ಜೋಶಿಗೆ ಗಣಿ ಖಾತೆ: ಆಪ್ತವಲಯ ಸೇರಲು ಬಳ್ಳಾರಿ ಗಣಿ ‘ಸಂಪಕ೯’ ತೀವ್ರ ಲಾಬಿ!

132

ನವದೆಹಲಿ:-ಸಚಿವ ಖಾತೆಗಳ ಹಂಚಿಕೆ ನಂತರ ಕೇಂದ್ರ ಸರಕಾರ ನೂತನ ಸಚಿವ ರಲ್ಲಿ ಆಪ್ತ ಅಧಿಕಾರಿಗಳ ನೇಮಕಾತಿಗೆ ಭಜ೯ರಿ ಲಾಬಿ ಆರಂಭವಾಗಿದೆ.

ಮೋದಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ದೆಹಲಿ ಮೂಲದ ಮತ್ತು ಒಂದೇ ಖಾತೆ ಮತ್ತು ಅದಕ್ಕೆ ಸಂಬಂಧಿತ ಸರಕಾರಿ, ಅರೆ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸಮಾಡಿರುವರನ್ನು ನೇಮಕಾತಿ ಮಾಡಿಕೊಳ್ಳುವುದರ ವಿರುದ್ಧ ಫಮಾ೯ನ್ ಹೊರಡಿಸಲಾಗಿತ್ತು. ಆಡಳಿತ ವ್ಯವಸ್ಠೆಯ ಒಳಗೆ ಹೊಸನೀರನ್ನು ತರುವುದು ಮೋದಿ ಅವರ ದೂರಗಾಮಿ ಯೋಚನೆಯಲ್ಲಿ ಒಂದು. ಆದರೆ ಅದನ್ನು ಮೀರಿ ಸಾಕಷ್ಟು ಲಾಬಿಗಳು ಸಚಿವಾಲಯದ ಒಳಗೆ ನುಸುಳಲು ಪ್ರಯತ್ನಿಸಿದ್ದವು ಮತ್ತು ಕೆಲವು ಯಶಸ್ವಿಯೂ ಆಗಿದ್ದವು.
ಈಗ ನೂತನ ಸರಕಾರದಲ್ಲೂ ಅದೇ ರೀತಿ ಲಾಬಿಗಳು ಪ್ರಬಲ ಆಗ್ತಾಯಿರೋದು ಗೋಚರಿಸುತ್ತಾಯಿದೆ. ಸಾಕಷ್ಟು ವಿಶ್ವಾಸವಿಟ್ಟು ಮಹತ್ವದ ಖಾತೆಗಳನ್ನು ನೀಡಲಾಗಿರುವ ನೂತನ ಸಚಿವ ಪ್ರಹ್ಲಾದ ಜೋಷಿ ಆಸು-ಪಾಸಿನಲ್ಲಿ ಇಂತಹ ಪ್ರಯತ್ನಗಳು ಗಳು ತೀವ್ರವಾಗುತ್ತಿವೆ ಎ೦ದು ತಿಳಿದುಬಂದಿದೆ.
ಮೊದಲಬಾರಿಗೆ ಕೇಂದ್ರದಲ್ಲಿ ಕ್ಯಾಬಿನೆಟ್ ದಜೆ೯ಯ ಸಚಿವ ಸ್ಠಾನದೊಟ್ಟಿಗೆ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರ ಖಾತೆಯನ್ನು ಹೊಂದಿರುವ ಜೋಷಿ ಪ್ರಧಾನ ಮಂತ್ರಿ, ಪಕ್ಷದ ಅಧ್ಯಕ್ಷ ಅಮಿತ್ ಶಾ ಮತ್ತು ಆರ್ ಎಸ್ ಎಸ್ ನೊಂದಿಗೆ ಆಪ್ತಸಂಬಂಧ ಹೊಂದಿರುವುದು ಈ ಲಾಬಿಗಳು ಪ್ರಬಲವಾಗುತ್ತಿರುವುದಕ್ಕೆ ಕಾರಣ ಎನ್ನಲಾಗಿದೆ.
ಅತ್ತ ಜೋಶಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ, ಇಲ್ಲಿ ಬಳ್ಳಾರಿ ಗಣಿ ಧಣಿಗಳ ಲಾಬಿಗಳು ಎದ್ದು ಕುಳಿತಿವೆ. ಈ ಗಣಿ ಕಂಪನಿಗಳ ಲಾಬಿದಾರರು ತಾವು ‘ಸಂಘ’ ದ ಹಿನ್ನಲೆ ಯವರೇ ಹೀಗಾಗಿ ನಿಮ್ಮ ಆಪ್ತ ಕಾಯಾ೯ಲಯದಲ್ಲಿ ಅವಕಾಶ ಕೊಡಿ ಎಂದು ಅಜಿ೯ ಹಿಡಿದು ನಿಂತಿವೆ.
ಗೆದ್ದ ಎತ್ತಿನ ಬಾಲ ಹಿಡಿಯುವುದರಲ್ಲಿ ನಿಷ್ಣಾತರಾದ ಗಣಿ ‘ಸಂಪಕ೯’ಗಳು, ಹಿಂದೆ ಬೇರೆ ಬೇರೆ ಪಕ್ಷ ಅಧಿಕಾರ ಇರುವಾಗ ಅವರ ಬಳಿ ಗಣಿ ಕಂಪನಿಗಳ ಲಾಬಿಯನ್ನು ಪ್ರಬಲವಾಗಿಯೇ ನಿವ೯ಹಿಸಿದ್ದಾರೆ ಎನ್ನಲಾಗಿದೆ. ಈಗ ಕೇಂದ್ರ ಗಣಿ ಸಚಿವರ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳಲು ವ್ಯಾಪಕ ಶ್ರಮ ವಿನಿಯೋಗಿಸುತ್ತಿದ್ದಾರೆ. ಇಂತಹ ಲಾಬಿಗೆ ಮಣಿದು ಅವುಗಳಿಗೆ ತಮ್ಮ ಆಪ್ತ ಅಧಿಕಾರಿ ವಲಯದಲ್ಲಿ ಜೋಷಿ ಅವಕಾಶ ಕಲ್ಪಿಸಿದ್ದೇ ಆದರೇ, ಖಂಡಿತವಾಗಿ ಪ್ರಧಾನಿ ಯವರ ಪಾರದಶ೯ಕ ಆಡಳಿತ ಭರವಸೆಗೆ ಎಳ್ಳು ನೀರು ಬಿಟ್ಟ೦ತೆಯೇ !!!
ಕನಾ೯ಟಕ ಈ ಹಿಂದೆ ಬಳ್ಳಾರಿ ಗಣಿ ಹಗರಣದಿಂದ ದೇಶ ವಿದೇಶಗಳಲ್ಲಿ ಸಾಕಷ್ಟು ಅಪಖ್ಯಾತಿಯನ್ನು ಹೊಂದಿತ್ತು. ಆಗಿನ ಮುಖ್ಯಮಂತ್ರಿ ಯಡ್ಯೂರಪ್ಪ ಹಾಗೂ ಅಂದಿನ ಸರಕಾರದಲ್ಲಿ ಮಂತ್ರಿ ಆಗಿದ್ದ ಗಾಲಿ ಜನಾಧ೯ನ ರೆಡ್ಡಿ ಜೈಲಿಗೆ ತಳ್ಳಲ್ಪಟ್ಟರು. ಇಂತಹ ಕರಾಳ ಹಿನ್ನಲೆ ಹೊಂದಿರುವ ಖಾತೆ ಈಗ ಜೋಷಿ ಹೆಗಲಿಗೆ ಬಂದಿದೆ. ಸದಾ ಧೂಳಿನಿಂದ ಕೂಡಿರುವ ಗಣಿ ಖಾತೆ ಯಲ್ಲಿ ಪಾರದಶ೯ಕತೆಯನ್ನು ತರುವ ಜವಾಬ್ದಾರಿ ಈ ವಾಮನಮೂತಿ೯ಯ ಮೇಲಿದೆ.
ಇಲ್ಲಿಯ ವರೆಗಿನ ಸಾವ೯ಜನಿಕ ಜೀವನದಲ್ಲಿ ಶುದ್ಧ ಹಸ್ತರು ಎಂದೇ ಖ್ಯಾತಿಯನ್ನು ಹೊಂದಿರುವ ಸಚಿವ ಜೋಷಿ, ಯಾವುದೇ ಕಾರಣಕ್ಕೂ ಗಣಿ ಲಾಬಿಗಳಿಗೆ ಅವಕಾಶ ನೀಡದಂತೆ ಆಡಳಿತ ನಡೆಸುವರು ಎಂದು ಆಶಿಸೋಣವೇ ?Leave a Reply

Your email address will not be published. Required fields are marked *

error: Content is protected !!