BREAKING NEWS
Search

ಭಾನುವಾರದ ದಿನ ಭವಿಷ್ಯ

243

ಪಂಚಾಂಗ

ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಮೂಲ ನಕ್ಷತ್ರ, ಭಾನುವಾರ,

ರಾಹುಕಾಲ: ಸಂಜೆ 5:10 ರಿಂದ 6:45
ಗುಳಿಕಕಾಲ: ಮಧ್ಯಾಹ್ನ 3:36 ರಿಂದ 5:10
ಯಮಗಂಡಕಾಲ: ಮಧ್ಯಾಹ್ನ 12:28 ರಿಂದ 2:02

ಮೇಷ: ಇಂದು ಅತ್ಯಂತ ಸಂಕಷ್ಟಗಳಿಂದ ಕೂಡಿದ ದಿನ ನಿಮ್ಮದಾಗಲಿದೆ. ಆದರೆ ಸಹನೆ ಕಳೆದುಕೊಳ್ಳದೇ ತಾಳ್ಮೆಯಿಂದ ನಡೆದುಕೊಳ್ಳಬೇಕಾದ ಅಗತ್ಯವಿದೆ. ವಿದ್ಯಾರ್ಥಿಗಳಲ್ಲಿ ನಿರುತ್ಸಾಹ ಕಂಡುಬಂದೀತು.ತಾಳ್ಮೆ ಅತ್ಯಗತ್ಯ, ಪ್ರಭಾವಿ ವ್ಯಕ್ತಿಗಳ ಭೇಟಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮನಸ್ಸಿನಲ್ಲಿ ಗೊಂದಲ, ಅಧಿಕ ತಿರುಗಾಟ.

ವೃಷಭ: ಸಂದಿಗ್ಧತೆಗಳು ಎದುರಾದಾಗ ಗೆಳೆಯರಿಂದ ಸೂಕ್ತ ಸಲಹೆಗಳು ಸಿಕ್ಕಿ ಪರಿಹಾರ ಕಂಡುಕೊಳ್ಳುವಿರಿ. ವೃತ್ತಿರಂಗದಲ್ಲಿ ಮುನ್ನಡೆಯಿರುತ್ತದೆ. ಪ್ರೇಮಿಗಳ ಪಾಲಿಗೆ ಮಹತ್ವದ ದಿನ. ದಿನದಂತ್ಯಕ್ಕೆ ಶುಭ ವಾರ್ತೆ.
ಮಿತ್ರರಿಂದ ಭೇಟಿ, ಹಳೇ ಸಾಲ ಮರುಪಾವತಿ, ದಾಂಪ್ಯದಲ್ಲಿ ಪ್ರೀತಿ, ವೈಯುಕ್ತಿಕ ಕೆಲಸಗಳಲ್ಲಿ ಮುನ್ನಡೆ, ದುಷ್ಟರಿಂದ ದೂರವಿರಿ, ಶತ್ರುಗಳ ಬಾಧೆ, ಉದ್ಯೋಗದಲ್ಲಿ ಕಿರಿಕಿರಿ.

ಮಿಥುನ: ಎಲ್ಲರ ಮನಸ್ಸು ಗೆಲ್ಲುವಿರಿ, ಅಮೂಲ್ಯ ವಸ್ತುಗಳ ಖರೀದಿ, ಮಾನಸಿಕ ನೆಮ್ಮದಿ, ಯಾರನ್ನೂ ಹೆಚ್ಚು ನಂಬಬೇಡಿ, ಆಲಸ್ಯ ಮನೋಭಾವ, ಅತಿಯಾದ ಕೋಪ, ಆರೋಗ್ಯದಲ್ಲಿ ವ್ಯತ್ಯಾಸ, ಹಿತ ಶತ್ರುಗಳ ಕಾಟ.

ಕಟಕ: ಸಹೋದ್ಯೋಗಿಗಳ ಜೊತೆ ವೈಮನಸ್ಸು, ಸ್ನೇಹದಿಂದ ಕಾರ್ಯ ಯಶಸ್ಸು, ಆರೋಗ್ಯದಲ್ಲಿ ಚೇತರಿಕೆ, ಗುರಿ ಸಾಧನೆಗೆ ಸುಸಮಯ, ದೂರ ಪ್ರಯಾಣ, ಈ ವಾರ ಮಿಶ್ರ ಫಲ ಪ್ರಾಪ್ತಿ.

ಸಿಂಹ:ಆರ್ಥಿಕವಾಗಿ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ವಾದ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವುದು ಒಳಿತು. ಆರೋಗ್ಯದಲ್ಲಿ ಹಂತ ಹಂತವಾಗಿ ಚೇತರಿಕೆ ಕಾಣುವಿರಿ
ಇತರರ ಮಾತಿನಿಂದ ಕಲಹ, ಮಾತಿನ ಚಕಮಕಿ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ಸಣ್ಣ ವಿಚಾರಗಳಿಂದ ಮನಃಸ್ತಾಪ, ತೀರ್ಥಯಾತ್ರೆ ದರ್ಶನ, ಅನಗತ್ಯ ವಿಚಾರಗಳಿಂದ ದೂರ ಉಳಿಯಿರಿ.

ಕನ್ಯಾ: ಕುಟುಂಬದಲ್ಲಿ ಜವಾಬ್ದಾರಿ ಹೆಚ್ಚಾಗುವುದು, ಅನ್ಯ ಜನರಲ್ಲಿ ವೈಮನಸ್ಸು, ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ, ಮಕ್ಕಳಿಂದ ನಿಂದನೆ, ಸ್ವಯಂಕೃತ ಅಪರಾಧದಿಂದ ತೊಂದರೆ, ಮಾನಸಿಕ ವ್ಯಥೆ, ಈ ವಾರ ಅಶುಭ ಫಲ ಯೋಗ.

ತುಲಾ: ಅನ್ಯ ಜನರಲ್ಲಿ ವೈಮನಸ್ಸು, ಪರರ ಧನ ಪ್ರಾಪ್ತಿ, ದ್ರವ್ಯ ಲಾಭ, ಸುಖ ಭೋಜನ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಅನಿರೀಕ್ಷಿತ ಸಂಕಷ್ಟಗಳ ಬಾಧೆ.

ವೃಶ್ಚಿಕ: ಅಪರಿಚಿತರಿಂದ ಕಲಹ, ಮಾತಿನಲ್ಲಿ ಹಿಡಿತವಿರಲಿ, ಅತಿಯಾದ ನಿದ್ರೆ, ಮಹಿಳೆಯರಿಗೆ ವಿಶೇಷ ಲಾಭ, ಅಧಿಕವಾದ ಖರ್ಚು, ಪ್ರಿಯ ಜನರ ಭೇಟಿ, ಮಾನಸಿಕ ನೆಮ್ಮದಿ.

ಧನಸ್ಸು: ಸ್ತ್ರೀಯರಿಗೆ ಲಾಭ, ಮಾತೃವಿನಿಂದ ಸಹಾಯ, ಸ್ಥಳ ಬದಲಾವಣೆ, ಆರೋಗ್ಯದಲ್ಲಿ ವ್ಯತ್ಯಾಸ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ಉದ್ಯೋಗದಲ್ಲಿ ಪ್ರಗತಿ, ಅಲ್ಪ ಆದಾಯ, ಅಧಿಕವಾದ ಖರ್ಚು.

ಮಕರ: ಆತ್ಮೀಯರ ಆಗಮನದಿಂದ ನೆಮ್ಮದಿ, ಪ್ರತಿಭೆಗೆ ತಕ್ಕ ಫಲ, ಬಾಕಿ ಹಣ ಕೈ ಸೇರಲಿದೆ, ಮಾನಸಿಕ ನೆಮ್ಮದಿ, ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ, ಹಿರಿಯರಿಂದ ಬೆಂಬಲ,

ಕುಂಭ: ಆತ್ಮೀಯರಿಂದ ಸಹಾಯ, ವಾಹನ ಅಪಘಾತ ಸಾಧ್ಯತೆ, ಉದ್ಯೋಗದಲ್ಲಿ ಕಿರಿಕಿರಿ, ಸ್ಥಿರಾಸ್ತಿ ಖರೀದಿಯೋಗ, ಉತ್ತಮ ಬುದ್ಧಿಶಕ್ತಿ, ಸಂಗಾತಿಯಿಂದ ಸಲಹೆ, ಈ ವಾರ ಮಿಶ್ರ ಫಲ.

ಮೀನ: ಆಪ್ತರೊಂದಿಗಿನ ಕಲಹ ಮನಸ್ಸಿಗೆ ಬೇಸರವುಂಟುಮಾಡಲಿದೆ. ನಿರುದ್ಯೋಗಿಗಳಿಗೆ ಸರ್ಕಾರಿ ಉದ್ಯೋಗಕ್ಕೆ ಕರೆ ಬರುವುದು. ಹೊಸ ಯೋಜನೆಗಳನ್ನು ರೂಪಿಸುವಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರವುದು.
ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಗೆಳೆಯರಿಂದ ಅನರ್ಥ, ದೈವಿಕ ಚಿಂತನೆ, ವಿದ್ಯಾರ್ಥಿಗಳಲ್ಲಿ ಪ್ರಗತಿ, ವ್ಯಾಪಾರದಲ್ಲಿ ಏರುಪೇರು, ಕಾರ್ಯದಲ್ಲಿ ವಿಳಂಬ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಋಣ ಬಾಧೆ.
Leave a Reply

Your email address will not be published. Required fields are marked *