ಶಿವಮೊಗ್ಗ ಶೃತಿ ಮೋಟರ್ಸ್ ನಲ್ಲಿ ಐಟಿ ಅಧಿಕಾರಿಗಳಿಗೆ ಸಿಕ್ತು ಕೋಟಿ ಕೋಟಿ.

454

ಶಿವಮೊಗ್ಗ ;-ಕರ್ನಾಟಕದಾಧ್ಯಾಂತ ಐಟಿ ಅಧಿಕಾರಿಗಳು ಹಲವು ಕಡೆ ದಾಳಿ ನಡೆಸುತಿದ್ದಾರೆ ಮೊನ್ನೆಯಷ್ಟೇ ಶಿವಮೊಗ್ಗದ ಶ್ರುತಿ ಮೋಟಾರ್ಸ್ ಮಾಲೀಕ ಡಿ.ಟಿ.ಪರಮೇಶ್ ಶಾಪ್ ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡಿಸಿದ್ದು ಇಂದು ದಾಳಿವೇಳೆ ಒಟ್ಟು 6 ಕೋಟಿ 23 ಲಕ್ಷ ಹಣ ಪತ್ತೆಯಾಗಿದೆ.

ಲಾಕರ್ನಲ್ಲಿ 4 ಕೋಟಿ, ಮತ್ತೊಂದು ಲಾಕರ್ನಲ್ಲಿ 2 ಕೋಟಿ ಹಣ ಪತ್ತೆಯಾಗಿದೆ. ಈ ಹಿಂದೆ ಮಾರ್ಚ್ 28ರಂದು ಶಿವಮೊಗ್ಗದಲ್ಲಿ ಡಿ.ಟಿ.ಪರಮೇಶ್ ರವರ ನಿವಾಸದ ಮೇಲೆ ಹಾಗೂ ಶೃತಿ ಮೋಟಾರ್ಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು ಆದರೆ ಅಂದು ಅಧಿಕಾರಿಗಳಿಗೆ ರೇಡ್ ವೇಳೆ ಏನೂ ಸಿಕ್ಕಿರಲಿಲ್ಲ.

ಪರಮೇಶ್ವರ್ ಶೃತಿ ಮೋಟರ್ ಮಾಲೀಕ

ಈಗ ಎರಡು ಲಾಕರ್ಗಳ ವಿಳಾಸ ಪತ್ತೆ ಆದ ನಂತರ ಐಟಿ ಅಧಿಗಾರಿಗಳು ತಮ್ಮ ಕಾರ್ಯಾಚರಣೆ ಆರಂಭಿಸಿದ್ದರು. ಲಾಕರ್ಗಳನ್ನು ಓಪನ್ ಮಾಡಿದಾಗ 2000 ಹಾಗೂ 500 ಮುಖ ಬೆಲೆಯ ಅಪಾರ ಪ್ರಮಾಣದ ಕಂತೆ ಕಂತೆ ನೋಟುಗಳು ಪತ್ತೆಯಾದುದ್ದನ್ನು ಕಂಡು ಐಟಿ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.

ನಿನ್ನೆ ಎಪ್ರಿಲ್ 4 ರ ತಡರಾತ್ರಿಗೆ ಸಿಕ್ಕ ಲೆಕ್ಕದ ಪ್ರಕಾರ 6 ಕೋಟಿ 23 ಲಕ್ಷ ಹಣ ಪತ್ತೆಯಾಗಿದ್ದು, ಈ ಹಣ ಚುನಾವಣೆಗಾಗಿ ಸಂಗ್ರಹಿಸಿಡಲಾಗಿತ್ತು ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ ಅಲ್ಲದೆ ಇದೀಗ ಡಿ.ಪಿ.ಪರಮೇಶ್ರನ್ನು ಸತತ ವಿಚಾರಣೆಗೆ ಒಳಪಡಿಸಿದ್ದು ಅವರನ್ನು ಬಂಧಿಸಿ ‘ED’ ಗೆ ಒಪ್ಪಿಸುವ ಸಾಧ್ಯತೆ ಇದೆ.
Leave a Reply

Your email address will not be published. Required fields are marked *

error: Content is protected !!