ಕಸ್ತೂರಿರಂಗನ ವರದಿ ಜಾರಿ ಅಸಾಧ್ಯ: ಸಚಿವ ಹೆಬ್ಬಾರ

351

ಜೋಯಿಡಾದಲ್ಲಿ ಇಂದು ಸಚಿವ ಹೆಬ್ಬಾರ್ ರವರೊಂದಿಗೆ ಕಾಳಿ ಬ್ರಿಗೇಡ್ ಕಾರ್ಯಕರ್ತರು ಜೋಯಿಡಾ ಭಾಗದಲ್ಲಿ ಕಸ್ತೂರಿರಂಗನ ವರದಿ ಜಾರಿ ವಿರೋಧಿಸಿ ಸಭೆ ನಡೆಸಿದರು.ಈ ವರದಿ ಜಾರಿಯಾದರೆ ಜೋಯಿಡಾ ಭಾಗವನ್ನು ಕೈ ಬಿಡುವಂತೆ ಮನವಿ ಮಾಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಯಾವುದೇ ಕಾರಣಕ್ಕೆ ಕಸ್ತೂರಿರಂಗನ್ ವರದಿ ಜಾರಿಯಾಗುವುದಿಲ್ಲ,ಈ ಸಂಬಂಧ ಮುಖ್ಯಮಂತ್ರಿಗಳಿಗೆ ವಿವರ ನೀಡಲಾಗಿದ್ದು ಈ ವ್ಯಾಪ್ತಿಗೆ ಬರುವ ಶಾಸಕರ ಸಭೆ ಕರೆದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಜೋಯಿಡಾ: ಜೋಯಿಡಾ ತಾಲೂಕಿನ ಬಹುತೇಕ ಪ್ರದೇಶಗಳನ್ನು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ವ್ಯಾಪ್ತಿಯ 626 ಹಳ್ಳಿಗಳನ್ನು ಡಾ| ಕೆ. ಕಸ್ತೂರಿರಂಗನ ವರದಿ ಆಧರಿಸಿ, ಇಕೋಲೋಜಿಕಲಿ ಸೆನಸಿಟೀವ್ ಎರಿಯಾ (ಇSಂ) ಗೆ ಸೇರ್ಪಡೆ ಮಾಡುವುದನ್ನು ವಿರೋಧಿಸುವ ಕುರಿತು ರವಿವಾರ ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ಶಿವಾರಾಮ ಹೆಬ್ಬಾರ ಅವರೋಂದಿಗೆ ಕಾಳಿ ಬ್ರಿಗೇಡ್ ಮುಖ್ಯ ಸಂಚಾಲಕ ರವಿ ರೇಡ್ಕರ ಹಾಗೂ ಕಾರ್ಯಕರ್ತರು ಸಭೆ ನಡೆಸಿದರು.

ಕಾಳಿ ಬ್ರಿಗೇಡ್ ಸಂಘಟನೆ ಮತ್ತು ವ್ಯಾಪಾರಸ್ಥರ ಸಂಘ, ಜೋಯಿಡಾದ 25ಕ್ಕೂ ಹೆಚ್ಚು ಜನರು ಉಸ್ತುವಾರಿ ಸಚಿವ ಶಿವಾರಾಮ ಹೆಬ್ಬಾರ ಅವರೋಂದಿಗೆ ಯಲ್ಲಾಪುರದಲ್ಲಿ ಸಭೆ ನಡೆಸಿ, ಸಭೆಯಲ್ಲಿ 27/02/2017 ಮತ್ತು 03/10/2018 ರ ಕರಡು ಅಧಿಸೂಚನೆ ಕುರಿತು ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಆದೇಶ 28/09/2020 ರ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು. ಇದರಿಂದ ಈ ಭಾಗದ ಬುಡಕಟ್ಟು ಮತ್ತು ಪಾರಂಪಾರಿಕ ಕೃಷಿಯನ್ನು ಅವಲಂಭಿಸಿರುವ ರೈತರಿಗೆ ಆಗುವ ಸಮಸ್ಯೆಯ ಬಗ್ಗೆ ಕಾಳಿ ಬ್ರಿಗೇಡ್ ಮುಖ್ಯ ಸಂಚಾಲಕ ರವಿ ರೇಡ್ಕರ ವಿವರಿಸಿದರು.

ಈ ಬಗ್ಗೆ ಮಾತನಾಡಿದ ಸಚಿವ ಹೆಬ್ಬಾರ ಎಲ್ಲಾ ಮಾಹಿತಿಯನ್ನು ಪಡೆಯಲಾಗಿದ್ದು, ಮುಖ್ಯ ಮಂತ್ರಿ ಯಡಿಯೂರಪ್ಪನವರೋಂದಿಗೆ ಚರ್ಚಿಸಲಾಗಿದ್ದು, ಕಸ್ತೂರಿರಂಗನ ವರದಿ ಜಾರಿ ಅಸಾಧ್ಯ ಎಂದು ಅವರು ಹೇಳಿದ್ದಾರೆ. ಹಿಂದಿನ ಎಲ್ಲಾ ಸರ್ಕಾರಗಳು ಇದೇ ಅಭಿಪ್ರಾಯವನ್ನು ಹೋಂದಿದ್ದು, ಜನರ ಹಿತ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಕಸ್ತೂರಿರಂಗನ ವರದಿಯಲ್ಲಿ ಒಳಪಡುವ ಪ್ರದೇಶಗಳ ಎಲ್ಲಾ ಶಾಸಕರೋಂದಿಗೆ ಚರ್ಚಿಸಿ, ಇದರಿಂದ ಜನರಿಗೆ ಆಗುವ ಕಷ್ಟಗಳ ಬಗ್ಗೆ ಮುಖ್ಯ ಮಂತ್ರಿಗಳೋಂದಿಗೆ ಮತ್ತೋಮ್ಮೆ ಚರ್ಚಿಸಲಾಗುವುದು. ಆದರೆ ಈಗಿನ ಪರಿಸ್ಥಿತಿಯಲ್ಲಿ ಕಸ್ತೂರಿರಂಗನ ವರದಿ ಜಾರಿ ಅಸಾಧ್ಯ ಎಂದು ಸಭೆಯಲ್ಲಿ ಉಪಸ್ಥಿತರಿಗೆ ಭರವಸೆ ನೀಡಿದರು.

ಕಸ್ತೂರಿರಂಗನ ವರದಿಯ ಜಾರಿಯಿಂದ ಜೋಯಿಡಾ ತಾಲೂಕಿನ ಮೇಲೆ ಆಗುವ ಪರಿಣಾಮಗಳ ಕುರಿತು ವಕೀಲ ಎಸ್. ಜಿ. ದೇಸಾಯಿ ಸಭೆಗೆ ಮಾಹಿತಿ ನೀಡಿ, ಸರ್ಕಾರ ಈ ಬಗ್ಗೆ ಜನಪರವಾಗಿ ತೆಗೆದುಕೊಂಡಿರುವ ಕ್ರಮಗಳು ಮತ್ತು ಪತ್ರಿಕೆಗಳು ಸರ್ಕಾರ ಮತ್ತು ಜನಸಾಮಾನ್ಯರನ್ನು ಜಾಗೃತಿಗೋಳಿಸುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಈ ಸಚಿದರ್ಭದಲ್ಲಿ ಕಾಳಿ ಬ್ರಿಗೇಡ ಸಂಘಟನೆ ಹಾಗೂ ವ್ಯಾಪಾರಸ್ಥರ ಸಂಘದ ವತಿಯಿಂದ ಸಚಿವರಿಗೆ ಕಸ್ತೂರಿರಂಗನ ವರದಿ ಜಾರಿ ಮಾಡದಂತೆ ಮನವಿ ನೀಡಿ, ಕರಡು ಅಧಿಸೂಚನೆಗೆ ತಕರಾರುಗಳನ್ನು ಸಲ್ಲಿಸಲಾಯಿತು.

ಬೇಡಿಕೆಗಳ ಪ್ರಸ್ತಾಪ:-

ವರದಿ ವಜಾಗೊಳಿಸಿ, ಇಲ್ಲವೆ ಇದರಿಂದ ಉ.ಕ. ಜಿಲ್ಲೆ ಅಥವಾ ಜೋಯಿಡಾ ತಾಲೂಕಿಗೆ ವಿನಾಯತಿ ನೀಡಿ, ಇಲ್ಲಿಯ ವರೆಗಿನ ಅಧಿಸೂಚನೆಗಳನ್ನು ರದ್ದು ಮಾಡಿ ಮತ್ತು ಹೋಸ ಕಮೀಷನ್ ರಚಿಸಿ.ಒಂದು ವೇಳೆ ಇದೇ ಕಮಿಷನ ವರದಿ ಮತ್ತು ಅಧಿಸೂಚನೆಗಳನ್ನು ಪರಿಗಣಿಸುವುದಾದಾದರೇ, ಸಾರ್ವಜನಿಕರ ಅಹವಾಲು ಸಭೆ ಯನ್ನು ಮೊದಲು ನಡೆಸಬೇಕು ಎಂಬ ಬೇಡಿಕೆಗಳ ಪ್ರಸ್ತಾವ ನೀಡಲಾಯಿತು.

ಸಭೆಯಲ್ಲಿ ಕಾಳಿ ಬ್ರಿಗೇಡ್ ಅಧ್ಯಕ್ಷರಾದ, ಸತೀಶ ನಾಯ್ಕ, ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಮೋಹ್ಮದ ರಫೀಕ ಖಾಜಿ, ಖಾನಾಪುರದ ನೇತಾಜಿ ದೇಸಾಯಿ, ಪ್ರಭಾಕರ ನಾಯ್ಕ, ವಿಷ್ಣು ದೇಸಾಯಿ, ನಾರಾಯಣ ಹೆಬ್ಬಾರ, ಅಜೀತ ಟೆಂಗ್ಸೆ, ಉದಯ ದೇಸಾಯಿ, ಉಮೇಶ ವೇಳಿಪ, ಸುನೀಲ ದೇಸಾಯಿ, ಸಿಮಾಂವ್ ವೇಗಸ್, ಮೋಹನ ದೇಸಾಯಿ, ಸುಧಾಕರ ದೇಸಾಯಿ, ಮಂಜುನಾಥ ಭಟ್ಟ್, ರಾಜೇಶ ದೇಸಾಯಿ, ರತ್ನಾಕರ, ವಿನಾಯಕ ಕರಂಜೋಳಕರ, ರೂಪೇಶ ದೇಸಾಯಿ, ಸಮೀರ ಮುಜಾವರ, ಮುಂತಾದವರು ಹಾಗೂ ತಾಲೂಕಿನ ಗಣ್ಯರು ಉಪಸ್ಥಿತರಿದ್ದರು.

ರವಿವಾರ ಬೆಳಿಗ್ಗೆ ಕಾಳಿ ಬ್ರಿಗೇಡ ಸಂಘಟನೆ ಹಾಗೂ ವ್ಯಾಪಾರಸ್ಥರ ಸಂಘದ ವತಿಯಿಂದ ಹಳಿಯಾಳ-ಜೋಯಿಡಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವರಾದ ಆರ್.ವಿ ದೇಶಪಾಂಡೆ ಅವರಿಗೆ ಹಾಗೂ ವಿಧಾನ ಪರಿಷತ್ತ ಸದಸ್ಯರಾದ ಶ್ರೀಕಾಂತ ಎಲ್. ಘೋಟ್ನೇಕರ ಅವರಿಗೆ ಕಸ್ತೂರಿರಂಗನ ವರದಿ ಜಾರಿ ಮಾಡದಂತೆ ಸಭೆಯಲ್ಲಿ ಚರ್ಚಿಸಿ ಮನವಿ ನೀಡಲಾಯಿತು. ಅವರು ಜನ ವಿರೋಧಿಯಾಗಿರುವ ಯಾವುದೇ ಯೋಜನೆಗಳನ್ನು ಜಿಲ್ಲೆಯಲ್ಲಿ ಜಾರಿ ಮಾಡಲು ಬೀಡುವುದಿಲ್ಲ. ಜನರಿಗಾಗಿ ರಸ್ತೆಯಿಂದ ದೆಹಲಿವರೆಗೂ ಹೋರಾಟಕ್ಕೆ ಸಿದ್ಧ ಎಂದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ