ಸಿದ್ದರಾಮಯ್ಯರವರನ್ನು ಹೊಗಳಿದ ಜೆಡಿಎಸ್‌ ರಾಜ್ಯಾಧ್ಯಕ್ಷ ವಿಶ್ವನಾಥ್‌!

48

ಮೈಸೂರು:- ಕಳೆದ ಕೆಲದಿನಗಳಿಂದ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರುತ್ತಿದ್ದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಅವರು ಈಗ ದಿಢೀರ್‌ ತಮ್ಮ ಪ್ಲೇಟು ಬದಲಿಸಿದ್ದಾರೆ.

ಸಿದ್ದರಾಮಯ್ಯ ಅವರನ್ನು ಬಹಿರಂಗವಾಗಿಯೇ ಹೊಗಳುವ ಮೂಲಕ ಟ್ಯಾಮೇಜ್ ಕಂಟ್ರೋಲ್ ಮಾಡುವ ಪ್ರಯತ್ನ ಮಾಡಿದ್ದಾರೆ.

ನಗರದಲ್ಲಿ ಭಾನುವಾರ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್‌ ಅವರ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ರೈತನ ಮಗನಾಗಿ ಹುಟ್ಟಿದ ಸಿದ್ದರಾಮಯ್ಯ ಆಕ್ಸ್‌ಫರ್ಡ್‌ನಲ್ಲಿ ಓದಿಲ್ಲ, ಆದರೆ ಹದಿಮೂರು ಬಾರಿ ಬಜೆಟ್‌ ಮಂಡಿಸಿ ಗಮನ ಸೆಳೆದಿದ್ದಾರೆ ಎಂದರು.

ಎಚ್‌.ಎಂ.ಚನ್ನಬಸಪ್ಪ, ಎನ್‌.ರಾಚಯ್ಯ, ರಾಜಶೇಖರಮೂರ್ತಿ, ಸಿದ್ದರಾಮಯ್ಯ ಹೀಗೆ ಅನೇಕರು ಮೈಸೂರಿನವರು ನಾಯಕರಾದರು. ಯಶೋಧರಮ್ಮ ದಾಸಪ್ಪ ಅವರು ದಲಿತ ಮಕ್ಕಳಿಗೆ ಮನೆಯನ್ನೇ ಬಿಟ್ಟುಕೊಟ್ಟಿದ್ದಾರೆ, ರೈತನ ಮಗನಾಗಿ ಹುಟ್ಟಿದ ಸಿದ್ದರಾಮಯ್ಯ ಆಕ್ಸ್‌ಫರ್ಡ್‌ ಓದದೆಯೂ 13 ಬಜೆಟ್‌ ಮಂಡಿಸಿ ಗಮನ ಸೆಳೆದಿದ್ದಾರೆ ಎಂದು ಹೇಳಿದ್ದಾರೆ.
Leave a Reply

Your email address will not be published. Required fields are marked *

error: Content is protected !!