ತಾಯಿ ಆಗುವ ಸಂಭ್ರಮದಲ್ಲಿದ್ದ ಮೇಘನಾ, ಚಿರನಿದ್ರೆಗೆ ಜಾರಿದ ಚಿರಂಜೀವಿ!

966

ಬೆಂಗಳೂರು: ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ನಟ ಚಿರಂಜೀವಿ ಸರ್ಜಾ ಮಧ್ಯಾಹ್ನ 3.48 ಕ್ಕೆ ಮೃತಪಟ್ಟಿದ್ದಾರೆ.

ಭಾನುವಾರ ಮಧ್ಯಾಹ್ನ 2.20 ರ ಸುಮಾರಿಗೆ ಚಿರಂಜೀವಿ ಸರ್ಜಾ ಅವರನ್ನು ಅಪೋಲೊ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ತೀವ್ರ ಅಸ್ವಸ್ಥರಾಗಿದ್ದ ಅವರಿಗೆ ತುರ್ತುಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಯ ವೈದ್ಯರ ತಂಡ ಕೂಡಲೇ ಕಾರ್ಯೋನ್ಮುಖರಾಗಿ ಚಿರಂಜೀವಿ ಸರ್ಜಾ ಅವರಿಗೆ ಅಗತ್ಯವಾದ ಚಿಕಿತ್ಸೆ ನೀಡಿದ್ದು ಈ ವೇಳೆ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ.

ವೈದ್ಯರ ತಂಡ ಕೊನೆ ಕ್ಷಣದವರೆಗೂ ಚಿರಂಜೀವಿ ಸರ್ಜಾ ಅವರನ್ನು ಉಳಿಸಿಕೊಳ್ಳಲು ಸತತ ಪ್ರಯತ್ನಗಳನ್ನು ನಡೆಸಿದ್ದು, ಆದರೆ ವಿಧಿಯಾಟದ ಎದುರು ವೈದ್ಯರ ಪ್ರಯತ್ನ ಕೈಗೂಡಿಲ್ಲ. 3.48 ಕ್ಕೆ ಚಿರಂಜೀವಿ ಸರ್ಜಾ ನಿಧನರಾಗಿದ್ದಾರೆ ಎಂದು ಅಪೋಲೋ ಆಸ್ಪತ್ರೆಯಿಂದ ಪ್ರಕಟಣೆ ನೀಡಲಾಗಿದೆ.

ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ತುಮಕೂರಿನ ಮಧುಗಿರಿಯ ಜಕ್ಕೇನಹಳ್ಳಿಯಲ್ಲಿ ಅಂತ್ಯಕ್ರಿಯೆ ಮಾಡುವ ಸಾಧ್ಯತೆ ಇದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಅರ್ಜುನ್ ಸರ್ಜಾ ಹಾಗೂ ಅವರ ಅಜ್ಜಿಗಾಗಿ ಕುಟುಂಬ ಕಾಯುತ್ತಿದೆ. ಅರ್ಜುನ್ ಸರ್ಜಾ ಬೆಂಗಳೂರಿಗೆ ಸಮಯಾವಕಾಶ ಬೇಕಾಗಿರುವುದರಿಂದ ಸೋಮವಾರ ಅಂತ್ಯಕ್ರಿಯೆ ಮಾಡಲು ಸಿದ್ದತೆ ನಡೆಸಲಾಗಿದೆ.

1980 ರಂದು ಆಕ್ಟೋಬರ್​ 17ರಂದು ಬೆಂಗಳೂರಿನಲ್ಲಿ ಜನಿಸಿದ್ದ ಅವರು, ಹಿರಿಯ ನಟ ಶಕ್ತಿ ಪ್ರಸಾದ್ ಅವರ​ ಮೊಮ್ಮಗ ಮತ್ತು ನಟ ಅರ್ಜುನ್​ ಸರ್ಜಾ ಅಳಿಯ.

ಬಾಲ್ಡವಿನ್​ ಬಾಲಕರ ಹೈ ಸ್ಕೂಲ್​ನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದರು. ಬಳಿಕ ವಿಜಯ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಅಲ್ಲದೇ 4 ವರ್ಷ ಅರ್ಜುನ್​ ಸರ್ಜಾ ಜೊತೆ ಸಹ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದ್ದರು.

ವಾಯುಪುತ್ರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಚಿರಂಜೀವಿ ಸರ್ಜಾ ಅವರು 22ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಚಿರಂಜೀವಿ ಸರ್ಜಾ ಅಭಿನಯದ ಚಿತ್ರಗಳು
ವಾಯುಪುತ್ರ, ಗಂಡೆದೆ, ಚಿರು, ದಂಡಂ ದಶಗುಣಂ, ಕೆಂಪೇಗೌಡ, ವರದನಾಯಕ, ವಿಶಲ್, ಚಂದ್ರಲೇಖ, ಅಜಿತ್​,
ರುದ್ರತಾಂಡವ, ಆಟಗಾರ, ರಾಮ್​ಲೀಲಾ, ಆಕೆ, ಭರ್ಜರಿ, ಪ್ರೇಮ ಬರಹ, ಸಂಹಾರ, ಅಮ್ಮ ಐ ಲವ್​ ಯೂ,
ಸಿಂಗ, ಖಾಕಿ, ಆದ್ಯಾ, ಶಿವಾರ್ಜುನ, ರಾಜಮಾರ್ತಾಂಡ, ಏಪ್ರಿಲ್​, ರಣಂ, ಕ್ಷತ್ರಿಯಾ ಸಿನಿಮಾಗಳು ಶೂಟಿಂಗ್​ ಹಂತದಲ್ಲಿದೆ.

2018ರಲ್ಲಿ ನಟಿ ಮೇಘನಾ ರಾಜ್ ಜೊತೆ ಚಿರಂಜೀವಿ ಸರ್ಜಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಸದ್ಯ ಮೇಘನ ಗರ್ಭವತಿಯಾಗಿದ್ದು ಮನೆಗೆ ಹೊಸ ಬೆಳಕು ಬರುವ ಮುಂಚೆಯೇ ಮನೆಯ ದೀಪ ಆರಿದೆ.
Leave a Reply

Your email address will not be published. Required fields are marked *