add

BigNews|ಸಭಾಪತಿ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ ಹೆಸರು ಅಂತಿಮ.

1336

ಬೆಂಗಳೂರು : ಇಂದು ಮೂರು ಗಂಟೆಗಳ ಕಾಲ ನಡೆದ ಜೆಡಿಎಸ್ ಪರಿಷತ್ ಸದಸ್ಯರ ಸಭೆ ಮುಕ್ತಾಯವಾಗಿದ್ದು, ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ ಹೆಸರನ್ನು ಜೆಡಿಎಸ್ ಪಕ್ಷದಿಂದ ಅಂತಿಮಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇಂದು ನಡೆದ ಸಭೆಯಲ್ಲಿ ಜೆಡಿಎಸ್ ವರಿಷ್ಟ ಹೆಚ್ ಡಿ ದೇವೇಗೌಡ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಂತರ ಸಭೆಯಲ್ಲಿ ಹೊರಟ್ಟಿಯವರ ಬಗ್ಗೆ ಎಲ್ಲಾ ಸದಸ್ಯರು ಒಮ್ಮತ ಸೂಚಿಸಿದ್ದಾರೆ.

ಜೆಡಿಎಸ್ ಸಭೆಯಲ್ಲಿ ಶ್ರೀಕಂಠೇಗೌಡ, ಭೋಜೇಗೌಡ, ಬಸವರಾಜ ಹೊರಟ್ಟಿ, ಅಪ್ಪಾಜಿಗೌಡ, ಕಾಂತರಾಜ್, ಗೋವಿಂದ ರಾಜ್, ತಿಪ್ಪೇಸ್ವಾಮಿ ಸೇರಿದಂತೆ ಹಲವರು ಭಾಗಿಯಾಗಿದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ