BREAKING NEWS
Search

ಶುಕ್ರವಾರದ ದಿನ ಭವಿಷ್ಯ

339

ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ,
ಶುಕ್ರವಾರ, ಮಖ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:50 ರಿಂದ 12:23
ಗುಳಿಕಕಾಲ: ಬೆಳಗ್ಗೆ 7:44 ರಿಂದ 9:17
ಯಮಗಂಡಕಾಲ: ಬೆಳಗ್ಗೆ 3:29 ರಿಂದ 5:02

ಮೇಷ: ಸ್ತ್ರೀ ಮೂಲಕ ಉದ್ಯೋಗ ಪ್ರಾಪ್ತಿ, ಆದರೆ ಸ್ತ್ರೀಯರಿಂದ ಮಾನಸಿಕ ಅಸಮಧಾನವೂ ಇದೆ, ವಿದ್ಯಾರ್ಥಿಗಳಿಗೆ ಸ್ತ್ರೀ ವಿಚಾರದಲ್ಲಿ ಕೊರಗು, ಪ್ರವಾಸ ಬೇಡ, ದೂರದ ಪ್ರಯಾಣ ಮೊಟುಕುಗೊಳಿಸಿ, ಮಕ್ಕಳಿಂದ ಆರ್ಥಿಕ ಸಹಾಯ, ವಿದ್ಯಾಭ್ಯಾಸ ಪ್ರಗತಿ, ಪ್ರೀತಿ ಪ್ರೇಮ ವಿಚಾರದಲ್ಲಿ ಬೇಸರ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಉದ್ಯೋಗ ಕಳೆದುಕೊಳ್ಳುವ ಭೀತಿ, ಪಿತ್ರಾರ್ಜಿತ ಆಸ್ತಿಯಿಂದ ಬಾಧೆ, ಸಂಗಾಂತಿಯ ಆರೋಗ್ಯದಲ್ಲಿ ವ್ಯತ್ಯಾಸ.

ವೃಷಭ: ಸ್ವಯಂಕೃತ ಅಪರಾಧಗಳಿಂದ ನಷ್ಟ, ರೋಗ ಬಾಧೆ, ಉದರ ಬಾದೆ,ಅನಿರೀಕ್ಷಿತ ಪೆಟ್ಟು,ಯುವ ಉತ್ಸಾಹಿಗಳಿಗೆ ಅತ್ಯುತ್ತಮ ಫಲ ದೊರೆಯುತ್ತದೆ, ನಿಮ್ಮ ಅಪೇಕ್ಷೆಗಳು, ಶೀಘ್ರದಲ್ಲಿ ಈಡೇರಲಿವೆ. ಶತೃಗಳ ಬಾದೆ,ದೇಹದಲ್ಲಿ ಭುಜಗಳ ನೋವು, ಬೆನ್ನು ನೋವು ಸ್ವಲ್ಪಮಟ್ಟಿಗೆ ಕಾಡಲಿದೆ, ನಿಮ್ಮ ಸಹೋದರರ ಸಹಕಾರ ದೊರೆಯುವುದಿಲ್ಲ, ಮಾನಸಿಕ ಅಶಾಂತಿಯೂ ಇದೆ, ಸ್ತ್ರೀ ಸಂಪರ್ಕದಲ್ಲಿ ಬೇಸರೀ ದಿನ ಮಿಶ್ರ ಫಲ.

ಮಿಥುನ: ಆಸೆ ಆಕಾಂಕ್ಷೆಗಳಿಗೆ ಬಲಿಯಾಗುವಿರಿ, ಮಕ್ಕಳ ಜೀವನದ ಚಿಂತೆ, ವಿದ್ಯಾರ್ಥಿಗಳಿಗೆ ಅನುಕೂಲ, ಬೇಡದ ಸಂಬಂಧಗಳಿಂದ ಸಮಸ್ಯೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ದುಃಸ್ವಪ್ನಗಳು ಕಾಡುವುದು, ಶೃಂಗಾರ ಸಾಧನಗಳಿಗೆ ಖರ್ಚು ಈ ದಿನ ಮಿಶ್ರ ಫಲವಿದೆ.

ಕಟಕ: ಕುಟುಂಬದಲ್ಲಿ ನೋವು, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ಗ್ಯಾಸ್ಟ್ರಿಕ್ ಸಮಸ್ಯೆ, ಶತ್ರುಗಳ ಕಾಟ, ಮಾಟ-ಮಂತ್ರ ತಂತ್ರದ ಭೀತಿ, ಸೇವಕರು-ಕೂಲಿ ಕಾರ್ಮಿಕರಿಂದ ಸಂಕಷ್ಟ, ಆರ್ಥಿಕ ಸಮಸ್ಯೆಗಳು.

ಸಿಂಹ: ಸಂತಾನ ದೋಷ, ಒಂಟಿತನದ ಆಸೆ, ಆರೋಗ್ಯ ಸಮಸ್ಯೆ, ಕಾನೂನಿನ ಬಲೆಯಲ್ಲಿ ಸಿಲುಕುವಿರಿ, ಮನಸ್ಸಿನಲ್ಲಿ ಆತಂಕ, ದಂಡ ಕಟ್ಟುವ ಸನ್ನಿವೇಶ, ಉದ್ಯೋಗ ನಷ್ಟದ ಭೀತಿ, ನೆರೆಹೊರೆಯವರೊಂದಿಗೆ ಅಂತರ.

ಕನ್ಯಾ: ದೂರ ಪ್ರಯಾಣದಿಂದ ಅನುಕೂಲ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಭವಿಷ್ಯದ ಕನಸುಗಳಿಗೆ ಪೆಟ್ಟು, ಸ್ಥಿರಾಸ್ತಿ ವಾಹನದಿಂದ ನಷ್ಟ, ಮನೆ ವಾತಾವರಣದಲ್ಲಿ ಕಲುಷಿತ, ಹಿತ ಶತ್ರುಗಳಿಂದ ನೋವು.

ತುಲಾ: ಸ್ವಯಂಕೃತ ಅಪರಾಧದಿಂದ ಸಮಸ್ಯೆ, ಪ್ರಯಾಣದಲ್ಲಿ ನೋವು, ಪತ್ರ ವ್ಯವಹಾರದಲ್ಲಿ ಸಮಸ್ಯೆ, ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ಕೋರ್ಟ್ ಕೇಸ್‍ಗಳಲ್ಲಿ ಜಯದ ಸೂಚನೆ, ಮಾನಸಿಕ ವ್ಯಥೆ ಕಾಡುವುದು, ಅಹಂಭಾವ ಹೆಚ್ಚು, ಉಸಿರಾಟದ ಸಮಸ್ಯೆ, ಕಾಲು ನೋವು-ಭುಜ ನೋವು.

ವೃಶ್ಚಿಕ: ಆರ್ಥಿಕ ಸಂಕಷ್ಟ, ಆತ್ಮೀಯರು ದೂರವಾಗುವರು, ಬಂಧು-ಬಾಂಧವರಿಂದ ಕುಟುಂಬದಲ್ಲಿ ಕಿರಿಕಿರಿ, ಅನಗತ್ಯ ಮಾತುಗಳಿಂದ ಕಲಹ, ಸ್ಥಿರಾಸ್ತಿ ಗೊಂದಲ ಮುಂದುವರೆಯುವುದು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಗುರು ದೈವ ದರ್ಶನದ ಆಲೋಚನೆ, ಅನಗತ್ಯ ಖರ್ಚುಗಳು ಅಧಿಕ.

ಧನಸ್ಸು: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ವ್ಯಾಪಾರದಲ್ಲಿ ನಷ್ಟ, ಆರ್ಥಿಕ ಸಂಕಷ್ಟ, ಕುಟುಂಬದಿಂದ ದೂರವಾಗುವ ಆಲೋಚನೆ, ಒಂಟಿಯಾಗಿರಲು ಇಷ್ಟ ಪಡುವಿರಿ, ಶರೀರದಲ್ಲಿ ನೋವು, ಆಯುಷ್ಯದ ಬಗ್ಗೆ ಚಿಂತೆ, ಸಹೋದರಿಯಿಂದ ಅನುಕೂಲ.

ಮಕರ: ಸ್ವಯಂಕೃತ ಅಪರಾಧ, ಅನಗತ್ಯ ಸಂಬಂಧಗಳಿಂದ ಸೋಲು, ನಷ್ಟ ನಿರಾಸೆಗಳು ಕಾಡುವುದು, ನಿದ್ರೆಯಲ್ಲಿ ದುಃಸ್ವಪ್ನಗಳು, ಆರೋಗ್ಯದಲ್ಲಿ ಸಮಸ್ಯೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಿತ್ರರಿಂದ ಸಹಕಾರ, ದೂರ ಪ್ರದೇಶದಲ್ಲಿ ಅನುಕೂಲ.

ಕುಂಭ: ಸ್ಥಿರಾಸ್ತಿ ವಾಹನ ಲಾಭ, ಶುಭ ಕಾರ್ಯ ಯೋಗ, ಅದೃಷ್ಟ ಒಲಿದು ಬರುವುದು, ಬಡ್ತಿ ಮತ್ತು ಉತ್ತಮ ಹೆಸರು, ಕೆಲಸ ಕಾರ್ಯಗಳಲ್ಲಿ ಸೋಲು, ಉದ್ಯೋಗ-ವ್ಯವಹಾರದಲ್ಲಿ ನಷ್ಟ, ಆರೋಗ್ಯ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಮೀನ: ಮಾತನಾಡುವಾಗ ಎಚ್ಚರದಿಂದಿರಿ ,ಉದ್ಯೋಗ ಸ್ಥಳದಲ್ಲಿ ಒತ್ತಡ, ಮಹಿಳೆಯರಿಗೆ ಸೋಲು, ನಷ್ಟ ನಿರಾಸೆಗಳು ಕಾಡುವುದು, ಅನಿರೀಕ್ಷಿತ ದುರ್ಘಟನೆ, ನಿದ್ರಾಭಂಗ, ಲಾಭ ಕಡಿಮೆ-ನಷ್ಟ ಅಧಿಕ, ಮಿತ್ರರ ಜೀವನದಲ್ಲಿ ವ್ಯತ್ಯಾಸ, ಕೋರ್ಟ್ ಕೇಸ್‍ಗೆ ಅಲೆದಾಟ ಹಾಗೂ ಕಲಹ,ಆರೋಗ್ಯ ಮಧ್ಯಮ,ಗಣಪತಿ ಆರಾಧನೆ ಮಾಡಿ.
Leave a Reply

Your email address will not be published. Required fields are marked *