BREAKING NEWS
Search

ಚಂದನವನದಲ್ಲೊಂದು ಮನರೂಪ ಥ್ರಿಲ್ಲರ್ ಸೈಕಾಲಜಿ ಸಿನಿಮಾ! ಪೋಸ್ಟ್ ನೋಡಿದ್ರು ದಿಲ್ ಖುಷ್

285

ಬೆಂಗಳೂರು:- ಸ್ಯಾಂಡಲ್ ಉಡ್ ನಲ್ಲಿ ಹೊಸ ಸಿನಿಮಾಗಳಿಗೇನೂ ಕಮ್ಮಿಯಿಲ್ಲ ,ಆದರೇ ಕೆಲವು ಸಿನಿಮಾಗಳು ಪ್ರೇಕ್ಷಕನನ್ನು ತಲುಪುವಲ್ಲಿ ಅಡಿಮೇಲಾಗಿ ಮಲಗುತ್ತವೆ. ಆದ್ರೆ ಹೊಸ ಪ್ರಯೋಗಗಳಿಂದ ಉತ್ತಮ ಕಥೆ ನಿರ್ಮಾಣದಿಂದ ಪ್ರೇಕ್ಷಕನ ಮನಸ್ಸಿಗೆ ಮುಟ್ಟುವಲ್ಲಿ ಸಹ ಯಶಸ್ಸು ಕಾಣುತ್ತದೆ.

ಇಂತಹ ಸಿನಿಮಾಗಳ ಸಾಲೀಗೆ ಮನರೂಪ ಸಿನಿಮಾ ಸಹ ಸೇರಿದ್ದು ಈಗ ಪ್ರೇಕ್ಷಕನ ಹೃದಯ ಗೆಲ್ಲಲು ಸಿದ್ದತೆ ನಡರಸಿದೆ.

ಥ್ರಿಲ್ಲರ್ ಹಾಗೂ ಸೈಕಾಲಜಿಕಲ್ ವಿಚಾರಗಳನ್ನು ಇಟ್ಟು ಕೊಂಡು ವಿಶಿಷ್ಟ ರೀತಿಯಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ.

ಯುವ ಜನರನ್ನು ಕೇಂದ್ರವಾಗಿಸಿಕೊಂಡು ನಿರ್ಮಾಣವಾಗಿರುವ ಈ ಸಿನಿಮಾ ಯುವ ಮನಸ್ಸು ಗಳ ಭೌತಿಕವಾದ ಅಸ್ತಿತ್ವವಾದದ ಮಾಯಾ ಕನ್ನಡಿಯಲ್ಲಿ ತನ್ನನ್ನು ತಾನುವಹುಡುಕುತ್ತಾ ,ಕಳೆದುಕೊಳ್ಳುತ್ತಾ ಕೊನೆಯ ದಾರಿಯಲ್ಲಿ ಯಾರದೂ ಸಮ್ಮೋಹನಕ್ಕೆ ಸಿಲುಕಿರುವಂತೆ ಸಾಗುತಿದ್ದಾರೆ ಎಂಬುದನ್ನು ಚಿತ್ರ ದಲ್ಲಿ ಕಟ್ಟಿಕೊಡುತಿದ್ದಾರೆ ನಿರ್ದೇಶಕ ಕಿರಣ್ ಹೆಗಡೆ.

ಚಿತ್ರದಲ್ಲಿ ಒಬ್ಬೊಬ್ಬರು ಒಂದು ಭಯಕ್ಕೆ ಸಿಲುಕಿರುತ್ತಾರೆ,ಈ ಚಿತ್ರದಲ್ಲಿ ಮಾಸ್ಕಾಫೋಬಿಯಾ ಅಂದರೆ ಮುಖವಾಡ ನೋಡಿದರೂ ಹೆದರುವ ಮನಸ್ತಿತಿಯ ಬಗ್ಗೆ ಹೇಳಲಾಗಿದ್ದು ಸಮೂಹ,ಸಂಬಂಧಗಳ ಸಂಘರ್ಷ ,ಒಂಟಿತನ,ಅಪರಾದ ಮುಂತಾದ ವಿಷಯಗಳ ಬಗ್ಗೆ ಹೇಳಲಾಗಿದೆ.

ಸಂಪೂರ್ಣ ಹೊಸಬರ ತಂಡ !


ಈ ಚಿತ್ರದಲ್ಲಿ ಸಂಪೂರ್ಣ ಹೊಸಬರಿಂದ ಕೂಡಿದೆ.ದಿಲೀಪ್ ಕುಮಾರ್,ಅನುಷಾರಾವ್,ನಿಶಾ,ನಿ.ನಾಸಂ ಪ್ರಜ್ವಲ್ ಗೌಡ ಸೇರಿದಂತೆ ಬಹುತೇಕ ಹೊಸ ಮುಖಗಳು ನಟಿಸಿವೆ,ಈ ಚಿತ್ರಕ್ಕೆ ಕಥೆ,ಚಿತ್ರಕಥೆಯನ್ನು ಕಿರಣ್ ಹೆಗಡೆ ಬರೆದು ನಿರ್ದೇಶಿಸಿದ್ದಾರೆ.

ಸಕತ್ ಆಗಿದೆ ಟ್ರೈಲರ್ ಪೋಸ್ಟರ್ !


ಈ ಸಿನಿಮಾದ ಪೋಸ್ಟರ್ ಹಾಗೂ ಟ್ರೈಲರ್ ಅದ್ಭುತವಾಗಿ ಮೂಡಿಬಂದಿದ್ದು ಪೊಸ್ಟರ್ ನೋಡಿಯೇ ಈ ಸಿನಿಮಾದ ಕಲಾತ್ಮಕಥೆ ಊಹಿಸಬಹುದಾಗಿದೆ.
ಆದರೇ ಪ್ರೇಕ್ಷಕ ಈ ಹೊಸತನಕ್ಕೆ ಚಪ್ಪಾಳೆ ತಟ್ಟಿ ಬೆನ್ನು ತಟ್ಟಿ ಪ್ರೋತ್ಸಾಹಿಸುವನೇ ಎಂಬುದನ್ನು ಮಾತ್ರ ಪ್ರೇಕ್ಷಕನೇ ಹೇಳಬೇಕಿದೆ.




Leave a Reply

Your email address will not be published. Required fields are marked *