ಇಂದಿನಿಂದ ಕನ್ನಡವಾಣಿ ನಿಮ್ಮ ಮಡಿಲಿಗೆ

1120

ನಿಮ್ಮ ನಿರೀಕ್ಷೆಗೆ ಇಂದು ಕನ್ನಡವಾಣಿ ವೆಬ್ ಪೋರ್ಟಲ್ ಅಧಿಕೃತವಾಗಿ ಸುದ್ದಿಗಳನ್ನು ಹಾಕುವ ಮೂಲಕ ಓದುಗರಾದ ನಿಮ್ಮ ಮುಂದೆ ಬಂದಿದ್ದೇವೆ.ಸದಾ ವಿಶಿಷ್ಟ ಸುದ್ದಿಗಳನ್ನು ಹೊತ್ತು ನಿಮ್ಮೂಂದಿಗೆ ನಾವು ಬೆರೆಯಲಿದ್ದೇವೆ.ರಾಜಕಾರಣಿಗಳ ಅಥವಾ ಯಾವುದೇ ವ್ಯಕ್ತಿಗಳ ವೈಭವೀಕರಣ ಮಾಡದೇ ನೇರ ನಿಷ್ಟೂರ ಸುದ್ದಿಗಳನ್ನು ನೀಡುವುದೇ ನಮ್ಮ ಗುರಿ.ನಿಮ್ಮ ಹಾರೈಕೆ ಇಲ್ಲದೇ ಯಾವುದೂ ನಡೆಯುವುದಿಲ್ಲ.ಹರಸಿ ಹಾರೈಸಿ ಪ್ರೋತ್ಸಾಹಿಸಿ.

ಕನ್ನಡವಾಣಿ ವೆಬ್ ಪೋರ್ಟಲ್ ಕರಾವಳಿ ಕರ್ನಾಟಕ ದಿಂದ ಹಿಡಿದು ಮಲೆನಾಡಿನ ಜಿಲ್ಲೆಗಳವರೆಗೆ ವಿಸ್ತಾರಗೊಂಡಿದೆ.ಪ್ರತಿ ಜಿಲ್ಲೆಯ ಪ್ರಮುಖ ಸುದ್ದಿಗಳು ನಿಮ್ಮ ಮುಂದೆ ಪ್ರತಿ ಕ್ಷಣ ಬೆರಳಂಚಿನಲ್ಲಿ ನೀಡುವ ಆಸೆ ನಮ್ಮದು. ಇದಕ್ಕಾಗಿ ಒಂದು ಚಿಕ್ಕ ತಂಡ ಕಾರ್ಯನಿರ್ವಹಿಸುತ್ತಿದೆ.

 

ಇದು ನಮ್ಮ ತಂಡ

ಸಂಪಾದಕೀಯ ಸಲಹಾ ಮಂಡಳಿ-

ಶ್ರೀರಾಜ್ ಗುಡಿ-

ಶ್ರೀರಾಜ್ ಗುಡಿ.

ದೆಹಲಿಯಲ್ಲಿ ಪತ್ರಕರ್ತರಾಗಿ ವೃತ್ತಿ ಆರಂಭಿಸಿ ಈಟಿವಿ ವಾಹಿನಿ , ಎ.ಎನ್.ಐ ನಲ್ಲಿ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸಿ ಇಂದು ಮಾಹೆ ಸ್ಕೂಲ್ ಆಫ್ ಕಮ್ಯುನಿಕೇಶನ್,ಮಣಿಪಾಲ್ ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಶ್ರೀರಾಜ್ ಗುಡಿರವರು ನಮ್ಮ ತಂಡವನ್ನು ತಿದ್ದಲಿದ್ದಾರೆ.

ಶೈಲಜಾ ಗೊರಮನೆ-

ಶೈಲಜಾ ಗೊರಮನೆ.

19 ವರ್ಷಗಳಿಂದ ದೃಶ್ಯಮಾಧ್ಯಮದಲ್ಲಿ ಕಾರ್ಯನಿರ್ವಹಿಸಿ ಪ್ರಸಕ್ತ ಇಂಡಿಯಾ ಟುಡೆ ರಾಷ್ಟ್ರೀಯ ವಾಹಿನಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಶೈಲಜಾ ಗೊರಮನೆಯವರು ಬಿಬಿಸಿ ಯಿಂದ ಪರಿಸರ ವರದಿಗಾರ್ತಿ ಪ್ರಶಸ್ತಿ ಪಡೆದವರಾಗಿದ್ದಾರೆ.ಮಹಿಳಾ ಸಂಘಟನೆ,ಸಾಂತ್ವನ ಕೇಂದ್ರಗಳಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ನಮ್ಮ ತಂಡದೊಂದಿಗಿರಲಿದ್ದಾರೆ.

ಶುಭ ಕೆರೆಕೈ

ಶುಭ ಕೆರೆಕೈ

ಬರವಣಿಗೆ ಆಸಕ್ತಿ ಪ್ರೀತಿ, ಏನಾದರೂ ಒಂದು ಉತ್ತಮ ಕೆಲಸ ಸಮಾಜಕ್ಕೆ ಮಾಡಬೇಕೆನ್ನುವ ಆಸಕ್ತಿ ಇವರದ್ದು. ಈ ಸಂಸ್ಥೆಯ ಭಾಗವಾಗಿರುವ ಇವರು ಅಕೌಂಟೆಂಟ್ ಆಗಿ ಪ್ರಸಕ್ತ ಕಾರ್ಯ ನಿರ್ವಹಿಸುತಿದ್ದು ಕನ್ನಡ ವಾಣಿ ಸಂಸ್ಥೆಯ ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾರೆ.

 

ನಿಮ್ಮ ಮುಂದೆ ಬರುವವರು ಇವರು-

 

ನಮ್ಮ ಸಂಸ್ಥೆಯ ವರದಿಗಾರರು ಹುಬ್ಬಳಿ,ಧಾರವಾಡ,ಉಡುಪಿ,ಮಂಗಳೂರು,ಉತ್ತರ ಕನ್ನಡ,ಶಿವಮೊಗ್ಗ ಜಿಲ್ಲೆಗಳಲ್ಲದೇ ನೆರೆಯ ಗೋವಾದ ಸುದ್ದಿಗಳನ್ನೂ ಹೊತ್ತು ತರಲಿದ್ದಾರೆ. ಇವುಗಳಲ್ಲಿ ಕೆಲವು ಲೇಖಕರು,ಅಂಕಣಗಾರರು ನಮ್ಮೊಂದಿಗಿದ್ದು ಪ್ರಮುಖರ ಪರಿಚಯ ಮಾಡಿಸುತಿದ್ದೇನೆ.

ಲಕ್ಷ್ಮೀಶ್ ಸೋಂದಾ-

ಲಕ್ಷ್ಮೀಶ್ ಸೋಂದಾ

ಇತಿಹಾಸ ಉಪನ್ಯಾಸಕರು ಹಾಗೂ ಸಂಶೋಧಕರಾಗಿರುವ ಇವರು ಉತ್ತಮ ಬರಹಗಾರರು.ಇತಿಹಾಸ ಸಂಶೋಧನೆಯ 10 ಕೃತಿಗಳನ್ನು ಹೊರತಂದಿರುವ ಇವರ 400ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ.ಇದಲ್ಲದೇ ಪ್ರತಿ ವರ್ಷ ಶಿರಸಿಯಲ್ಲಿ ನಡೆಯುವ ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನದ ಸಂಘಟನೆಯ ಸಂಚಾಲಕತ್ವ ವಹಿಸಿದ್ದಾರೆ.ಇವರ ಸಂಶೋಧನಾ ಕಾರ್ಯಕ್ಕಾಗಿ 2013 ರಲ್ಲಿ ಬಸವರಾಜ್ ಕಟ್ಟೀಮುನಿ ರಾಜ್ಯ ಪ್ರಶಸ್ತಿ ಮತ್ತು 2016 ರಲ್ಲಿ ಕದಂಬ ಸೇವಾ ರತ್ನ ರಾಜ್ಯ ಪ್ರಶಸ್ತಿ ಪಡೆದವರಾಗಿದ್ದಾರೆ.ಇವರು ನಮ್ಮ ನೆಲದ ಹೆಜ್ಜೆ ಎನ್ನುವ ವಿಶೇಷ ಅಂಕಣವನ್ನು ಕನ್ನಡ ವಾಣಿಯಲ್ಲಿ ಪ್ರಾರಂಭಿಸಲಿದ್ದಾರೆ.

ಅಂಜನ್ ಕಾಯ್ಕಿಣಿ-

ಅಂಜನ್ ಕಾಯ್ಕಿಣಿ.

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ವೃತ್ತಿಯಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿರುವ ಇವರು ಪ್ರವೃತ್ತಿಯಲ್ಲಿ ಛಾಯಾಗ್ರಾಹಕ,ಹವ್ಯಾಸಿ ವರದಿಗಾರರಾಗಿರುವ ಇವರು ನಮ್ಮ ತಂಡದಲ್ಲಿ ಸಕ್ರಿಯರಾಗಿರುವರು.

ನಮಿತಾ ಅರುಣ್-

ನಮಿತಾ ಅರುಣ್.

ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಇವರು ಮೂಲತಹಾ ಬಾಗಲಕೋಟೆಯವರು.ಪ್ರವೃತ್ತಿಯಲ್ಲಿ ಲೇಖಕರಾಗಿರುವ ಇವರು ನಮ್ಮ ತಂಡದಲ್ಲಿ ಲೈಫ್ ಸ್ಟೈಲ್ ಹಾಗೂ ವಿಶೇಷ ವಿಭಿನ್ನ ಸುದ್ದಿಗಳನ್ನು ನೀಡಲಿದ್ದಾರೆ.

 
One thought on “ಇಂದಿನಿಂದ ಕನ್ನಡವಾಣಿ ನಿಮ್ಮ ಮಡಿಲಿಗೆ

Leave a Reply

Your email address will not be published. Required fields are marked *

error: Content is protected !!