BREAKING NEWS
Search

ಬುಧವಾರದ ದಿನ ಭವಿಷ್ಯ

296

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
ಬುಧವಾರ, ಪುಷ್ಯ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:25 ರಿಂದ 1:58
ಗುಳಿಕಕಾಲ: ಬೆಳಗ್ಗೆ 10:52 ರಿಂದ 12:25
ಯಮಗಂಡಕಾಲ: ಬೆಳಗ್ಗೆ 7:46 ರಿಂದ 9:19

ಮೇಷ: ಈದಿನ ಹೆಚ್ಚು ಶುಭ ವಾಗಿದೆ, ಬಾಕಿ ಹಣ ವಸೂಲಿ, ವಾಹನ ಖರೀದಿ ಯೋಗ, ಒಳ್ಳೆಯ ಅನುಕೂಲ, ಸುಖ ಭೋಜನ ಪ್ರಾಪ್ತಿ ಇದ್ದು ಆರೋಗ್ಯ ಉತ್ತಮವಿರುತ್ತದೆ,ಕೃಷಿ ಕೆಲಸಗಾರರಿಗೆ ಅಲ್ಪ ಹಿನ್ನಡೆ ಇದ್ದರೂ ಮಧ್ಯಾಂತರದಲ್ಲಿ ಶುಭವಿದೆ.

ವೃಷಭ: ಈ ದಿನ ಮಿಶ್ರ ಫಲ ಹೆಚ್ಚು, ನಂಬಿದವರು ಬೆನ್ನಿಗೆ ಚೊರಿ ಹಾಕಿಯಾರು,ಸಹೋದರರಿಂದ ಸಹಾಯ, ಹಣಕಾಸು ವಿಚಾರದ ಬಗ್ಗೆ ಎಚ್ಚರ, ಶತ್ರುಗಳ ಬಾಧೆ, ರಿಯಲ್ ಎಸ್ಟೇಟ್‍ನವರಿಗೆ ಅಲ್ಪ ಲಾಭ ,ಆರೋಗ್ಯ ಉತ್ತಮ.

ಮಿಥುನ:ಈ ದಿನ ಅಲ್ಪ ಕಿರಿಕಿರಿ ಇರುವುದು, ಮಾನಸಿಕ ವ್ಯಥೆ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ವಾಹನ ಅಪಘಾತ ಸಾಧ್ಯತೆ, ಸಣ್ಣ ಮಾತಿನಿಂದ ಕಲಹ ವಾಗಬಹುದು,ಆರೋಗ್ಯ ಉತ್ತಮವಿರುವುದು,ದಣಿವು ಹೆಚ್ಚುವುದು,ವ್ಯಾಪಾರಿಗಳಿಗೆ ಅಲ್ಪ ಲಾಭ ವಿರುವುದು.

ಕಟಕ: ಈ ದಿ‌ನ ನಿಮ್ಮ ಶ್ರಮಕ್ಕೆ ಫಲ ಸಿಗಲಿದೆ ,ಕೆಲಸ ಕಾರ್ಯಗಳಲ್ಲಿ ಪ್ರಗತಿ, ಆಕಸ್ಮಿಕ ಧನ ಲಾಭ, ಆರೋಗ್ಯದಲ್ಲಿ ಚೇತರಿಕೆ, ಸ್ಥಳ ಬದಲಾವಣೆ, ಅಧಿಕವಾದ ಖರ್ಚು ಇರಲಿದೆ.

ಸಿಂಹ: ಆರ್ಥಿಕವಾಗಿ ಅಲ್ಪ ಚೇತರಿಕೆ ಕಾಣಲಿದ್ದೀರಿ, ಸ್ನೇಹಿತರ ಹಾಗೂ ತಾಯಿಯ ಸಹಾಯ ದೊರೆಯಲಿದೆ, ಶುಭ ಸುದ್ದಿಗಳು ಬರಲಿವೆ, ವಸ್ತ್ರಾಭರಣ ಖರೀದಿ, ಮಾತಿನಲ್ಲಿ ಹಿಡಿತ ಅಗತ್ಯ ಮಾತುಗಳಿಂದ ಜನರನ್ನು ಕಳೆದುಕೊಳ್ಳುವಿರಿ,ದೇಹದಲ್ಲಿ ಅತಿಯಾದ ನೋವು,ವಾಯುಬಾದೆ ಕಾಣಲಿದೆ.

ಕನ್ಯಾ:ಈ ದಿನ ಮಧ್ಯಮ ,ಯತ್ನ ಕಾರ್ಯಗಳು ತಕ್ಷಣದಲ್ಲಿ ಫಲ ಕೊಡದು, ಸುತ್ತಾಟ ,ದೇಹಾಯಾಸ ಕಾಣುವುದು, ನಂಬಿದ ಜನರಿಂದ ಮೋಸ-ಅಶಾಂತಿ, ರಾಜ ವಿರೋಧ, ಯತ್ನ ಕಾರ್ಯದಲ್ಲಿ ಭಂಗ ವಾಗುವುದು ಹೆಚ್ಚು ,ಆರೋಗ್ಯದಲ್ಲಿ ಏರುಪೇರು, ಶೀತ ,ಆಯಾಸಗಳು ಕಾಡಲಿದೆ.

ತುಲಾ:ಹಣದ ತೊಂದರೆ ಅಷ್ಟಾಗಿ ಬರದು,ಆರೋಗ್ಯ ಮಧ್ಯಮ ವಾಗಿದೆ, ಆದಾಯಕ್ಕಿಂತ ಖರ್ಚು ಹೆಚ್ಚು, ಕುಟುಂಬದಲ್ಲಿ ಪ್ರೀತಿ, ಮಿತ್ರರ ಭೇಟಿ,ವ್ಯಾಪಾರಿಗಳಿಗೆ ಅಲ್ಪ ಲಾಭ ಏರಿಕೆ,ಉದ್ಯೋಗಿಗಳಿಗೆ ಒತ್ತಡ.

ವೃಶ್ಚಿಕ: ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ದಾಂಪತ್ಯದಲ್ಲಿ ಕಲಹ, ಅಕಾಲ ಭೋಜನ, ಕೆಟ್ಟ ಮಾತುಗಳನ್ನಾಡುವಿರಿ,ಆರೋಗ್ಯ ಉತ್ತಮ

ಧನಸ್ಸು: ಉದ್ಯೋಗದಲ್ಲಿ ಬಡ್ತಿ, ಕೆಲಸ ಕಾರ್ಯಗಳಲ್ಲಿ ಜಯ, ಮಾನಸಿಕ ನೆಮ್ಮದಿ, ಐಶ್ವರ್ಯ ವೃದ್ಧಿ, ಋಣ ವಿಮೋಚನೆ.

ಮಕರ: ಮಾನಸಿಕ ಚಿಂತೆ, ವಿವಾಹಕ್ಕೆ ಅಡಚಣೆ, ಸಾಲ ಮಾಡುವ ಪರಿಸ್ಥಿತಿ, ಉದ್ಯೋಗದಲ್ಲಿ ತೊಂದರೆ.

ಕುಂಭ: ನೀಚ ಜನರಿಂದ ದೂರವಿರಿ, ವೃಥಾ ತಿರುಗಾಟ, ಕುಟುಂಬ ಸೌಖ್ಯ, ಆರ್ಥಿಕ ಪರಿಸ್ಥಿತಿ ಉತ್ತಮ, ಮಾನಸಿಕ ನೆಮ್ಮದಿ.

ಮೀನ: ಈ ದಿನ ಮಿಶ್ರ ಫಲ ,ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ, ಶತ್ರುಗಳ ಭಯ, ವಿದ್ಯಾರ್ಥಿಗಳಲ್ಲಿ ಆತಂಕ, ವಿದೇಶ ಪ್ರಯಾಣ, ಸುಖ ಭೋಜನ,ಆರೋಗ್ಯ ಮಧ್ಯಮ ,ಶೀತ ವಾಯುಬಾದೆ ಅಜೀರ್ಣ ಕಾಡುತ್ತದೆ.




Leave a Reply

Your email address will not be published. Required fields are marked *