ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಒಂಬತ್ತು ಫಾಸಿಟಿವ್ ಪ್ರಕರಣ ವರದಿಯಾಗಿದೆ.ರಾಜ್ಯದಲ್ಲಿ 397 ಪ್ರಕರಣ ವರದಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 5 ಮಹಿಳೆಯರು 4 ಪುರುಷರಿಗೆ ಕರೋನಾ ಫಾಸಿಟಿವ್ ದೃಡಪಟ್ಟಿದ್ದು
ದೆಹಲಿಯಿಂದ ಬಂದ p-7274 ಸಂಖ್ಯೆಯ ಪ್ರಾಥಮಿಕ ಸಂಪರ್ಕ ಹೊಂದಿದ ಮುಂಡಗೋಡಿನ ಟಿಬೇಟಿಯನ್ ಕ್ಯಾಂಪ್ -2 ನ ಹಾಸ್ಟಲ್ ನಲ್ಲಿ ಅಡುಗೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಗೂ ಫಾಸಿಟಿವ್ ವರದಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಇಂದಿನ ವಿವರ ಈ ಕೆಳಗಿನಂತಿದೆ

ಮಹಾರಾಷ್ಟ್ರ ದಿಂದ ಬಂದ ಕುಮಟಾ ಮೂಲದ 24 ವರ್ಷದ ಮಹಿಳೆ, 28 ವರ್ಷದ ಮಹಿಳೆ,42 ವರ್ಷದ ಪುರುಷ,56 ವರ್ಷದ ಪುರುಷ,ಹೊನ್ನಾವರ ಮೂಲದ 42 ವರ್ಷದ ಪುರುಷ,67 ವರ್ಷದ ವೃದ್ದೆ ,78 ವರ್ಷದ ವೃದ್ದ, 33 ವರ್ಷದ ಮಹಿಳೆ ಹಾಗೂ ಮುಂಡಗೋಡಿನ ದೆಹಲಿಯಿಂದ ಬಂದ p-7274 ಸಂಖ್ಯೆಯ ಪ್ರಾಥಮಿಕ ಸಂಪರ್ಕ ಹೊಂದಿದ ಮುಂಡಗೋಡಿನ ಟಿಬೇಟಿಯನ್ ಕ್ಯಾಂಪ್ -2 ನ ಹಾಸ್ಟಲ್ ನಲ್ಲಿ ಅಡುಗೆ ಸಹಾಯಕಿಗೂ ಫಾಸಿಟಿವ್ .
ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 156 ಕ್ಕೆ ಏರಿಕೆಯಾಗಿದ್ದು 44 ಸಕ್ರಿಯ ಪ್ರಕರಣಗಳು ಇವೆ.
ಅಡುಗೆ ಸಹಾಯಕಿಗೆ ಹಬ್ಬಿದ್ದು ಹೇಗೆ?
ಜೂ.16ರಂದು ದೆಹಲಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಟಿಬೆಟಿಯನ್ ವ್ಯಕ್ತಿ ಇತ್ತೀಚೆಗಷ್ಟೇ ಟಿಬೆಟಿಯನ್ ಕ್ಯಾಂಪ್ನಲ್ಲಿರುವ ತನ್ನ ಹೆಂಡತಿ ಮನೆಗೆ ಬಂದಿದ್ದ. ಆತನನ್ನು ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈತನಿಗೆ ಕೆಲವು ದಿನಗಳ ಸೋಂಕು ದೃಢಪಟ್ಟಿತ್ತು.
ಇನ್ನು, ಇದೇ ಹಾಸ್ಟೆಲ್ನಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಇಂದು ಸೋಂಕು ದೃಢಪಟ್ಟಿರುವುದರಿಂದ, ಈ ಹಾಸ್ಟೆಲ್ನ 54 ಕ್ವಾರಂಟೈನಿಗಳು ಹಾಗೂ ಈಕೆಯ ಮನೆಯಲ್ಲಿನ ನಾಲ್ವರು ಸದಸ್ಯರು, ಒಟ್ಟು 60 ಜನರನ್ನು ಪ್ರಥಮ ಸಂಪರ್ಕವೆಂದು ಗುರುತಿಸಲಾಗಿದ್ದು ಸದ್ಯ ಕ್ವಾರಂಟೈನ್ ನಲ್ಲಿ ಇದ್ದಾರೆ.
ಇಂದು ಕಾರವಾರದ ಕೋವಿಡ್ ಆಸ್ಪತ್ರೆಯಿಂದ ಹತ್ತು ಜನ ಬಿಡುಗಡೆ!


ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಮತ್ತೆ ಮೂರು ಮಂದಿಗೆ ಕರೋನ ಸೋಂಕು ತಗುಲಿದೆ. ಇವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಯಾರಿಗೆಲ್ಲ ಸೋಂಕು ತಗುಲಿದೆ?
ಪಿ9897 – 36 ವರ್ಷದ ಪುರುಷ
ಪಿ9898 – 20 ವರ್ಷದ ಪುರುಷ
ಪಿ9899 – 21 ವರ್ಷದ ಪುರುಷ
ಮೂವರಿಗೆ ಐಎಲ್ಐ
ಇವತ್ತು ಸೋಂಕಿತರಾಗಿರುವ ಮೂವರಿಗೆ ಇನ್ಫ್ಲೂಯನ್ಜಾ ಲೈಕ್ ಇಲ್ನೆಸ್ಸ್ (ಐಎಲ್ಐ) ಎಂದು ಗುರುತಿಸಲಾಗಿದೆ. ಹಾಗಾಗಿ ಮೂವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಎಷ್ಟಾಯ್ತು ಸೋಂಕಿತರ ಸಂಖ್ಯೆ?
ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 119ಕ್ಕೆ ಏರಿಕೆಯಾಗಿದೆ. ಈ ಪೈಕಿ 88 ಮಂದಿ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 30 ಮಂದಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈವರೆಗೆ ಒಬ್ಬ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ರಾಜ್ಯದ ವಿವರ ಇಲ್ಲಿದೆ:-

