ಮತ್ತಿ ಗಿಡದ ಔಷಧೀಯ ಗುಣ ವೇನು!ಮಾಹಿತಿ ಇಲ್ಲಿದೆ

312

“ಮತ್ತಿ / Terminalia tomentosa ( Combretaceae )”

ಪಶ್ಚಿಮ  ಘಟ್ಟದ ಎಲೆ ಉದುರಿಸುವ ಕಾಡುಗಳಲ್ಲಿ ಕಂಡು ಬರುವ ಮರ ಮತ್ತಿ. ದೊಡ್ಡದಾಗಿ ತುಂಬಾ ಎತ್ತರಕ್ಕೆ ಬೆಳೆಯುತ್ತದೆ. ಗಟ್ಟಿಯಾದ ತಿರುಳು ಹೊಂದಿದೆ. ಮತ್ತಿ ಮರದ ಗಟ್ಟಿತನದಿಂದಾಗಿ ಮನೆಗಳನ್ನು ಕಟ್ಟಲು ವ್ಯಾಪಕವಾಗಿ ಬಳಸಲಾಗುತ್ತದೆ.

ಇದರಲ್ಲಿ ಸುಣ್ಣದ ಅಂಶ ಜಾಸ್ತಿಯಾಗಿ ಇರುತ್ತದೆ. ಹಿಂದಿನ ಕಾಲದಲ್ಲಿ ಇದರಿಂದ ಸುಣ್ಣವನ್ನು ತಯಾರಿಸುತ್ತಿದ್ದರು. ಆಗಿನ ಕಾಲದಲ್ಲಿ ಮತ್ತಿ ಸುಣ್ಣ ಬಳಕೆಯಲ್ಲಿತ್ತು. ಬಿಳಿಯ ಹೂವಿನ ಕದಿರು ನಕ್ಷತ್ರಾಕಾರದ ಕಾಯಿ ಕಚ್ಚುತ್ತದೆ.

ಬಳಕೆ :-

ಅಂಗೈ ಅಗಲದ ತೊಗಟೆಯನ್ನು ಜಜ್ಜಿ ಹತ್ತು ಗ್ರಾಂ.ದನಿಯ, ಇಪ್ಪತ್ತು ಗ್ರಾಂ.ಜೀರಿಗೆ, ಐದು ಗ್ರಾಂ.ಬೋಳುಕಾಳು ಎಲ್ಲಾ ಪುಡಿ ಮಾಡಿ ಸೇರಿಸಿ ಚೆನ್ನಾಗಿ ಕುದಿಸಿ ಅದಕ್ಕೆ ಹಾಲು ಸಕ್ಕರೆ ಹಾಕಿ ಆಗಾಗ್ಗೆ ಕುಡಿಯುತ್ತಿದ್ದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಧುಮೇಹ ಇರುವವರು ಸಕ್ಕರೆ ಹಾಕದೇ ಹಾಗೇ ಬಳಸಬಹುದು. ಕಷಾಯ ಹೃದಯ ಸಂಬಂಧಿ ಕಾಯಿಲೆಗಳನ್ನು ನಿಯಂತ್ರಿಸುತ್ತದೆ. ಸಂದು ನೋವಿಗೂ ಒಳ್ಳೆಯ ಪರಿಣಾಮ ಬೀರುತ್ತದೆ.

ಎಲ್ಲೆಲ್ಲೂ ತರಹೆವಾರಿ ಶಾಂಪೂ ಭರಾಟೆ ಹಾಗಾಗಿ ನೈಸರ್ಗಿಕ ಶಾಂಪುವಿನ ಮಹತ್ವ ಉಡುಗಿ ಹೋಗಿದೆ.

ಶಾಂಪು ಬದಲಿಗೆ ಮತ್ತಿ ಸೊಪ್ಪಿನ ಗಂಪು ತಯಾರಿಸಿ ತಲೆಗೆ ಸ್ನಾನ ಮಾಡಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ. ಎಂಟು ಹತ್ತು ಎಲೆಗಳನ್ನು ತಂದು ನೀರಿಗೆ ಹಾಕಿ ಚೆನ್ನಾಗಿ ಕಿವುಚಿ ಒಂದು ಗಂಟೆ ಹಾಗೇ ಇಟ್ಟರೆ ಶಾಂಪೂ ತರಹದ ಲೋಳೆಯಾದ ದ್ರವ ಉಪಯೋಗಕ್ಕೆ ಸಿಗುತ್ತದೆ.

ಇದರಿಂದ ತಲೆಗೆ ಸ್ನಾನ ಮಾಡಿದರೆ ಕೂದಲು ಉದುರುವ ಸಮಸ್ಯೆ ನಿವಾರಣೆ ಆಗುತ್ತದೆ. ಕಣ್ಣುಗೂ ತಂಪು ಅಡ್ಡ ಪರಿಣಾಮವೂ ಇರದು.

ಲೇಖನ ಮತ್ತು ಚಿತ್ರಗಳು:-

# ಪಶ್ಚಿಮ ಘಟ್ಟಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ, ನಿಭಾಯಿಸೋಣ #Leave a Reply

Your email address will not be published. Required fields are marked *

error: Content is protected !!