BREAKING NEWS
Search

ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು! ಏನು ಲಾಭ ಇಲ್ಲಿದೆ ಮಾಹಿತಿ

639

ನವದೆಹಲಿ: ಇಂದು ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಘೋಷಣೆ ಮಾಡುವ ಮೂಲಕ ಅಧಿಕೃತ ರಾಷ್ಟ್ರಪತಿ ಅಂಕಿತ ಬಿದ್ದಿದೆ.

ಪರಿಚ್ಛೇಧ 370 ಮತ್ತು 35(ಎ) ಕೂಡ ಸಹ ರದ್ದು ಮಾಡಲಾಗುದ್ದು ಆಡಳಿತಾತ್ಮಕ ದೃಷ್ಟಿಯಿಂದ ಜಮ್ಮು, ಕಾಶ್ಮೀರ ಮತ್ತು ಲಡಾಕ್ ಎಂದು ಮೂರು ವಿಭಾಗಗಳಾಗಿ ವಿಂಗಡನೆ ಮಾಡಲಾಗಿದೆ.

ಕಾಶ್ಮೀರದ ಮನೋಹರ ದೃಶ್ಯ

ಇಂದು ಸದನದಲ್ಲಿ ಅಮಿತ್ ಶಾ ಮಾತು ಆರಂಭಿಸುತ್ತಿದ್ದಂತೆ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ ವಿರೋಧ ವ್ಯಕ್ತಪಡಿಸಿದರು. ಮಸೂದೆಗೂ ಮಂಡನೆಗೂ ಮುನ್ನ ಚರ್ಚೆ ನಡೆಯಬೇಕು. ಕಾಶ್ಮೀರದಲ್ಲಿ ಯುದ್ಧದ ಸನ್ನಿವೇಶ ನಿರ್ಮಾಣವಾಗಿದ್ದು, ಜನತೆ ಭಯಗೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳನ್ನು ಸೇರಿದಂತೆ ಸ್ಥಳೀಯ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಮುಂಜಾಗ್ರತ ಕ್ರಮವಾಗಿ ಜಮ್ಮು-ಕಾಶ್ಮೀರದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ಸಾಮಾನ್ಯ ದಿನಕ್ಕಿಂತ ಕಾಶ್ಮೀರದಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜನೆ ಮಾಡಲಾಗಿತ್ತು. ಇಂದಿನ ಕಲಾಪಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಸುಮಾರು 40 ನಿಮಿಷಗಳ ಸಂಪಯಟ ಸಭೆ ನಡೆಸಲಾಯ್ತು. ಜಮ್ಮು ಮತ್ತು ಕಾಶ್ಮೀರದ ಕುರಿತು ತೆಗೆದುಕೊಳ್ಳುತ್ತಿರುವ ನಿರ್ಣಯದ ಬಗ್ಗೆ ಮೋದಿಯವರು ತಮ್ಮ ಮಿತ್ರಪಕ್ಷಗಳ ನಾಯಕರೊಂದಿಗೆ ಚರ್ಚೆ ನಡೆಸಿದ್ದರು.

ಕಾಶ್ಮೀರ ದಲ್ಲಿ ಭದ್ರತೆ ವದಗಿಸಿರುವುದು


ಈಗ ರಾಷ್ಟ್ರಪತಿ ಅಂಕಿತ ಬಿಳುವ ಮುಲಕ ಎಲ್ಲರೊಂದರಂತೆ ರಾಜ್ಯವಾಗಿ ಇಂದಿನಿಂದಲೇ ಅನಯಷ್ಟಾನವಾಗಿದೆ‌

ಲಾಭ ಏನು?

ಇಂದಿನ ಸ್ಥಿತಿ

ಸದ್ಯ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವಿತ್ತು. ಅದು ದೇಶದ ಉಳಿದ ರಾಜ್ಯಗಳಂತಿಲ್ಲ. ಆರ್ಟಿಕಲ್ 35 ಎ ಅಡಿಯಲ್ಲಿಯೇ ಜಮ್ಮು-ಕಾಶ್ಮೀರದ ಶಾಶ್ವತ ಪೌರತ್ವ ಮತ್ತು ನಾಗರಿಕತೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತಿತ್ತು. ಮೇ.14,1954 ಕ್ಕಿಂತ ಮೊದಲಿನಿಂದ ಕಾಶ್ಮೀರದಲ್ಲಿ ವಾಸಿಸಿರುವವರಿಗೆ ಮಾತ್ರ ಶಾಶ್ವತ ನಿವಾಸಿ ಸ್ಥಾನ ಸಿಗ್ತಾಯಿತ್ತು.

ಖಾಯಂ ನಿವಾಸಿಗಳಿಗೆ ಭೂಮಿ ಖರೀದಿ, ಸರ್ಕಾರಿ ಉದ್ಯೋಗ ಪಡೆಯುವುದು ಹಾಗೂ ಸರ್ಕಾರ ಯೋಜನೆಗಳ ಲಾಭ ಸಿಗ್ತಾಯಿತ್ತು. ಬೇರೆ ರಾಜ್ಯದ ವ್ಯಕ್ತಿ ಜಮ್ಮು-ಕಾಶ್ಮೀರಕ್ಕೆ ಹೋಗಿ ಭೂಮಿ ಖರೀದಿ ಅಥವಾ ರಾಜ್ಯ ಸರ್ಕಾರದಲ್ಲಿ ನೌಕರಿ ಮಾಡಲು ಸಾಧ್ಯವಿರಲಿಲ್ಲ. ಜಮ್ಮು-ಕಾಶ್ಮೀರದ ಯಾವುದೇ ಮಹಿಳೆ ಬೇರೆ ರಾಜ್ಯದ ವ್ಯಕ್ತಿ ಜೊತೆ ಮದುವೆಯಾದ್ರೆ ಆಕೆ ಅಧಿಕಾರವನ್ನು ಹಿಂಪಡೆಯಲಾಗುತ್ತಿತ್ತು. ಆದ್ರೆ ಪುರುಷರಿಗೆ ನಿಯಮ ಅನ್ವಯವಾಗ್ತಿರಲಿಲ್ಲ.

ಆರ್ಟಿಕಲ್ 35 ಎಯನ್ನು 1954ರಲ್ಲಿ ಸಂಸತ್ ಅನುಮತಿ ಪಡೆಯದೆ ರಾಷ್ಟ್ರಪತಿ ಒಪ್ಪಿಗೆ ಮೂಲಕ ಜಾರಿಗೆ ತರಲಾಗಿತ್ತು ಎಂಬ ದೂರಿದೆ. ಹಾಗಾಗಿ ರಾಷ್ಟ್ರಪತಿ ಆದೇಶದಿಂದ ಮಾತ್ರ ವಿಶೇಷ ಸ್ಥಾನಮಾನ ರದ್ದು ಮಾಡಲು ಸಾಧ್ಯವಾಗಿತ್ತು ಅದು ಇಂದು ಜಾರಿಯಾಗಿದೆ.

ಆರ್ಟಿಕಲ್ 35ಎ ರದ್ದಾಗಿದ್ದು ಜಮ್ಮು-ಕಾಶ್ಮೀರದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ. ಜಮ್ಮು-ಕಾಶ್ಮೀರಕ್ಕೆ ಉಳಿದ ರಾಜ್ಯಗಳಿಗೆ ಅನ್ವಯವಾಗುವ ಎಲ್ಲ ನಿಯಮ ಅನ್ವಯವಾಗಲಿದೆ. ಬೇರೆ ರಾಜ್ಯದ ವ್ಯಕ್ತಿ ಅಲ್ಲಿಗೆ ಹೋಗಿ ಜಮೀನು ಖರೀದಿ, ನೌಕರಿ ಮಾಡಬಹುದಾಗಿದೆ. ಮಹಿಳೆ ಹಾಗೂ ಪುರುಷರ ಮಧ್ಯೆಯಿರುವ ತಾರತಮ್ಯ ದೂರವಾಗಲಿದೆ. ಯಾವುದೇ ವ್ಯಕ್ತಿ ಕಾಶ್ಮೀರಕ್ಕೆ ಹೋಗಿ ನೆಲೆಸಬಹುದಾಗಿದೆ. ನಿರಾಶ್ರಿತರಿಗೆ ಮತದಾನದ ಹಕ್ಕು ಸಿಗಲಿದೆ.

ಆರ್ಟಿಕಲ್ 35ಎ, 370 ಅಂದರೇನು? ಇಲ್ಲಿದೆ ಮಾಹಿತಿ 

  1. ಆರ್ಟಿಕಲ್ 35ಎ, 370 ಪ್ರಕಾರ ಜಮ್ಮು-ಕಾಶ್ಮೀರದಲ್ಲಿ ರಾಜ್ಯದ ಹೊರಗಿನವರು ಯಾರೂ ಸಹ ಅಲ್ಲಿ ಭೂಮಿ ಖರೀದಿಸುವಂತಿಲ್ಲ
  2. ರಾಜ್ಯದ ವಿಧಾನಸಭೆಗೆ ರಾಜ್ಯದ ಶಾಶ್ವತ ನಿವಾಸಿಗಳನ್ನು ಗುರುತಿಸುವ ಹಕ್ಕು ಇದೆ. ಶಾಶ್ವತ ನಿವಾಸಿಗಳಿಗಷ್ಟೇ ಮತದಾನ, ಸರ್ಕಾರಿ ನೌಕರಿಯ ಹಕ್ಕು
  3. ರಾಜ್ಯದ ಹೊರಗಿನವರನ್ನು ವಿವಾಹವಾಗುವ ಮಹಿಳೆಗೆ ಈ ವಿಶೇಷ ಸೌಲಭ್ಯ ಅನ್ವಯವಿಲ್ಲ.
  4. ಆದರೆ ಜಮ್ಮು-ಕಾಶ್ಮೀರದ ಪುರುಷ ಹೊರ ರಾಜ್ಯದ ಸ್ತ್ರೀಯನ್ನು ವಿವಾಹವಾದರೆ ಆತನ ಹಕ್ಕು ಅಬಾಧಿತ. ಜೊತೆಗೆ ಆತನ ಪತ್ನಿಗೂ ಈ ಎಲ್ಲಾ ಹಕ್ಕುಗಳು ಪ್ರಾಪ್ತವಾಗುತ್ತವೆ. ವಿವಾಹ, ಆಸ್ತಿ ಖರೀದಿ, ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ವಿಚಾರದಲ್ಲಿ ಆರ್ಟಿಕಲ್ 370, 35ಎ ಮೂಲಕ ತಾರತಮ್ಯ
  5. ದೇಶಕ್ಕೇ ಒಂದು ಕಾನೂನಾಗಿದ್ದರೆ ಜಮ್ಮು-ಕಾಶ್ಮೀರಕ್ಕೇ ಪ್ರತ್ಯೇಕ ಕಾನೂನು, ಸಂವಿಧಾನವಿತ್ತು.

ಆರ್ಟಿಕಲ್ 370 ರದ್ದುಗೊಂಡಿದೆ. ದೇಶದ ಇತರ ರಾಜ್ಯಗಳಿಗೂ ಅನ್ವಯವಾಗುವ ಕಾನೂನು, ಸಂವಿಧಾನ ಈಗ ಜಮ್ಮು-ಕಾಶ್ಮೀರಕ್ಕೂ ಅನ್ವಯವಾಗುತ್ತದೆ. ಇನ್ನು ಮುಂದೆ ಜಮ್ಮು-ಕಾಶ್ಮೀರ ಭಾರತದ ಇತರ ಕೇಂದ್ರಾಡಳಿತ ಪ್ರದೇಶಗಳಂತೆಯೇ ಇರಲಿದೆ. 
ಆರ್ಟಿಕ 370 ಗೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರದ ಹೈಕೋರ್ಟ್ 2015 ರ ಅಕ್ಟೋಬರ್ ರಂದು ನೀಡಿದ್ದ ಆದೇಶದ ಪ್ರಕಾರ ಅನುಚ್ಛೇದ 3 ರ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ನಿರ್ಧರಿಸುವ ಹಕ್ಕು ಸಾಂವಿಧಾನಿಕ ಶಾಸನ ಸಭೆಗೆ ಇದೆ. ಆದರೆ ವಿಧಾನಸಭೆ ವಿಸರ್ಜನೆಯಾಗಿದೆ. ವಿಸರ್ಜನೆಯಾದ ಸಂದರ್ಭದಲ್ಲಿ ಆರ್ಟಿಕಲ್ 370 ನೆ ವಿಧಿಗೆ ಸಂಬಂಧಿಸಿದಂತೆ ಯಾವುದೇ ನಿರ್ಣಯವನ್ನೂ ಕೈಗೊಂಡಿರಲಿಲ್ಲ. 
ಕಾಶ್ಮೀರ ವಿಧಾನಸಭೆಯಲ್ಲಿ 370 ನ್ನು ರದ್ದುಗೊಳಿಸುವ ಮಸೂದೆಯನ್ನು ಅಂಗೀಕರಿಸದೇ, ವಿಶೇಷ ಸ್ಥಾನಮಾನ ರದ್ದು ಸಾಧ್ಯವಿಲ್ಲ, ಈ ಹಂತದಲ್ಲಿ ಕಾನೂನು ತೊಡಕು ಎದುರಾಗುತ್ತದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಯಾವ ರಾಷ್ಟ್ರಪತಿಗಳ ಹುದ್ದೆಯ ಮೂಲಕ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿತ್ತೋ ಈಗ ಅದೇ ರಾಷ್ಟ್ರಪತಿಗಳ ಅಂಕಿತದ ಮೂಲಕ ಆರ್ಟಿಕಲ್ 370 ಯನ್ನು ರದ್ದುಗೊಳಿಸಲಾಗಿದೆ. 

ಒಟ್ಟಿನಲ್ಲಿ ಮೋದಿ ನೇತ್ರತ್ವದ ಈ ಐತಿಹಾಸಿಕ ನಿರ್ಧಾರ ಸಾಕಷ್ಟು ಬದಲಾವಣೆ ಯನ್ನು ಈ ರಾಜ್ಯದಲ್ಲಿ ತರಲಿದೆ.
Leave a Reply

Your email address will not be published. Required fields are marked *