ಸೋಮವಾರದ ದಿನ ಭವಿಷ್ಯ

263

ಸೋಮವಾರ, ಜೂನ್ 10 2019
ಸೂರ್ಯೋದಯ : 5:52 am
ಸೂರ್ಯಾಸ್ತ: 6:45 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಜ್ಯೇಷ್ಠ
ಪಕ್ಷ : ಶುಕ್ಲಪಕ್ಷ
ತಿಥಿ :ಅಷ್ಟಮೀ 22:23
ನಕ್ಷತ್ರ :PurvaPhalguni 14:21
ಯೋಗ :ವಜ್ರ 11:35
ಕರಣ:ವಿಷ್ಟಿ 11:28 ಬಾವ 22:23

ಅಭಿಜಿತ್ ಮುಹುರ್ತ:11:53 am – 12:44 pm
ಅಮೃತಕಾಲ :8:21 am – 9:51 am

ರಾಹುಕಾಲ-7:32 am – 9:07 am
ಯಮಗಂಡ ಕಾಲ-10:43 am – 12:19 pm
ಗುಳಿಕ ಕಾಲ-1:54 pm – 3:30 pm

ಮೇಷ :-
ಈ ದಿನ ಮಿಶ್ರ ಫಲ ಕಾಣಲಿದ್ದೀರಿ,ಪ್ರಯತ್ನಶೀಲರಾದ ನೀವು ನಿಮ್ಮ ಪ್ರಯತ್ನಬಲಕ್ಕೆ ಒತ್ತು ಕೊಡಬೇಕಾಗುತ್ತದೆ. ಆಗಾಗ ಮಾನಸಿಕ ಅಸ್ಥಿರತೆ. ರಾಹುವಿನಿಂದ ಕಾರ್ಯರಂಗದಲ್ಲಿ ಸಾಂಸಾರಿಕವಾಗಿ ಸಮಸ್ಯೆಗಳನ್ನು ತಂದೊಡ್ಡಬಹುದು.

ವೃಷಭ:-
ಆರೋಗ್ಯದಲ್ಲಿ ಉತ್ತಮ , ಜೀವನ ಶೈಲಿಯಲ್ಲಿ ಪ್ರಗತಿ ,ಶ್ರೀ ದೇವತಾನುಗ್ರಹಕ್ಕೆ ಕಾರಣಧಿರಾದ ನಿಮಗೆ ಯಾವುದೇ ರೀತಿಯ ಕಷ್ಟನಷ್ಟಗಳನ್ನು ಅನುಭವಿಸಲು, ಕಾರ್ಯಧಿಕ್ಷೇತ್ರದಲ್ಲಿ ಮುನ್ನಡೆಯಲು, ವಿದ್ಯಾರ್ಥಿಗಳ ಅಭ್ಯಾಸಕ್ಕೆ ನಿರುದ್ಯೋಗಿಗಳಿಗೆ ಶ್ರೀರಕ್ಷೆ . ಜಾಗ್ರತೆ ವಹಿಸಿರಿ.

ಮಿಥುನ :-
ಕುಟುಂಬದಲ್ಲಿ ಅಲ್ಪ ನೆಮ್ಮದಿ ಕಾಣಲಿದ್ದೀರಿ, ಆರೋಗ್ಯ ಮಧ್ಯಮ ,ಆಯಾಸ ಅಧಿಕ ,ನಿರುದ್ಯೋಗಿಗಳಿಗೆ ನಾನಾ ರೀತಿಯ ಅವಕಾಶಗಳು ಒದಗಿ ಬಂದಾವು. ಅವಿವಾಹಿತರಿಗೆ ಯೋಗ್ಯ ಸಂಬಂಧದ ಪ್ರಸ್ತಾವಗಳು ಒದಗಿ ಬರಲಿವೆ. ಆಗಾಗ ಆರ್ಥಿಕವಾಗಿ ಧನವ್ಯಯವಾಗದಂತೆ ಜಾಗ್ರತೆ ವಹಿಸಿರಿ.

ಕಟಕ:-
ಹಂತ ಹಂತವಾಗಿ ಅಭಿವೃದ್ಧಿ ಹೊಂದಲಿದ್ದೀರಿ ,ತಾಳ್ಮೆ ವಹಿಸಿ ,ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿರಿ. ಅನಿರೀಕ್ಷಿತ ರೀತಿಯಲ್ಲಿ ಹಿರಿಯರಿಗೆ ತೀರ್ಥಯಾತ್ರಾ ಯೋಗವಿದೆ. ದಾಯಾದಿಗಳ ವಂಚನೆ ಗಮನಕ್ಕೆ ಬಂದೀತು. ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿ ತೋರಿ ಬರುವುದು.

ಸಿಂಹ:-
ಆರ್ಥಿಕ ಹಿನ್ನಡೆ ,ನಿಮ್ಮ ಮಾತಿನಿಂದ ನಿಮ್ಮವರೇ ಬೇರ್ಪಡುವ ಅಥವಾ ದೂರ ಇರಲು ಬಯಸುವರು,
ನ್ಯಾಯಾಲಯದ ಕೆಲಸಕಾರ್ಯಗಳು ನಾನಾ ರೀತಿಯಲ್ಲಿ ಧನವ್ಯಯಕ್ಕೆ ಕಾರಣವಾಗಲಿವೆ. ದೇಹಾರೋಗ್ಯದ ಬಗ್ಗೆ ವೈಯಕ್ತಿಕವಾಗಿ ಗಮನ ಹರಿಸುವುದು ಅತೀ ಆಗತ್ಯ. ವಿದ್ಯಾರ್ಥಿಗಳ ಪ್ರಯತ್ನಬಲ ಸಾರ್ಥಕ.

ಕನ್ಯಾ:-
ಈ ದಿನ ಮಧ್ಯಮ ದಿನ, ದೇಹಾಲಸ್ಯ ಕಮ್ಮಿಇದ್ದರೂ ಕೆಲಸಕಾರ್ಯದ ಬಗ್ಗೆ ಆಸಕ್ತಿ ಇರದು,
ತಾಳ್ಮೆಯಿಂದ ಕಾರ್ಯಸಾಧನೆಧಿಯಾಗಲಿದೆ. ತಂದೆ ಮಕ್ಕಳಲ್ಲಿ ಭಿನ್ನಾಭಿಪ್ರಾಯ ಬಂದೀತು. ವಿದೇಶದಲ್ಲಿ ವಿದ್ಯಾರ್ಥಿಗಳಿಗೆ ದುಡಿಮೆ ಹೆಚ್ಚಲಿದೆ. ಸಾಲ ಮರು ಪಾವತಿಯಾಗಿ ಸಮಾಧಾನ, ಶಾಂತಿ ಸಿಗಲಿದೆ,ಆರ್ಥಿಕ ವಾಗಿ ಮಧ್ಯಮ ಸ್ಥಿತಿ ,ಆರೋಗ್ಯ ಮಧ್ಯಮ ,ಕಫ ವಾತ ಬಾದೆ.

ತುಲಾ:-
ಈದಿನ ಮಿಶ್ರ ಫಲ ಅನುಭವಿಸುವಿರಿ,
ವೃತ್ತಿರಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಬೆಲೆ ಬರಲಿದೆ. ರಾಹು ಲಾಭ ಸ್ಥಾನದಲ್ಲಿರುವ ಕಾರಣ ಹೊಸ ಚಿಂತನೆಗೆ ಸಕಾಲ. ಕಾರ್ಯಸಾಧನೆಯಾಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫ‌ಲವಿದೆ.

ವೃಶ್ಚಿಕ:-
ಚಿನ್ನದ ವ್ಯಾಪಾರಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಗಲಿದೆ. ದೂರ ಸಂಚಾರ ಹಿರಿಯರಿಗೆ ಅನಾರೋಗ್ಯಕ್ಕೆ ಕಾರಣವಾದೀತು. ನಿರಂತರ ಪ್ರಯತ್ನಬಲ ನಿರುದ್ಯೋಗಿಗಳಗೆ ಸಾರ್ಥಕವಾಗಲಿದೆ. ದಿನಾಂತ್ಯ ಶುಭ.

ಧನಸ್ಸು:-
ಆರ್ಥಿಕವಾಗಿ ತುಂಬಾ ಜಾಗ್ರತೆ ವಹಿಸಬೇಕಾಗುತ್ತದೆ. ಆಗೋಸ್ತ್ವರೆಗೆ ನಿಮ್ಮ ಯಾವುದೇ ಕೆಲಸಕಾರ್ಯಗಳಿಗೆ ನಿಮ್ಮ ಪ್ರಯತ್ನಬಲ, ದೃಢ ವಿಶ್ವಾಸಗಳೆ ಮುನ್ನಡೆಗೆ ಸಾಧಕವಾಗಲಿದೆ. ಅತಿಥಿಗಳ ಆಗಮನ.

ಮಕರ:-
ವೃತ್ತಿರಂಗದಲ್ಲಿ ನಿಮ್ಮ ಪ್ರಯತ್ನಬಲಕ್ಕೆ ದೇವರು ಒಂದಲ್ಲ ಒಂದು ರೀತಿಯಲ್ಲಿ ಫ‌ಲ ನೀಡಲಿದ್ದಾರೆ. ಸಾಂಸಾರಿಕವಾಗಿ ಆದಷ್ಟೂ ಹೊಂದಾಣಿಕೆ, ಸಹ ಮತ ವಿರಲಿ. ಆಗಾಗ ನೆಂಟರ ಆಗಮನ.

ಕುಂಭ:-
ದೇವತಾರ್ಚನೆಗಾಗಿ ಧನವ್ಯಯಧಿವಾಗಲಿದೆ. ವೃತ್ತಿರಂಗದಲ್ಲಿ ನೀವು ಸಾರ್ಥಕ್ಯವನ್ನು ಪಡೆಯುವಿರಿ,ಆದರೂ ವಾದ, ವಿವಾದಗಳಿಂದ ದೂರವಿದ್ದು ಮುಂದುವರಿದಲ್ಲಿ ಉತ್ತಮವು, ಆರ್ಥಿಕ ಬದಲಾವಣೆ, ಕುಟುಂಬದಲ್ಲಿ ವಿರಸಿ, ಅನ್ಯರೊಂದಿಗೆ ಕಲಹ ,ಈ ದಿನ ಮಧ್ಯಮ ದಿನ.

ಮೀನಾ:-
ಕೆಲಸಕಾರ್ಯಗಳಲ್ಲಿ ನಿರೀಕ್ಷಿತ ಫಲ,
ಶುಭಸ್ಥಾನದಲ್ಲಿ ರಾಹು ನಿಮ್ಮ ಎಷ್ಟೋ ಆಕಾಂಕ್ಷೆಗಳಿಗೆ ಅನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿಗೆ ಕಾರಣನಾದಾನು. ಹೊಸ ದಂಪತಿಗಳಿಗೆ ಸಂತಾನ ಭಾಗ್ಯವಿದೆ. ಅತಿಥಿಗಳ ಆಗಮನ ಸಂತಸ ತಂದೀತು.
Leave a Reply

Your email address will not be published. Required fields are marked *

error: Content is protected !!