BREAKING NEWS
Search

ತಿಂಗಳಲ್ಲಿ ಎರಡು ಲಕ್ಷ ದಾಟಿದ ಕನ್ನಡವಾಣಿ ಓದುಗರ ಸಂಖ್ಯೆ-ಧನ್ಯವಾದಗಳು.

610

ಕನ್ನಡ ವಾಣಿ ಪತ್ರಿಕೆ ಲೋಕಲ್ ಸುದ್ದಿಗಳನ್ನ ಲೋಕಕ್ಕೆ ತಿಳಿಸಬೇಕು ಎಂಬ ಹಂಬಲದಿಂದ ಜನರ ಅಂಗೈ ನಲ್ಲಿಯೇ ಉಚಿತ ಸುದ್ದಿಗಳನ್ನು ನೀಡುವ ಕಾಯಕಕ್ಕೆ ಮುಂದಾಗಿ ಮೂರು ವರ್ಷಗಳು ಸಂದಿವೆ.

ಸ್ಥಳೀಯ ಸುದ್ದಿಗಳಿಗೆ ಹೆಚ್ಚು ಮಹತ್ವ ಕೊಟ್ಟು ವಿಭಿನ್ನ ಸುದ್ದಿಗಳನ್ನು ಕೊಡಬೇಕು ಎಂಬ ಹಂಬಲದಲ್ಲಿ ಹಲವು ವರ್ಷಗಳಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕಾರ್ಯನಿರ್ವಹಿಸಿ ಪತ್ರಕರ್ತರನ್ನೊಳಗೊಂಡ ತಂಡದಿಂದ ಕನ್ನಡವಾಣಿಯನ್ನು ಹುಟ್ಟುಹಾಕಿದೆ.

ನಿಕರತೆ,ಶೀಘ್ರ ವಿಭಿನ್ನ ಸುದ್ದಿ ಕೊಡಬೇಕು ಎಂಬ ಹಂಬಲ ಸದಾ ಇದೆ. ನಮ್ಮ ಬೆನ್ನಿಗೆ ಹಲವು ಫೇಸ್ ಬುಕ್ ಪೇಜ್ ಗಳು ,ವಾಟ್ಸ್ ಅಪ್ ಗ್ರೂಪ್ ಗಳ ಅಡ್ಮಿನ್ ಗಳು ಅವಕಾಶ ಮಾಡಿಕೊಟ್ಟು ಜನರಿಗೆ ಸುದ್ದಿ ತಲುಪಲ ನಮ್ಮ ಜೊತೆ ಕೈಜೋಡಿಸಿದ್ದಾರೆ.

ಗೂಗಲ್ ನಲ್ಲಿ ರಾಜ್ಯ ಮಟ್ಟದಲ್ಲಿ ಟ್ರಂಡಿಂಗ ಆದ ಸುದ್ದಿಗಳು.

ಕರಾವಳಿ,ಮಲೆನಾಡು ಭಾಗದ ಸ್ಥಳೀಯ ಪ್ರಮುಖ ಸುದ್ದಿಗಳನ್ನು ನಮ್ಮ ತಂಡ ಓದುಗರ ಮುಂದಿಡುತ್ತಾ ಬಂದಿದೆ. ಗೂಗಲ್ ಮಾನ್ಯತೆ ,ರಾಜ್ಯದಲ್ಲಿ ಗೂಗಲ್ ಟ್ರಂಡಿಂಗ್ ಮೂಲಕ ಕನ್ನಡವಾಣಿ ತನ್ನ ಸ್ಥಾನ ಗಟ್ಟಿಗೊಳಿಸಿಕೊಂಡು ಬಂದಿದೆ.ಇದೀಗ ಓದುಗರ ಸಂಖ್ಯೆ ತಿಂಗಳಲ್ಲಿ 241,524 ದಾಟಿದೆ. ಹೊರ ದೇಶದಲ್ಲೂ ಸಹ ನಮ್ಮ ಓದುಗರು ಇರುವುದು ನಮಗೆ ಹೆಮ್ಮೆಯ ವಿಚಾರ.

ಇದೀಗ ವರ್ಷದಲ್ಲಿ ಕೋಟಿ ಓದುಗರು ನಮ್ಮ ಈ ಪತ್ರಿಕೆಯನ್ನು ಓದುತ್ತಿರುವುದು ನಮ್ಮ ಕಾರ್ಯಕ್ಕೆ ಮತ್ತಷ್ಟು ಬೆಂಬಲ ಸಿಕ್ಕಂತಾಗಿದೆ. ಓದುಗರಿಗೆ ಈ ಮೂಲಕ ಧನ್ಯವಾದವನ್ನು ಕನ್ನಡವಾಣಿ ತಂಡ ಸಲ್ಲಿಸುತ್ತದೆ.


ಮುಂದಿನ ದಿನಗಳಲ್ಲಿ ಮತ್ತಷ್ಟು ಓದುಗರಿಗೆ ಪ್ರಿಯವಾದ ವಿಷಯಗಳನ್ನು ನೀಡುವ ಕಾಯಕ ಮುಂದುವರೆಯಲಿದೆ.
ಇದರ ಜೊತೆಗೆ ಓದುಗರಿಂದಲೂ ಲೇಖನ,ಸುದ್ದಿಗಳನ್ನು ಆಹ್ವಾನಿಸುತಿದ್ದೇವೆ. ತಮಗೆ ಆಸಕ್ತಿ ಇದ್ದಲ್ಲಿ [email protected] ಗೆ ಮೇಲ್ ಮೂಲಕ ಸುದ್ದಿ ಕಳುಹಿಸಬಹುದು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!