ಜೋಯಿಡಾ|ಹೆಂಡತಿಮೇಲೆ ಅನುಮಾನಗೊಂಡ ಪತಿ ಕೊಡಲಿಯಲ್ಲಿ ಕೊಚ್ಚಿ ಕೊಂದ!

971

ಜೋಯಿಡಾ :- ಮನೆ ಕೆಲಸಕ್ಕೆ ಹೋಗುತಿದ್ದ ಹೆಂಡತಿಯ ಮೇಲೆ ಅನೈತಿಕ ಸಂಬಂಧದ ಅನುಮಾನ ಗೊಂಡು ಹೆಂಡತಿಯನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ಜೋಯಿಡಾ ತಾಲೂಕಿನ ಗಣೇಶಗುಡಿಯ ಮಣಿಕ್ಯಾಂಪ್ ನಲ್ಲಿ ನಡೆದಿದೆ.

ಪಲ್ಲವಿ ಪ್ರಕಾಶ್ ಕಟ್ಟಿಮುನಿ(29) ಕೊಲೆಯಾದ ಗೃಹಿಣಿಯಾಗಿದ್ದು ಪ್ರಕಾಶ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

ಆರೋಪಿ ಪ್ರಕಾಶ್ ಮದ್ಯ ವ್ಯಸನಿಯಾಗಿದ್ದು ಮನೆ ಕೆಲಸಕ್ಕೆ ಹೋಗುತಿದ್ದ ಪತ್ನಿಯನ್ನು ಸದಾ ಅನುಮಾನದಿಂದ ನೋಡುತಿದ್ದ.

ಇಂದು ಮನೆಗೆ ತಡವಾಗಿ ಬಂದಿದ್ದಕ್ಕೆ ಕೋಪಗೊಂಡ ಈತ ಕೊಡಲಿಯಿಂದ ತಲೆ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾನೆ.

ಘಟನೆ ಸಂಬಂಧ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ