ಉತ್ತರ ಕನ್ನಡದಲ್ಲಿ ಮತ್ತೆರೆಡು ಕರೋನಾ ಫಾಸಿಟಿವ್! ರಾಜ್ಯದಲ್ಲಿ ಎಷ್ಟು ಗೊತ್ತಾ?

1606

ಬೆಂಗಳೂರು :- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಎರಡು ಕರೋನಾ ಫಾಸಿಟಿವ್ ಪತ್ತೆಯಾಗಿದೆ.p 6827 ಸಂಖ್ಯೆಯ ಸೊಂಕಿತ ವ್ಯಕ್ತಿ ಸಂಪರ್ಕ ಹೊಂದಿದ ಅಂಕೋಲದ p.7828 ಸಂಖ್ಯೆಯ 30 ವರ್ಷದ ಮಹಿಳೆ ,ಮಹಾರಾಷ್ಟ್ರ ದಿಂದ ಜಿಲ್ಲೆಗೆ ಬಂದ ಹಳಿಯಾಳ ಮೂಲದ p7829 ಸಂಖ್ಯೆಯ 8 ವರ್ಷದ ಬಾಲಕ ನಲ್ಲಿ ಸೊಂಕು ದೃಡಪಟ್ಟಿದೆ.
ಜಿಲ್ಲೆಯಲ್ಲಿ 125 ಜನ ಕರೋನಾ ಸೊಂಕಿತರಿದ್ದು 93 ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆ ಗೊಂಡಿದ್ದು ಸೋಂಕಿತರಿಗೆ ಕಾರವಾರದ ಕ್ರಿಮ್ಸ್‌ನ ಕೋವಿಡ್-19 ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶಿವಮೊಗ್ಗ ದಲ್ಲಿ ಪೊಲೀಸರಿಗೆ ಕರೋನಾ ಫಾಸಿಟಿವ್!

ಶಿವಮೊಗ್ಗದಲ್ಲಿ ಇಂದು ಮತ್ತೆ ಓರ್ವ ಕೆಎಸ್ ಆರ್ ಪಿ ಪೊಲೀಸ್ ಗೆ ಕೊರೊನಾ ಪಾಸಿಟಿವ್ ದೃಢ ಪಡುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 106 ಕ್ಕೆ ಏರಿಕೆಯಾಗಿದೆ.

ಕೊರೊನಾ ಸೋಂಕಿತ ಕೆ.ಎಸ್.ಆರ್.ಪಿ. ಪೊಲೀಸ್ ಸಂಪರ್ಕದಲ್ಲಿದ್ದ ಮತ್ತೋರ್ವ ಪೊಲೀಸ್ ಗೂ ಪಾಸಿಟಿವ್ ಬಂದಿದೆ.

ಮಾಚೇನಹಳ್ಳಿಯ ಕೆ.ಎಸ್.ಆರ್.ಪಿ. ಬೆಟಾಲಿಯನ್ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದು
ಸೋಂಕಿತ ಪೊಲೀಸನ ಪ್ರಾಥಮಿಕ ಸಂಪರ್ಕ ಹೊಂದಿದ್ದ ಕೆ.ಎಸ್.ಆರ್.ಪಿ. ಪೊಲೀಸ್ ಕೂಡ
ಬೆಂಗಳೂರಿನ ಪಾದರಾಯನಪುರದಲ್ಲಿ ಕರ್ತವ್ಯ ನಿರ್ವಹಿಸಿ ಬಂದಿದ್ದ.

ಈತನನ್ನು ನಗರದ ಹೊರವಲಯದ ನವುಲೆ ಬಡಾವಣೆಯಲ್ಲಿನ ಹಾಸ್ಟೆಲ್ ವೊಂದರಲ್ಲಿ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು.14 ದಿನಗಳ ಬಳಿಕ ಪುನಃ ಗಂಟಲು ದ್ರವ ಪರೀಕ್ಷೆ ನಡೆಸಿದ ಬಳಿಕ ಪಾಸಿಟಿವ್ ಪತ್ತೆಯಾಗಿದೆ.ಸೋಂಕಿತ ಪೊಲೀಸ್ ಗೆ ಕೋವಿಡ್ 19 ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದ ಮಾಹಿತಿ ಈ ಕೆಳಗಿನಂತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ