add

ಪೊಲೀಸ್ ಇಲಾಖೆ ,ಪೊಸ್ಟ್ ಆಫೀಸ್ ಸೇರಿದಂತೆ ವಿವಿಧ ಕಡೆ ಉದ್ಯೋಗ ಅವಕಾಶ.

1133

ಧಾರವಾಡ : ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸಿಹಿಸುದ್ದಿ ನೀಡಿದ್ದು, ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸ್ಥಳೀಯ ಮತ್ತು ಮಿಕ್ಕಳಿದ ವೃಂದಗಳ ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಸಿವಿಲ್) ಒಟ್ಟು 545 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ www.recruitment.ksp.gov.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು.ಅರ್ಹತಾ ಷರತ್ತುಗಳನ್ನು ಪೂರೈಸಿರುವ ಅಭ್ಯರ್ಥಿಗಳು ಆನ್ ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜನವರಿ 22 ರಿಂದ ಪ್ರಾರಂಭವಾಗಲಿದ್ದು, ಫೆಬ್ರವರಿ 22 ಕೊನೆಯ ದಿನವಾಗಿದೆ. ಅಧಿಕೃತ ಬ್ಯಾಂಕ್ ಶಾಖೆ ಅಂಚೆ ಕಚೇರಿಯಲ್ಲಿ ಶುಲ್ಕವನ್ನು ಪಾವತಿಸಲು ಫೆ.24 ಕೊನೆಯ ದಿನವಾಗಿದೆ.

ಶುಲ್ಕ ವಿವರ

ಸಾಮಾನ್ಯ ವರ್ಗ, ಪ್ರವರ್ಗ 2(ಎ), 2 (ಬಿ),3(ಬಿ) ಗೆ ಸೇರಿದ ಅಬ್ಯರ್ಥಿಗಳಿಗೆ 500 ರೂ.ಶುಲ್ಕ ನಿಗದಿಪಡಿಸಲಾಗಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1 ಕ್ಕೆ ಸೇರಿದ ಅಭ್ಯರ್ಥಿಗಳು 250 ರೂ. ಶುಲ್ಕ ಪಾವತಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಲಾಬೂರಾಮ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ ಕೃಷ್ಣಕಾಂತ ತಿಳಿಸಿದ್ದಾರೆ.

ಬಾಗಲಕೋಟೆ

ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್‍ಇನ್ಸಪೆಕ್ಟರಗಳ (ಸಿವಿಲ್) ಒಟ್ಟು 545 ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹತಾ ಷರತ್ತುಗಳನ್ನು ಪೂರೈಸುವ ಅಭ್ಯರ್ಥಿಗಳು ವೆಬ್‍ಸೈಟ್ ನಲ್ಲಿ ಜನವರಿ 22 ರಿಂದ ಫೆಬ್ರವರಿ 22 ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕ ಪರಿಶಿಷ್ಟ ಜಾತಿ, ಪಂಗಡದ ವರ್ಗದವರಿಗೆ 250 ರೂ. ಮತ್ತು ಇತರರಿಗೆ 500 ರೂ.ಗಳಾಗಿರುತ್ತದೆ. ಶುಲ್ಕ ಪಾವತಿಗ ಕೊನೆಯ ದಿನ ಫೆಬ್ರವರಿ 24 ಆಗಿದೆ ಎಂದು ಬಾಗಲಕೋಟೆ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೊಸ್ಟ್ ಆಫೀಸ್ ನಲ್ಲಿ ಉದ್ಯೋಗಾವಕಾಶ

ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ), ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ಎಬಿಪಿಎಂ) ಮತ್ತು ದಕ್ ಸೇವಕ್ ಹುದ್ದೆಗಳು ಸೇರಿವೆ. ನೋಂದಣಿ, ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಜನವರಿ 20ರಂದು ಮುಕ್ತಾಯಗೊಳ್ಳಲಿದೆ.

ವಯಸ್ಸು: ಎಲ್ಲಾ ಜಿಡಿಎಸ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಕನಿಷ್ಠ ಮತ್ತು ಗರಿಷ್ಠ ವಯಸ್ಸು 2020ರ ಡಿಸೆಂಬರ್ 21ರ ಪ್ರಕಾರ ಅನುಕ್ರಮವಾಗಿ 18 ಮತ್ತು 40 ವರ್ಷ, ವಿವಿಧ ವರ್ಗಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಗಣಿತ, ಸ್ಥಳೀಯ ಭಾಷೆ ಮತ್ತು ಇಂಗ್ಲಿಷ್ʼನಲ್ಲಿ ತೇರ್ಗಡೆಯಾದ ಅಂಕಗಳೊಂದಿಗೆ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು (ಕಡ್ಡಾಯ ಅಥವಾ ಆಯ್ಕೆ ವಿಷಯಗಳಾಗಿ ಓದಿರಬೇಕು). ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸ್ಥಳೀಯ ಭಾಷೆಯ ಜ್ಞಾನ ಕಡ್ಡಾಯವಾಗಿರಬೇಕು. ಅರ್ಜಿ ಸಲ್ಲಿಸಲು ಅರ್ಹರಾಗಿರಬೇಕು ಎಂಬ ಮೂಲ ಕಂಪ್ಯೂಟರ್ ಜ್ಞಾನ ಪ್ರಮಾಣ ಪತ್ರವೂ ಅತ್ಯಗತ್ಯ.

ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಮೂರು ಹಂತಗಳ ನೋಂದಣಿ, ಶುಲ್ಕ ಪಾವತಿ ಮತ್ತು ಅರ್ಜಿಗಳನ್ನು ಒಳಗೊಂಡಿರುತ್ತದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಲು ಈ ಮೂರು ಹಂತಗಳನ್ನು ಅಭ್ಯರ್ಥಿಗಳು ಆಯ್ಕೆ ಮಾಡಿರಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ತಮ್ಮ ಹುದ್ದೆ, ಪಾತ್ರ, ಅರ್ಹತೆ, ಅರ್ಜಿ ಮತ್ತು ಆಯ್ಕೆ ಪ್ರಕ್ರಿಯೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಅಧಿಸೂಚನೆಯನ್ನ ಎಚ್ಚರಿಕೆಯಿಂದ ಓದಿ ಎಂದು ಸೂಚಿಸಲಾಗಿದೆ.

ಇಂಡಿಯಾ ಪೋಸ್ಟ್ ಜಿಡಿಎಸ್ ನೇಮಕಾತಿ 2020ಕ್ಕೆ ಅರ್ಜಿ ಸಲ್ಲಿಸಲು ಈ ಹಂತಗಳನ್ನ ಅನುಸರಿಸಿ.

1) ಇಂಡಿಯಾ ಪೋಸ್ಟ್ GDS ನೇಮಕಾತಿ ವೆಬ್ ಸೈಟ್ appost.in ಗೆ ಭೇಟಿ ನೀಡಿ

2) ಅನನ್ಯ ನೋಂದಣಿ ಸಂಖ್ಯೆಯನ್ನು ಪಡೆಯಲು ಮುಖಪುಟದಲ್ಲಿ ‘ಸ್ಟೇಜ್ 1 ರಿಜಿಸ್ಟ್ರೇಷನ್’ ವಿಭಾಗದ ಮೂಲಕ ನಿಮ್ಮನ್ನು ನೀವು ನೋಂದಾಯಿಸಿಕೊಳ್ಳಿ

3) ‘ಹಂತ 2 ಶುಲ್ಕ ಪಾವತಿ’ ವಿಭಾಗದ ಮೂಲಕ ಅರ್ಜಿ ಶುಲ್ಕಗಳನ್ನು ಪಾವತಿಸಿ

4) ನಂತರ ‘ಹಂತ 3 ಆನ್ ಲೈನ್ ಮೂಲಕ ಅಪೇಕ್ಷಿತ ಹುದ್ದೆಗೆ ಆನ್ ಲೈನ್ʼನಲ್ಲಿ ಅರ್ಜಿ ಸಲ್ಲಿಸಿ’

5) ಫಾರ್ಮ್ ಭರ್ತಿ ಮಾಡಿ, ದಾಖಲೆಗಳನ್ನ ಅಪ್ ಲೋಡ್ ಮಾಡಿ ಮತ್ತು ಪೋಸ್ಟ್ ಆದ್ಯತೆಗಳನ್ನ ಸಲ್ಲಿಸಿ

6) ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಭಾರತದಾದ್ಯಂತ 4,298 ಇಂಡಿಯಾ ಪೋಸ್ಟ್ ನೇಮಕಾತಿ ಹುದ್ದೆಗಳು ಖಾಲಿಯಿದ್ದು, ಇಂಡಿಯಾ ಪೋಸ್ಟ್ ಗುಜರಾತ್ ಮತ್ತು ಕರ್ನಾಟಕ ವೃತ್ತದಲ್ಲಿ 4,000ಕ್ಕೂ ಹೆಚ್ಚು ಗ್ರಾಮ ದಕ್ ಸೇವಕ್ (ಜಿಡಿಎಸ್) ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.

ಆಸಕ್ತ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್ ನೇಮಕಾತಿ ವೆಬ್ ಸೈಟ್ appost.in ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಗುಜರಾತ್ ವೃತ್ತದಲ್ಲಿ 1,826 ಹಾಗೂ ಕರ್ನಾಟಕ ವೃತ್ತದಲ್ಲಿ 2,443 ಹುದ್ದೆಗಳಿಗೆ ಅಭ್ಯರ್ಥಿಗಳನ್ನ ನೇಮಕ ಮಾಡಿಕೊಳ್ಳಲಿದೆ.

ಪ್ರತಿ ದಿನ ಪ್ರಮುಖ ಸುದ್ದಿಗಳನ್ನು ತಿಳಿಯಲು ಕನ್ನಡವಾಣಿ.ನ್ಯೂಸ್ ವಾಟ್ಸ್ ಅಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ:-

https://chat.whatsapp.com/D3LnZxBFA8pAMiJqfy72or

ನಿರುದ್ಯೋಗಿಗಳಿಗೆ ಬೆಂಗಳೂರಿನಲ್ಲಿ ಐ.ಟಿ ವಲಯದಲ್ಲಿ 91 ಸಾವಿರ ಜನರಿಗೆ ಉದ್ಯೋಗಾವಕಾಶ

ಉದ್ಯೋಗಾಕಾಂಕ್ಷಿಗಳಿಗೆ ಐಟಿ ಕಂಪನಿಗಳು ಭರ್ಜರಿ ಸಿಹಿಸುದ್ದಿ ನೀಡಿದ್ದು, ಪ್ರಮುಖ ಐಟಿ ಕಂಪನಿಗಳು ರಾಜ್ಯಾದ್ಯಂತ 91 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶ ನೀಡಲು ಮುಂದಾಗಿದೆ.

ಟಿಸಿಎಸ್, ಇನ್ಫೋಸಿಸ್, ವಿಪ್ರೊ ಮತ್ತು ಎಚ್ ಸಿಎಲ್ ಟೆಕ್ನಾಲಜೀಸ್ ಒಟ್ಟು 91 ಸಾವಿರ ಮಂದಿಯನ್ನು ನೇಮಿಸಲಿದ್ದು, ಇದಕ್ಕಾಗಿ ರಾಜ್ಯದ ನಾನಾ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ವರ್ಷ ಕ್ಯಾಂಪಸ್ ಸಂದರ್ಶನವನ್ನು ನಡೆಸಲು ಸಜ್ಜಾಗಿವೆ.

ಈಗಾಗಲೇ ಐಟಿ ಕಂಪನಿಗಳು ಅರ್ಹ ವಿದ್ಯಾರ್ಥಿಗಳಿಗೆ ಆಫರ್ ಗಳನ್ನು ನೀಡಿದ್ದು, ಈ ವರ್ಷ ಕೋವಿಡ್ ನಡುವೆಯೂ ಹೆಚ್ಚಿನ ನೇಮಕಾತಿಗೆ ಕಂಪನಿಗಳು ನಿರ್ಧರಿಸಿದ್ದು, ಒಟ್ಟು 91 ಸಾವಿರ ಕ್ಕೂ ಹೆಚ್ಚು ಉದ್ಯೋಗಗಳನ್ನು ನೀಡಲು ಕಂಪನಿಗಳು ಮುಂದಾಗಿವೆ ಎಂದು ತಿಳಿದುಬಂದಿದ್ದು ಕಂಪನಿಯೇ ನೇರವಾಗಿ ಕಾಲೇಜು ಕ್ಯಾಂಪಸ್ ಸೆಲಕ್ಷನ್ ಮೂಲಕ ಆಯ್ಕೆ ಮಾಡಿಕೊಳ್ಳಲಿದೆ.

ಪ್ರತಿ ದಿನ ಪ್ರಮುಖ ಸುದ್ದಿಗಳನ್ನು ತಿಳಿಯಲು ನಮ್ಮ ವಾಟ್ಸ್ ಅಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ:-

https://chat.whatsapp.com/D3LnZxBFA8pAMiJqfy72or
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ