ಉತ್ತರ ಕನ್ನಡ ಕ್ಕೆ ಬಜೆಟ್ ನಲ್ಲಿ ಸಿಕ್ಕ ಪಾಲೇನು? ಇಲ್ಲಿದೆ ನೋಡಿ.

2129

ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸೋಧ್ಯಮ ಮತ್ತು ಮೀನುಗಾರಿಕೆ,ಮೂಲಭೂತ ಸೌಕರ್ಯಕ್ಕೆ ಬಜೆಟ್ ನಲ್ಲಿ ಅನುದಾನ ದೊರೆತಿದ್ದು ಇದರ ಲಾಭ ಆಗಲಿದೆ. ಆದರೇ ಮೂಲಭೂತವಾಗಿ ಅವಷ್ಯವಿರುವ ಪ್ರತ್ತೇಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಬೇಡಿಕೆ ಗೆ ಸ್ಪಂದನೆ ಇಲ್ಲ. ಉಳಿದಂತೆ ಜಿಲ್ಲೆಗೆ ಹೊಸ ಯೋಜನೆಗಳು ಅಭಿವೃದ್ಧಿ ಪೂರಕವಾಗಿದೆ, ಜಿಲ್ಲೆಯ ಮೂಲಭೂತ ಸೌಕರ್ಯ ಕೊರತೆ ಹೆಚ್ಚಿದ್ದು ಈ ದಿಕ್ಕಿನಲ್ಲಿ ಹೆಚ್ಚು ಲಾಭವಾಗಿಲ್ಲ.

ಉಳಿದಂತೆ ಬಜೆಟ್ ನಲ್ಲಿ ಜಿಲ್ಲೆಗೆ ದೊರೆತಿದ್ದು ಈ ಕೆಳಗಿನಂತಿದೆ.

1) ಅಡಿಕೆ ಬೆಳಗಾರರಿಗೆ ಹುಳುಬಾದೆ ಹಾಗೂ ಹಳಿದಿರೋಗ ನಿವಾರಣೆಗೆ ಸಂಶೋಧನಾ ಕೇಂದ್ರ ಹಾಗೂ ಪರ್ಯಾಯ ಬೆಳೆಗೆ ಪ್ರೋತ್ಸಾಹ 25 ಕೋಟಿ.

2) ಯಾಂತ್ರಿಕ ದೋಣಿಗಳಿಗೆ 1.5 ಲಕ್ಷ ಕಿ.ಮೀ. ಡಿಸೆಲ್ ಮೇಲಿನ ಮಾರಾಟ ಕರ ಮರುಪಾವತಿಗೆ ಬದಲು ಡಿಸೆಲ್ ಡೆಲವರಿ ಪಾಯಂಟ್ ನಲ್ಲಿಯೇ ಕರ ರಹಿತ ದರದಲ್ಲಿ ಡಿಸೆಲ್ ವಿತರಣೆ.

3) ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಕಾರ್ಯಕ್ರಮದ ಅನುಷ್ಟಾನಕ್ಕೆ 62 ಕೋಟಿ ರೂ.

4) ರಾಜ್ಯದಲ್ಲಿ 16 ಮೀನುಗಾರಿಕಾ ಉತ್ಪಾದನಾ ಕೇಂದ್ರಗಳ ತಾಂತ್ರಿಕ ಉನ್ನತೀಕರಣಕ್ಕೆ 2ಕೋಟಿ ರೂ.

5) ಮೀನುಗಾರಿಕಾ ಅಭಿವೃದ್ದಿ ನಿಗಮದ ವತಿಯಿಂದ ಆರುಕೋಟಿ ರೂ ವೆಚ್ಚದಲ್ಲಿ ಮೀನಿನ ಉತ್ಪನ್ನ ಸಂಸ್ಕರಣೆ ,ಆಧುನಿಕ ಸಂಸ್ಕರಣಾ ಮತ್ತು ಮೌಲ್ಯ ವರ್ದತಾ ಕೇಂದ್ರ ಸ್ಥಾಪನೆ . ರಾಜ್ಯಾಧ್ಯಾಂತ 30 ಕೋಟಿ ವೆಚ್ಚದಲ್ಲಿ ಮೀನು ಮಾರಾಟ ಘಟಕ ಹಾಗೂ ಮತ್ಸ್ಯ ದರ್ಶಿನಿಗಳ ಸ್ಥಾಪನೆ .

6) ಗ್ರಾಮ ಬಂಧು ಯೋಜನೆ ಯಡಿ ಕರಾವಳಿ, ಮಲೆನಾಡು ಭಾಗದಲ್ಲಿ ಕಾಲುಸಂಕ ನಿರ್ಮಾಣ ಯೋಜನೆಗೆ 100 ಕೋಟಿ .

7) ಉತ್ತರ ಕನ್ನಡ ಜಿಲ್ಲೆಯ ಅಂಕೋಲ -ನೌಕಾ ವಾಯುನೆಲೆ ಸಮೀಪದಲ್ಲಿ ಸಿವಿಲ್ ಎನ್ ಕ್ಲೇವ್ ಅಭಿವೃದ್ದಿ ಪಡಿಸಲು ಕ್ರಮ.

8) ತದಡಿಯಲ್ಲಿ 1000ಎಕರೆ ಪರಿಸರ ಪ್ರವಾಸೋಧ್ಯಮ ಉದ್ಯಾನವನ ಅಭಿವೃದ್ಧಿ

9) ಹೊನ್ನಾವರ ,ಕಾಸರಕೋಡ ಬಂದರು ಪ್ರದೇಶಕ್ಕೆ ರಾಷ್ಟ್ರೀಯ ಹೆದ್ದಾರಿ -66 ರಿಂದ ಭಾರತಮಾಲಾ ಯೋಜನೆಯಡಿ 100 ಕೋಟಿರೂ ಅಂದಾಜು ವೆಚ್ಚದಲ್ಲಿ ಚತುಷ್ಪತ ರಸ್ತೆ ನಿರ್ಮಾಣಕ್ಕೆ ಕ್ರಮ.

10)ಮಂಗಳೂರು ಮತ್ತು ಪಣಜಿ ನಡುವೆ ಜಲಮಾರ್ಗ ಅಭಿವೃದ್ಧಿ ಕೇಂದ್ರ ಸರ್ಕಾರದ ಜಲಮಾರ್ಗ ಪ್ರಾಧಿಕಾರದ ಧನ ಸಹಾಯದೊಂದಿಗೆ ಒಟ್ಟು 60 ಕೋಟಿ ವೆಚ್ಚದಲ್ಲಿ ರಾಜ್ಯದ ಒಟ್ಟು ಐದು ಜಲಮಾರ್ಗದ ಅಭಿವೃದ್ಧಿ.

11) ಶಿರಸಿಯಲ್ಲಿ ಏಳುಕೋಟಿ ರೂ ವೆಚ್ಚದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ. 2021-2022 ರಲ್ಲಿ ಎರಡು ಕೋಟಿ ಅನುದಾನ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ