ಉತ್ತರಕನ್ನಡದಲ್ಲಿ ಮತ್ತೆ ನಾಲ್ವರಲ್ಲಿ ಕರೋನಾ ಪಾಸಿಟಿವ್ ಪತ್ತೆಯಾಗುವ ಮೂಲಕ 56 ಕ್ಕೆ ಸೊಂಕು ಏರಿಕೆಯಾಗಿದೆ.
ಯಲ್ಲಾಪುರ, ದಾಂಡೇಲಿ, ಹೊನ್ನಾವರ ಹಾಗೂ ಜೊಯಿಡಾದಲ್ಲಿ ತಲಾ ಒಂದೊಂದು ಕೇಸ್ ಪತ್ತೆಯಾಗಿದೆ.ಕರೋನಾ ಸೋಂಕಿತರು ಮಹಾರಾಷ್ಟ್ರ, ಗುಜರಾತ್, ತಮಿಳುನಾಡಿನಿಂದ ಬಂದವರಾಗಿದ್ದಾರೆ.
ಮೂವರು ಮಹಿಳೆಯರು, ಓರ್ವ ಯುವಕನಲ್ಲಿ ಕರೋನಾ ಸೊಂಕು ಕಾಣಿಸಿಕೊಂಡಿದ್ದು ಯಲ್ಲಾಪುರದ ಉಪಳೇಶ್ವರದ 16 ವರ್ಷದ ಯುವತಿ.ದಾಂಡೇಲಿ ಪಟ್ಟಣದ ಹಳೆ ದಾಂಡೇಲಿಯ ಲಾರಿ ಚಾಲಕ,ತಮಿಳುನಾಡಿನ ಮಧುರೈನಿಂದ
ಜೋಯಿಡಾಕ್ಕೆ ಬಂದಿರುವ 31 ವರ್ಷದ ಮಹಿಳೆ
ಹೊನ್ನಾವರ ಮೂಲದ ಯುವತಿಗೂ ಕರೋನಾ ಸೊಂಕು ದೃಡಪಟ್ಟಿದೆ.








ಉತ್ತರಕನ್ನಡ ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 45 ಕ್ಕೆ ಏರಿಕೆಯಾಗಿದ್ದು ಒಟ್ಟು 56 ಜನರಿಗೆ ಕರೋನಾ ಪಾಸಿಟಿವ್ ಕೇಸ್ ದಾಖಲಾಗಿದೆ.
ಈಗಾಗಲೇ 11 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು ಉಳಿದವರ ಚಿಕಿತ್ಸೆ ಮುಂದುವರೆದಿದೆ. ಇಂದು ಸೊಂಕಿತರಾದವರೆಲ್ಲರೂ ಕ್ವಾರಂಟೈನ್ ನಲ್ಲಿ ಇದ್ದವರಾಗಿದ್ದಾರೆ.