BREAKING NEWS
Search

ಕರೋನ ವೈರಸ್ – ಕಾರವಾರದ ಯುವಕ ಸೇಫ್ – ನಿರಂತರ ಸಂಪರ್ಕದಲ್ಲಿದೆ ಜಪಾನ್ ಭಾರತೀಯ ರಾಯಭಾರಿ ಕಚೇರಿ

552

ಕಾರವಾರ :- ಜಪಾನ್‌ ನಿಂದ ಸಿಂಗಾಪುರಕ್ಕೆ ಹೋಗಿ ವಾಪಾಸ್ ಆಗುತ್ತಿದ್ದ ಕ್ರೂಸ್ ನಲ್ಲಿ ಕರೋನ ವೈರಸ್ ಪತ್ತೆಯಾದ ಹಿನ್ನಲೆಯಲ್ಲಿ ಯುಕೋಮದಲ್ಲಿ ಸಮುದ್ರದ ನಡುವೆಯೇ ಕ್ರೂಸ್​ ಗೆ 14 ದಿನದಿಂದ ಜಪಾನ್ ಸರ್ಕಾರ ದಿಗ್ಭಂದನ ಹಾಕಿಲಾಗಿದ್ದು ಈ ಹಡಗಿನಲ್ಲಿದ್ದ ಕಾರವಾರದ ಪದ್ಮನಾಬ ನಗರದ ಅಭಿಷೇಕ್ ಸುರಕ್ಷಿತವಾಗಿದ್ದು ಹಡಗಿನಲ್ಲಿರುವ ಭಾರತೀಯರಿಗೆ ಆಹಾರ ,ಔಷಧಿ ಮತ್ತು ಮೂಲಭೂತ ವ್ಯವಸ್ತೆಮಾಡಲಾಗಿದ್ದು ಜಪಾನ್ ಸರ್ಕಾರದ ಜೊತೆ ಜಪಾನಿನ ಭಾರತೀಯ ರಾಯಭಾರಿ ಕಚೇರಿ ನಿರಂತರ ಸಂಪರ್ಕದಲ್ಲಿದೆ ಎಂದು, ಕ್ರೂಸ್ ನಲ್ಲಿದ್ದ ಭಾರತೀಯರ ಸಂಬಂಧಪಟ್ಟ ಪೊಷಕರಿಗೆ ರಾಯಬಾರಿ ಕಚೇರಿ ಮಾಹಿತಿ ನೀಡಿದೆ.

ಕಾರವಾರದ ಪದ್ಮನಾಬ ನಗರದ ಅಭಿಷೇಕ್ ಜಪಾನಿನ ಡೈಮಂಡ್ ಪ್ರಿನ್ಸಸ್ ಹಡಗಿನಲ್ಲಿ ಸ್ಟಿವರ್ಡ ಆಗಿ ಕಾರ್ಯ ನಿರ್ವಹಿಸುತಿದ್ದು ಈ ಹಡಗಿನಲ್ಲಿ 50 ಜನರಿಗೆ ಕರೋನ ವೈರಸ್ ಹರಡಿತ್ತು.ಈ ಹಿನ್ನಲೆಯಲ್ಲಿ ಜಪಾನ್ ಸರ್ಕಾರ ಸಮುದ್ರದಲ್ಲಿಯೇ ದಿಗ್ಭಂದನ ಮಾಡಿತ್ತು. ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಆತನ ಪೊಷಕರು ಭಾರತಕ್ಕೆ ಕರೆ ತರುವಂತೆ ಮನವಿ ಮಾಡಿದ್ದರು.ಈಗ ಜಪಾನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ಕುಟುಂಬಸ್ತರಿಗೆ ಮಾಹಿತಿ ರವಾನೆಯಾಗಿದ್ದು ಸದ್ಯ ಸುರಕ್ಷಿತವಾಗಿ ಹಡಗಿನಲ್ಲಿ ಇದ್ದಾರೆ ಎಂಬುದಾಗಿ ತಿಳಿಸಿದೆ.
Leave a Reply

Your email address will not be published. Required fields are marked *