BREAKING NEWS
Search

ಕೈಗಾದಲ್ಲಿ 5,6 ನೇ ಘಟಕಕ್ಕೆ ಪರಿಸರ ಇಲಾಖೆ ಅಸ್ತು! ವಿರೋಧ ನಡುವೆಯೇ ಹೊಸ ಅಣುಸ್ಥಾವರ ನಿರ್ಮಾಣಕ್ಕೆ ತಯಾರಿ!

419

ಕಾರವಾರ:- ಹಲವು ವಿರೋಧದ ನಡುವೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೈಗಾದಲ್ಲಿ 5,6ನೇ ಘಟಕ ನಿರ್ಮಾಣಕ್ಕೆ ಪರಿಸರ ಮಂತ್ರಾಲಯ ಪರವಾನಿಗೆ ನೀಡಿದೆ.
ಕೆಲವು ತಿಂಗಳ ಹಿಂದೆ ಪರಿಸರವಾದಿಗಳು ಹೊಸ ಘಟಕ ನಿರ್ಮಾಣಕ್ಕೆ ತೀರ್ವ ವಿರೋಧ ವ್ಯಕ್ತಪಡಿಸಿದ್ದರು.
ಈ ವಿರೋಧದ ನಡುವೆಯೂ ಪರಿಸರ ಪರವಾನಿಗೆ ದೊರೆತಿದ್ದರಿಂದ 5,6ನೇ ಘಟಕ ನಿರ್ಮಾಣಕ್ಕೆ ಇದ್ದ ದೊಡ್ಡ ಅಡೆತಡೆ ನಿವಾರಣೆಯಾಗಿದೆ.

ಹೇಗಿರಲಿದೆ ಹೊಸ ಘಟಕ!

21 ಸಾವಿರ ಕೋಟೆಯಲ್ಲಿ ನಿರ್ಮಾಣಮಾಡಲು ಈಗಾಗಲೇ ವಿದ್ಯುತ್ ನಿಗಮ ತೀರ್ಮಾನಿಸಿದೆ.
ಇದರ ಒಳನೋಟ ಇಲ್ಲಿದೆ.

ಪರಿಸರ ಹಾನಿ ಇಲ್ಲದೇ ವಿದ್ಯುತ್ ಉತ್ಪಾದನೆ ಮಾಡುವ ಬರವಸೆಯನ್ನು ನೀಡಿರುವ ಆಡಳಿತಮಂಡಳಿ ಸ್ಥಳೀಯರಿಗೆ ಉದ್ಯೋಗ ,ಪ್ರದೇಶಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಹೊಸ ನಿಯಮದಂತೆ 700ಮೆ.ವ್ಯಾ. ಕರ್ನಾಟ ಕ್ಕೆ ನೀಡುವ ಭರವಸೆ ನೀಡಿದೆ.

ಏನು ಲಾಭ!

ಉದ್ದೇಶಿತ 5,6ನೇ ಘಟಕದಲ್ಲಿ 789 ಜನರಿಗೆ ಕಾಯಂ ಉದ್ಯೋಗ.

4000ಜನರಿಗೆ ಗುತ್ತಿಗೆ ಆಧಾರದಲ್ಲಿ ಉದ್ಯೋಗ.

ಪರೋಕ್ಷವಾಗಿ ಸ್ಥಳೀಯ ಜನರಿಗೆ ಉದ್ಯೋಗ ಸೃಷ್ಟಿ.

ಪ್ರಸ್ತಾವನೆಯಲ್ಲಿ ಏನು ಹೇಳಲಾಗಿತ್ತು?

photo Google

ಕಳೆದ 24 ರಂದು ದೆಹಲಿಯಲ್ಲಿ ಪರಿಸರ ಪರಿಣಾಮಗಳ ಅಧ್ಯಾಯನ ಸಮಿತಿ ಸಭೆಯಲ್ಲಿ ಘಟಕ ನಿರ್ಮಾಣಗಳ ಪ್ರಸ್ತಾಪನೆಯನ್ನು ಪರಿಶೀಲಿಸಿ ಚರ್ಚೆ ನಡೆಸಲಾಗಿತ್ತು.

ಸೆ.9,2018 ರಂದು ವನ್ಯಜೀವಿ ವನ್ಯಜೀವಿ ವಿಭಾಗದಿಂದ ಅನುಮತಿ ದೊರೆತಿದೆ.
ಸ್ಥಾವರದ ಎರಡರಿಂದ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಜನ ವಸತಿ ಇದ್ದರೂ ಇಲ್ಲಿ ವಿಕೀರ್ಣದ ಮಟ್ಟ ಉಳಿದೆಡೆಗಿಂತ ಕಮ್ಮಿ ಮಟ್ಟ ಹಾಗೂ ಉಳಿದೆಡೆ ನೈಸರ್ಗಿಕ ವಿಕೀರ್ಣಕ್ಕಿಂತ ಕಮ್ಮಿ ಮಟ್ಟದಲ್ಲಿದೆ ಎಂದು ಯೋಜನಾ ವರದಿಯಲ್ಲಿ ಸಲ್ಲಿಸಿತ್ತು.

ಘಟಕ ನಿರ್ಮಾಣಕ್ಕೆ ಅಗತ್ಯವಾದ 54.09ಹೆಕ್ಟೇರ್ ಭೂಮಿ ಈಗಾಗಲೇ ನಿಗಮದ ಸ್ವಾದೀನದಲ್ಲಿದೆ,ಹೆಚ್ಚುವರಿ ಭೂಮಿ ಸ್ವಾದೀನ ಪಡಿಸಿಕೊಳ್ಳುವ ಅಗತ್ಯವಿಲ್ಲ.
ಈ ಘಟಕದ ಉದ್ಯೋಗಿಗಳಿಗಾಗಿ ಮಲ್ಲಾಪುರ,ಮಿರ್ಜೆಯಲ್ಲಿ ಟೌನ್ ಷಿಪ್ ನಿರ್ಮಾಣ ಮಾಡಲಾಗುತ್ತಿದೆ.
ನಿಗಮದ ಬಳಿ 95.09ಹೆಕ್ಟೇರ್ ಭೂಮಿ ನಿಗಮದ ಬಳಿ ಇದೆ,51.38 ಹೆಕ್ಟೇರ್ ಭೂಮಿಯಲ್ಲಿ ಈಗಾಗಲೇ ನಾಲ್ಕು ಘಟಕಕ್ಕೆ ಬಳಕೆಯಾಗಿದೆ, ಉಳಿದ 44.53ಹೆಕ್ಟೇರ್ ಭೂಮಿಯಲ್ಲಿ ಟೌನ್ ಷಿಪ್ ನಿರ್ಮಾಣ ಮಾಡುವುದಾಗಿ ನಿಗಮ ಹೇಳಿದೆ.

ಸ್ಥಳೀಯ ಶಾಸಕರು ಸಾಥ್ !


ಕೈಗಾ ಅಣು ಸ್ಥಾವರದ ಪರದಿಯು ಕಾರವಾರ ,ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತದೆ. ಹೀಗಾಗಿ ಇಲ್ಲಿನ ಶಾಸಕರ ಅಭಿಪ್ರಾಯ ಕೂಡ ಮುಖ್ಯವಾಗಿದ್ದು ಯಲ್ಲಾಪುರ ಶಾಸಕರಾದ ಶಿವರಾಮ್ ಹೆಬ್ಬಾರ್ ,ಕಾರವಾರದ ಶಾಸಕರಾದ ರೂಪಾಲಿನಾಯ್ಕ ರವರು ಯೋಜನೆಗೆ ಬೆಂಬಲ ವ್ಯಕ್ತಪಡಿಸಿದ್ದು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡಬೇಕು ಎಂಬ ಪ್ರಸ್ತಾಪವನ್ನು ನಿಗಮದ ಮುಣಮದಿಟ್ಟಿದ್ದಾರೆ.

ಸ್ಥಳೀಯರ ವಿರೋಧ!

5,6 ನೇ ಘಟಕದ ಪ್ರಸ್ತಾಪ ಆಗುತಿದ್ದಂತೆ ಕಳೆದ ವರ್ಷ ಡಿಸೆಂಬರ್‌ ನಲ್ಲಿ ಸ್ಥಳೀಯರು ಹಾಗೂ ಪರಿಸರವಾದಿಗಳು ಅಹವಾಲು ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದರು ,ವಿಕೀರ್ಣ ದಿಂದ ಜನರಿಗೆ ಕ್ಯಾನ್ಸರ್ ಹೆಚ್ಚಾಗುವ ಕುರಿತು ವರದಿಯ ಪ್ರಸ್ತಾಪ ಸಹ ಮಾಡಲಾಗಿತ್ತು.




Leave a Reply

Your email address will not be published. Required fields are marked *