ರಾಜ್ಯದಲ್ಲಿ 317 ಕೋವಿಡ್-19 ಫಾಸಿಟಿವ್ ಕೇಸ್! ಯಾವ ಜಿಲ್ಲೆಗೆ ಎಷ್ಟು ಇಲ್ಲಿದೆ ಮಾಹಿತಿ

669

ಶಿವಮೊಗ್ಗದಲ್ಲಿ ಇಂದು 7 ಜನರಿಗೆ ಕೊರೊನಾ ಪಾಸಿಟಿವ್ ಧೃಢಪಟ್ಟಿದೆ.ಈ ಮೂಲಕ ಜಿಲ್ಲೆಯಲ್ಲಿ 101 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ನಗರದ ಕುಂಬಾರಗುಂಡಿಯ ನಿವಾಸಿಗಳಾದ ಇಬ್ಬರು ವೃದ್ಧರಿಗೆ ಕೊರೊನಾ ಸೋಂಕು ಶಂಕೆ ವ್ಯಕ್ತವಾಗಿದ್ದು ಕುಂಬಾರಗುಂಡಿ ಪ್ರದೇಶವನ್ನು ಈಗಾಗಲೇ ಸೀಲ್ ಡೌನ್ ಮಾಡಲಾಗಿದೆ.

ಕಳೆದೆರೆಡು ದಿನಗಳ ಹಿಂದೆಯಷ್ಟೇ, ಇಲ್ಲಿನ ನಿವಾಸಿ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ತಗುಲಿತ್ತು.ಇದೀಗ ಅದೇ ಕುಟುಂಬದ 80 ವರ್ಷದ ವೃದ್ಧ ಮತ್ತು 78 ವರ್ಷದ ವೃದ್ಧೆಗೆ ಸೋಂಕು ತಗುಲಿದೆ.

15 ರಂದು ಮಿಜೋರಾಂನಿಂದ ಶಿವಮೊಗ್ಗಕ್ಕೆ ಬಂದಿದ್ದ ಒಂದೇ ಕುಟುಂಬದ ಐವರು ಸದಸ್ಯರು ಬಂದಿದ್ದು 5 ಮಂದಿಗೆ ಕೊರೊನಾ ಸೋಂಕು ದೃಡಪಟ್ಟಿದೆ.

28 ವರ್ಷದ ಯುವಕ, 19 ವರ್ಷದ ಯುವಕ, 63 ವರ್ಷದ ವೃದ್ಧ, 25 ವರ್ಷದ ಮಹಿಳೆ, 3 ವರ್ಷದ ಮಗುವಿಗೂ ಸೋಂಕು ದೃಡವಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಆರು ಜನರಿಗೆ ಕರೋನಾ ಫಾಸಿಟಿವ್ !

ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 120ಕ್ಕೆ ಏರಿಕೆಯಾಗಿದೆ.
ಇಂದು ಆರು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಯಲ್ಲಾಪುರ 3, ಮುಂಡಗೋಡ 01, ಭಟ್ಕಳ 01, ಹೊನ್ನಾವರ 01 ಜನರಲ್ಲಿ ಫಾಸಿಟಿವ್ ವರದಿಯಾಗಿದೆ. ಇಂದಿನ 6 ಪಾಸಿಟಿಟ್ ದೃಢಪಟ್ಟದ್ದು 120 ಕ್ಕೆ ಏರಿಕೆಯಾಗಿದೆ.
120 ರಲ್ಲಿ 93 ಬಿಡುಗಡೆ ಯಾಗಿದ್ದು 27ಸಕ್ರಿಯ ಪ್ರಕರಣಗಳಿವೆ.

ರಾಜ್ಯದ ಇಂದಿನ ವಿವರ ಇಲ್ಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ