎಸ್ ವಿಕ್ರಮಾದಿತ್ಯ ಹಡಗಿನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.

ಕದಂಬ ನೌಕಾನೆಲೆಯಲ್ಲಿ ಕಿಕ್ಕಿರಿದು ತುಂಬಿದ ಜನಸ್ತೋಮ

ಈ ಹಿನ್ನಲೆಯಲ್ಲಿ ರಾಜ್ಯ,ಹೊರ ರಾಜ್ಯದಿಂದಲೂ ವಿಕ್ರಮಾದಿತ್ಯ ಹಡಗನ್ನು ವೀಕ್ಷಣೆಗಾಗಿ ಅರಗಾ ಗ್ರಾಮದ ಕದಂಬ ನೌಕಾನೆಲೆಯಲ್ಲಿ ಸಾವಿರಾರು ಜನರು ಸೇರಿದ್ದರು‌.

ಬೆಳಗ್ಗೆಯಿಂದ ಕಿಕ್ಕಿರಿದು ತುಂಬಿದ್ದ ಜನರಿಗೆ ವಿಕ್ರಮಾದಿತ್ಯ ಹಡಗನ್ನು ನೋಡುವ ಭಾಗ್ಯ ದೊರೆತರೆ ಮಧ್ಯಾನದ ನಂತರ ವೀಕ್ಷಕರ ಸಂಖ್ಯೆ ಹೆಚ್ಚಾದ್ದರಿಂದ ಭದ್ರತೆ ದೃಷ್ಠಿಯಿಂದ ಬಂದ್ ಮಾಡಲಾಯಿತು.

ಇದರಿಂದಾಗಿ ರಾಜ್ಯ ಹಾಗೂ ಹೊರ ರಾಜ್ಯದಿಂದ ವೀಕ್ಷಣೆಗಾಗಿ ಬಂದಿದ್ದ ಜನರಿಗೆ ನಿರಾಸೆಯಾಗಿ ಹಿಂತಿರುಗುವಂತಾಯ್ತು.

ವಿಕ್ರಮಾದಿತ್ಯ ಹಡಗಿನ ವಿಶೇಷವೇನು ಗೊತ್ತಾ?

ವಿಕ್ರಮಾದಿತ್ಯ ಹಡಗಿನ ಮೇಲ್ಭಾಗ.

1978 ರಲ್ಲಿ ಈ ಹಡಗು ನಿರ್ಮಾಣಗೊಂಡು ರಷ್ಯಾದ ನೌಕಾನೆಲೆಯಲ್ಲಿ ಸೇವೆ ಸಲ್ಲಿಸಿ ನಂತರ 1996 ರಲ್ಲಿ ಇದಕ್ಕೆ ನಿವೃತ್ತಿ ನೀಡಲಾಯಿತು.
ನಂತರ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರವರು 2004 ರಲ್ಲಿ ಒಪ್ಪಂದದ ಮೂಲಕ 97.4 ಕೋಟಿ ರೂಗಳನ್ನು ನೀಡಿ ಕರೀದಿಸಲು ಮಾತುಕತೆ ನಡೆದಿತ್ತು.ಇದೇ ಸಂದರ್ಭದಲ್ಲಿ ಇದರ ನವೀಕರಣ ನಡೆಸಿ ರಷ್ಯಾದ ಹೆಚ್ಚುವರಿ ಬೇಡಿಕೆ 2014ರಲ್ಲಿ ಯು.ಪಿಯೆ ಒಪ್ಪಿದ ಮೊತ್ತ. 235 ಕೋ.ಡಾಲರ್, (10,575 ಕೋ.ರೂಪಾಯಿ 2010ರ ದರದಲ್ಲಿ) ನವೀಕರಣ ನಂತರ ಕರೀದಿಸಲಾಯಿತು.
2013ರ ನವೆಂಬರ್‌ನಲ್ಲಿ ಭಾರತೀಯ ನೌಕಾಪಡೆ ಸೇವೆಗೆ ಸಮರ್ಪಿಸಲಾಗಿದೆ.
44,500 ಟನ್ ತೂಕ,284 ಮೀಟರ್ ಉದ್ದ
60 ಮೀಟರ್ ಎತ್ತರ,34 ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಹೊರುವ ಸಾಮರ್ಥ್ಯ ಇದಕ್ಕಿದೆ.

1,600 ಸಿಬ್ಬಂದಿಗಳು ,22 ನೌಕೆಯ ಅಂತಸ್ತುಗಳು
13,000 ಕಿ.ಮೀ.ಒಮ್ಮೆ ಇಂಧನ ಭರ್ತಿಯಾದರೆ ನೌಕೆ ಕ್ರಮಿಸುವ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದ್ದು ಅರಬ್ಬಿ ಸಮುದ್ರದ ಗಡಿಯಲ್ಲಿ ಕಾವಲುಗಾರನಾಗಿ ಸೇವೆ ಸಲ್ಲಿಸುತ್ತಿದ್ದು ಕಾರವಾರದ ಕದಂಬ ನೌಕಾ ನೆಲೆ ಇದರ ತಂಗುದಾಣವಾಗಿದೆ.
Leave a Reply

Your email address will not be published. Required fields are marked *