ಬ್ಯಾಡ್ಮಿಂಟನ್-ಶಿರಸಿಯ ಪ್ರೇರಣಾ ವಿಶ್ವ ಚಾಂಪಿಯನ್

648

ಕಾರವಾರ :- ಫ್ರಾನ್ಸ್ ನಲ್ಲಿ ನಡೆಯುತ್ತಿರುವ 19 ವರ್ಷ ವಯೋಮಿತಿ ಒಳಗಿನವರ ಇಂಟರನ್ಯಾಶನಲ್ ಸ್ಕೂಲ್ ಫೆಡರೇಶನ್ ಗೇಮ್ಸ್ ನ ಬ್ಯಾಂಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಶಿರಸಿಯ ಪ್ರೇರಣಾ ಶೇಟ್ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ.

ಇಂದು ನಡೆದ ಫೈನಲ್ ಪಂದ್ಯದಲ್ಲಿ ತೈಪೆ ದ್ವೀಪ ರಾಷ್ಟ್ರದ ಸೈ ಯುನ್–ಶಾನ್ ವಿರುದ್ಧ 13-21, 21-12, 21-16 ಅಂತರದಲ್ಲಿ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕ್ಕೆ ಏರಿದರು.

ಈಕೆ ಶಿರಸಿಯ ನಂದಕುಮಾರ್ ರವರ ಪುತ್ರಿಯಾಗಿದ್ದು ಲಯನ್ಸ್ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ.

ಈಗಾಗಲೆ ಹಲವು ರಾಜ್ಯ, ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿಯೂ ಚಾಂಪಿಯನ್ ಆಗಿ ಗಮನಸೆಳೆದಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ