ಶ್ರೀದೇವಿ ಹಾಗೂ ಗಿರೀಶಗೆ ಸುಮನ್ ಸೋಮಶೇಖರ ಸೋಮವಾರಪೇಟೆ ದತ್ತಿ ಪ್ರಶಸ್ತಿ

312

ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಸುಮನ್ ಸೋಮಶೇಖರ ಸೋಮವಾರಪೇಟೆ ದತ್ತಿ ಪ್ರಶಸ್ತಿ ಶ್ರೀದೇವಿ ಕೆರೆಮನೆ ಹಾಗೂ ಗಿರೀಶ್ ಜಕಾಪುರೆ ರಚಿಸಿರುವ ನನ್ನ ದನಿಗೆ ನಿನ್ನ ದನಿಯು ಎನ್ನುವ ಗಜಲ್‌ನ ಜುಗಲ್ ಸಂಕಲನಕ್ಕೆ ದೊರೆತಿದೆ. ಸಾಹಿತ್ಯ ಲೋಕದಲ್ಲಿ ಇದು ವಿನೂತನ ಸಂಕಲನವಾಗಿದೆ.  ಈ ಪುಸ್ತಕವು ಇಡೀ ಗಜಲ್ ಸಾಹಿತ್ಯ ಲೋಕದ ಮೈಲುಗಲ್ಲಿನಂತಿದೆ. ಶ್ರೀದೇವಿ ಕೆರೆಮನೆ ಹಾಗೂ ಗಿರೀಶ ಜಕಾಪುರೆ ಇಬ್ಬರೂ ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ಗಣನೀಯ ಸಾಧನೆ ಮಾಡಿದ್ದು  ತಮ್ಮದೇ ಛಾಪು ಮೂಡಿಸಿದ್ದಾರೆ ಇಲ್ಲಿಯವರೆಗೆ ಶ್ರೀದೇವಿ ಕೆರೆಮನೆಯವರು ಹದಿನೈದು ಪುಸ್ತಕಗಳನ್ನು ಹಾಗೂ ಗಿರೀಶ ಜಕಾಪುರೆಯವರು ಇಪ್ಪತ್ತೈದು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇಬ್ಬರೂ ಈವರೆಗೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ