ಕರೋನಾ ಹೊಸ ನಿಯಮ! ಮುಖ್ಯಮಂತ್ರಿ ಹೇಳಿದ್ದೇನು? ವಿವರ ನೋಡಿ

3806

ಕೋವಿಡ್ ಪರಿಸ್ಥಿತಿ ಬಗ್ಗೆ ಪ್ರಧಾನಿಯವರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ವಿಡಿಯೋ ಕಾನ್ಫರೆನ್ಸ್ ನಡೆಸಿದದ್ದು ,ಜನರಲ್ಲಿ ಭಯ ಸೃಷ್ಟಿಸುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ ಎಂದು ಮುಖ್ಯಂತ್ರಿ ಯಡಿಯೂರಪ್ಪ ಮಾಧ್ಯಮಗಳಿಗೆ ತಿಳಿಸಿದರು.

ಕಳೆದ ಹತ್ತು ದಿನಗಳಲ್ಲಿ ಕೊರೋನಾ ಏರಿಕೆ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ಟೆಸ್ಟಿಂಗ್ ಹೆಚ್ಚಳ ಮಾಡಲಾಗಿತಿದ್ದು ಜನ ಸೇರುವ ಕಡೆ ಮುನ್ನೆಚ್ಚರಿಕೆಗೆ ವಹಿಸಲಾಗುವುದು.

ಬೆಂಗಳೂರಿನಲ್ಲಿ 3 ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲು ನಿರ್ಧಾರ ಮಾಡಲಾಗಿದ್ದು , ಕೋವಿಡ್ ಪರೀಕ್ಷೆಗಳ ಸಂಖ್ಯೆ ಹೆಚ್ಚಳ ಮಾಡಲಾಗುವು,ಮಾಸ್ಕ್ ಧಾರಣೆ ಕಡ್ಡಾಯಕ್ಕೆ ಸೂಚನೆ ನೀಡಲಾಗಿದ್ದು, ಸೋಂಕು ಹೆಚ್ಚಳ ಇರುವ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ಇರಿಸಲಾಗುವು ಎಂದರು.

ಹೊಸ ಕರೋನಾ ಕ್ರಮಗಳು ಹೀಗಿವೆ:-

ಸಾರ್ವಜನಿಕ ಸ್ಥಳಗಳಲ್ಲಿ ಜನ‌ ಗುಂಪುಗೂಡದಂತೆ ತಡೆಯಲು ಕ್ರಮ.ಮೂರನೇ ಹಂತದ ಪಟ್ಟಣಗಳಲ್ಲಿ ಟೆಸ್ಟಿಂಗ್ ಹೆಚ್ಚಳ,ಮೈಕ್ರೋ ಕಂಟೈನ್ಮೆಂಟ್ ನಿರ್ಮಾಣ,
ಮಾಸ್ಕ್ ಕಡ್ಡಾಯಕ್ಕೆ ಕ್ರಮ,ಸಾಮಾಜಿಕ ಅಂತರ ಪಾಲನೆ ಬಗ್ಗೆ ನಿಗಾ,ಸಮಾರಂಭಗಳಲ್ಲಿ ಜನ ಸೇರದಂತೆ ಎಚ್ಚರ ವಹಿಸಲು ಕ್ರಮ,ನೈಟ್ ಕರ್ಫ್ಯೂ, ಲಾಕ್ ಡೌನ್ ಜಾರಿ ಇಲ್ಲ, ನಿತ್ಯ 3 ಲಕ್ಷ ಜನಕ್ಕೆ ಲಸಿಕೆ ಹಾಕಿಸುವ ಗುರಿ,ರಾಜ್ಯದಿಂದ ಯಾವುದೇ ಹೊಸ ಕ್ರಮಗಳ ಘೋಷಣೆ ಇಲ್ಲ,ಮಾಸ್ಕ್ ದಂಡ ಹೆಚ್ಚಳ ಇಲ್ಲ, ನಾಲ್ಕು ಗೋಡೆಗಳ ಮಧ್ಯೆ ಜನ ಸೇರುವ ಕಾರ್ಯಕ್ರಮಗಳ ಮೇಲೆ ಮಾತ್ರ ಕಟ್ಟೆಚ್ಚರ,
ಬಹಿರಂಗ ಕಾರ್ಯಕ್ರಮಗಳನ್ನು ಅಡ್ಡಿ ಇಲ್ಲ,
ಸಿನಿಮಾ ಥಿಯೆಟರ್ ಗಳಿಗೂ ಹಾಲಿ ನಿಯಮಗಳು ಮುಂದುವರಿಕೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ