BREAKING NEWS
Search

ಕೈಗಾ ಹೊಸ ಅಣು ಸ್ಥಾವರ ಪೇಜಾವರ ಶ್ರೀ ವಿರೋಧ! ಪ್ರಾಣ ಕೊಡಲೂ ಸಿದ್ದ ಅಂದ್ರು ಸತೀಶ್ ಸೈಲ್!

493

ಕಾರವಾರ :- ಪರಿಸರ ಇಲಾಖೆಯಿಂದ ಅನುಮತಿ ದೊರೆತ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ ದಲ್ಲಿನ ಐದು ಮತ್ತು ಆರನೇ ಘಟಕಕ್ಕೆ ಪೇಜಾವರ ಶ್ರೀ ವಿರೋಧ ವ್ಯಕ್ತಪಡಿಸಿದ್ದಾರೆ.

ಮಲ್ಲಾಪುರ ದಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪೇಜಾವರ ಶ್ರೀಗಳು
ದೇಶದ ನೆಲ ಜಲ ವಾಯು ಆಕಾಶ
ಪ್ರಕೃತಿ ಸಂಪತ್ತನ್ನ ಉಳಿಸಿಬೇಕು,ಪ್ರಕೃತಿ ಸಂಪತ್ತು ವ್ಯಯವಾಗಬಾರದು ನಷ್ಟವಾಗಬಾರದು.

ಕೃಷ್ಣ ಎಲ್ಲವನ್ನ ರಕ್ಷಣೆ ಮಾಡಲಿಕ್ಕೆ ಹಿಂದೆ ಮಾರ್ಗದರ್ಶನ ನೀಡಿದ್ದ.ಕೈಗಾ ಆರಂಭದಲ್ಲಿಯೇ ನಾವು ವಿರೋಧ ಮಾಡಿದ್ದೇವು,ಕೈಗಾ ಯೋಜನೆ ವಿಸ್ತರಣೆಯಾಗದಂತೆ ಎಲ್ಲರೂ ಕೈ ಜೋಡಿಸಬೇಕು.ಎಲ್ಲಾ ಸಂಘ ಸಂಸ್ಥೆ ಜೊತೆ ಪ್ರಧಾನಮಂತ್ರಿ ಭೇಟಿ ಮಾಡುವ ತೀರ್ಮಾನ ಮಾಡಿದ್ದೇವೆ ಎಂದರು.

ಆಮರಣಾಂತರ ಉಪವಾಸಕ್ಕೂ ಸಿದ್ದ!

ಇನ್ನು ಕಾರವಾರದ ಮಾಜಿ ಶಾಸಕ ಸತೀಶ್ ಸೈಲ್ ಕೂಡ ಸಭೆಯಲ್ಲಿ ಭಾಗವಹಿಸಿದ್ದು ಪೇಜಾವರ ಶ್ರೀಗಳು ಹಿಂದೆಯೇ ನಮ್ನೊಂದಿ ಇದ್ದಿದ್ದರೆ ನಾವು ಅನುಮತಿಯೇ ಸಿಗದಂತೆ ಮಾಡುತಿದ್ದೆವು ಹಿಂದೆ ಹಣಕೋಣದಲ್ಲಿ ಥರ್ಮಲ್ ಪ್ರಾಜೆಕ್ಟ್ ಬಂದಾಗ ಕೂಡ ವಿರೋಧ ಮಾಡಿ ದೊಡ್ಡ ಹೋರಾಟ ಮಾಡಿ ಮಂಜೂರಾಗಿದ್ದ ಪ್ರಾಜಕ್ಟ್ ಬರದಂತೆ ಮಾಡಿದ್ದೆವು ,ಈಗಲೂ ಪೇಜಾವರ ಶ್ರೀಗಳು ನಮ್ಮೊಂದಿಗಿದ್ದರೆ ಆಮರಣಾಂತರ ಉಪವಾಸ ಮಾಡಿ ಹೋರಾಟಕ್ಕೆ ಸಿದ್ದ ಎಂದರು .

ಇನ್ನು ಇದೇ ಸಂದರ್ಭದಲ್ಲಿ ಕಾರವಾರದ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಭಾಗವಹಿಸಿದ್ದು ಕೈಗಾ ಹೊಸ ಘಟಕಕ್ಕೆ ವಿರೋಧ ವ್ಯಕ್ತಪಡಿಸಿದ್ದು ಹೋರಾಟ ನಡೆಸುವುದಾಗಿ ಹೇಳಿದ್ರು. ಈ ಮೂಲಕ ಕೈಗಾದ ಹೊಸ ಘಟಕ್ಕೆ ತೀರ್ವ ವಿರೋಧ ವ್ಯಕ್ತವಾಗಿದೆ.
Leave a Reply

Your email address will not be published. Required fields are marked *