ಸೂರ್ಯ ಗ್ರಹಣ ಯಾವ ರಾಶಿಗೆ ಏನು ಫಲ!ದೋಷ ಪರಿಹಾರ ಏನು?

2094

ಜೂನ್ 21 ರಂದು ಖಂಡಗ್ರಾಸ ಸೂರ್ಯಗ್ರಹಣ ನಡೆಯಲಿದೆ. ಅಂದು ಬೆಂಗಳೂರಿನಲ್ಲಿ ಬೆಳಗ್ಗೆ 10-12 ಗ್ರಹಣ ಪ್ರವೇಶವಾಗಿ 1-30 ರ ತನಕ ಬೆಂಗಳೂರಿನಲ್ಲಿ ಗ್ರಹಣ ಗೋಚರಿಸಲಿದೆ.
ಸೂರ್ಯ ಗ್ರಹಣ ,ಚಂದ್ರಗ್ರಹಣಗಳಲ್ಲಿ ಅತ್ಯಂತ ಶ್ರೇಷ್ಠವಾದುದ್ದು ಸೂರ್ಯಗ್ರಹಣ ಎಂದು ಶಾಸ್ತ್ರಗಳಲ್ಲಿ ಹೇಳಲ್ಪಟ್ಟಿದೆ.

ಸೂರ್ಯಗ್ರಹಣದಲ್ಲಿ ಜೂನ್ 21 ರಂದು ನಡೆಯುವ ಗ್ರಹಣವು ಅತೀ ಶ್ರೇಷ್ಠವಾಗಿದೆ. ಇದಕ್ಕೆ ಚೂಡಾಮಣಿ ಸೂರ್ಯಗ್ರಹಣ ಎಂದು ಕರೆಯುತ್ತಾರೆ. ಇದಕ್ಕೆ ಕಾರಣ ಭಾನುವಾರ ಸೂರ್ಯಗ್ರಹಣ ಬಂದಾಗ ಹಾಗೂ ಚಂದ್ರಗ್ರಹಣ ಸೋಮವಾರ ಬಂದಾಗ ಆ ಗ್ರಹಣಕ್ಕೆ ಚೂಡಾಮಣಿ ಗ್ರಹಣ ಎಂದು ಕರೆಯುತ್ತಾರೆ.
ಈ ಗ್ರಹಣದಲ್ಲಿ ಏನನ್ನು ದಾನ ಮಾಡಿದರೂ ಅದು ಅನಂತ ಫಲ ನೀಡುತ್ತದೆ ಎಂದು ಶಾಸ್ತ್ರ ಹೇಳಿದೆ.
ಭಾನುವಾರ ಬರುವ ಸೂರ್ಯಗ್ರಹಣವು ಮಿಥುನರಾಶಿ ಮೃಗಶಿರ ನಕ್ಷತ್ರದಲ್ಲಿ ಗ್ರಹಣವಾಗುತ್ತದೆ.

ಮಿಥುನರಾಶಿ ಯ ಮೃಗಶಿರ ನಕ್ಷತ್ರದಲ್ಲಿ ಹುಟ್ಟಿದವರಿಗೆ ಅನಿಷ್ಟವಾದ ಫಲ ನೀಡುತ್ತದೆ.

ಮೃಗಶಿರ ನಕ್ಷತ್ರ ಜೊತೆಗೆ ಜನ್ಮತಾರೆ ಯಾವ ನಕ್ಷತ್ರಗಳಿಗೆ ಬರುತ್ತದೆಯೋ ಆಯಾ ನಕ್ಷತ್ರಗಳಿಗೆ ಅನಿಷ್ಟ ಬರುತ್ತದೆ.
ಜೊತೆಗೆ ರೋಹಿಣಿ,ಆದ್ರ ನಕ್ಷತ್ರಗಳಿಗೂ ಅನಿಷ್ಟ ಫಲ ಇರುವುದು.

ಯಾವ ರಾಶಿಗೆ ಶುಭ ಅಶುಭ ಫಲ ಇಲ್ಲಿದೆ.

ಶುಭಫಲ- ಮೇಷ,ಮಕರ,ಕನ್ಯ ,ಸಿಂಹ ರಾಶಿಗಳಿಗೆ ಅತ್ಯಂತ ಶುಭ ಫಲ.

ಮಧ್ಯಮ ಫಲ- ವೃಷಭ,ಧನು,ತುಲಾ,ಕುಂಭ.

ಅಶುಭಫಲ- ಕರ್ಕ,ಮಿಥುನ,ವೃಷ್ಚಿಕ,ಮೀನಾ.

ಗ್ರಹಣ ದೋಷ ಪರಿಹಾರ

ದಾನ,ಹೋಮ,ಜಪ,ದೇವತಾರ್ಚನೆ,ಗಿಡಮೂಲಿಕಾ ಔಷಧಿಗಳನ್ನು ಹಾಕಿದ ನೀರಿನಲ್ಲಿ ಸ್ನಾನ ಮಾಡಬೇಕು ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಿದೆ.

ಚಂದ್ರ ಮತ್ತು ಸೂರ್ಯ ಗ್ರಹಣದಲ್ಲಿ ದಾನ ಕೊಡುವ ಫಲ ಭೂಮಿ ದಾನ ಕೊಟ್ಟ ಪುಣ್ಯದಂತೆ.

ಬಂಗಾರದ ಸೂರ್ಯ ಬಿಂಬ,ನಾಗ ಬಿಂಬದ ಆಕೃತಿ ತಯಾರಿಸಿ ಕಂಚು ಅಥವಾ ತಾಂಬ್ರ ಪಾತ್ರೆಯಲ್ಲಿ ತುಪ್ಪ ತುಂಬಿಸಿ ಅದಕ್ಕೆ ಬಂಗಾರದಿಂದ ಮಾಡಿದ ಸೂರ್ಯ ಅಥವಾ ನಾಗ ಬಿಂಬವನ್ನು ಇಟ್ಟು ಎಳ್ಳು ವಸ್ತ್ರ ಹಾಗೂ ದಕ್ಷಿಣೆಯನ್ನಿಟ್ಟು ಸಂಕಲ್ಪ ಮಾಡಿ ಅದನ್ನು ಅರ್ಹ ತಪೋ ನಿಷ್ಟರಿಗೆ ದಾನ ಮಾಡಬೇಕು.

ದೇವ ಪೂಜೆ,ಕೀರ್ತನೆ ಜೊತೆಗೆ ಜಪ ಕೂಡ ಮಾಡಬೇಕು.

ದೋಷ ನಿವಾರಣೆ ಸ್ಲೋಕ-

ಜಪಾಕುಸುಮಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್|
ತಮೋರಿಂ ಸರ್ವಪಾಪಘ್ನಂ ಪ್ರಣತೋಸ್ಮಿ ದಿವಾಕರಂ||
?

ಔಷಧೀಯ ಸಸ್ಯಗಳಿಂದ ಗ್ರಹಣ ಪೂರ್ವ ಸ್ನಾನ :-

ತಾಂಬ್ರದ ಕಳಶದಲ್ಲಿ ದೇವಾದಾರೂ ,ತುಳಸಿ,ಪತ್ರೆ ಸೇರಿದಂತೆ ಗಿಡಮೂಲಿಕಾ ಔಷಧಿ ಸಸ್ಯಗಳನ್ನು ಹಾಕಿ ಸ್ನಾನ ಮಾಡುವುದರಿಂದ ದೋಷ ಪರಿಹಾರವಾಗಲಿದೆ.

ತಿರುಮಲ ಶರ್ಮ.ಜ್ಯೋತಿಷ್ಯ ಶಾಸ್ತ್ರಜ್ಞ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ