ಉತ್ತರ ಕನ್ನಡ ಜಿಲ್ಲೆಯಲ್ಲಿ ಕ್ವಾರಂಟೈನ್ ಮುಗುಸಿದವನಲ್ಲಿ ಕರೋನಾ!ರಾಜ್ಯದಲ್ಲಿ ಎಷ್ಟು ಗೊತ್ತಾ!

2171

ಕಾರವಾರ: ಜಿಲ್ಲೆಯಲ್ಲಿ ಇಂದು ಆರು ಮಂದಿಯಲ್ಲಿ ಕೋವಿಡ್- 19 ಸೋಂಕು ದೃಢಪಡುವ ಮೂಲಕ ಸೊಂಕಿತರ ಸಂಖ್ಯೆ 114 ಕ್ಕೆ ಏರಿಕೆಯಾಗಿದೆ.

ಕುಮಟಾದ 62 ವರ್ಷದ ಪುರುಷ ಥಾಣಾದಿಂದ ವಾಪಸ್ಸಾಗಿದ್ದ. ಹೊನ್ನಾವರದ 10 ವರ್ಷದ ಬಾಲಕ, 35, 61, 65 ವರ್ಷದ ಮಹಿಳೆಯರು ಮುಂಬೈನಿಂದ ಮರಳಿದವರಾಗಿದ್ದು ಕ್ವಾರಂಟೈನ್ ನಲ್ಲಿದ್ದವರಾಗಿದ್ದಾರೆ .ಆದರೇ ಹಳಿಯಾಳದ 34 ವರ್ಷದ ಪುರುಷ ಫಿಲಿಫೈನ್ಸ್ ನಿಂದ ವಾಪಸ್ಸಾದವರಾಗಿದ್ದು, ಬೆಂಗಳೂರಿನಲ್ಲಿ ಕ್ವಾರಂಟೈನ್ ಪೂರ್ಣಗೊಳಿಸಿ ಹಳಿಯಾಳಕ್ಕೆ ಬಂದಿದ್ದರು ಈ ವೇಳೆ ಇವರ ಗಂಟಲು ಗ್ರಂಥಿ ಪರೀಕ್ಷೆ ನಡೆಸಿದ ವೇಳೆ ಕರೋನಾ ಇರುವುದು ದೃಡಪಟ್ಟಿದೆ.

ಶಿವಮೊಗ್ಗ ಜಿಲ್ಲೆ ಯಲ್ಲಿ ಇಬ್ಬರಿಗೆ ಕರೋನಾ ಫಾಸಿಟಿವ್ !

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಇಬ್ಬರಿಗೆ ಕೊರೊನಾ ಪಾಸಿಟಿವ್ ದೃಡಪಟ್ಟಿದ್ದು

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 91 ಕ್ಕೆ ಏರಿಕೆಯಾಗಿದೆ.

ದೆಹಲಿಯಿಂದ ಶಿವಮೊಗ್ಗಕ್ಕೆ ಬಂದಿದ್ದ ಯುವಕನಲ್ಲಿ ಫಾಸಿಟಿವ್ ಕಾಣಿಸಿಕೊಂಡಿದ್ದು

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿದ್ದ ಮಹಿಳೆಗೂ ಕೂಡ ಫಾಸಿಟಿವ್ ಕಂಡುಬಂದಿದೆ.

ರಾಜ್ಯದಲ್ಲಿ ಎಷ್ಟು ಇಲ್ಲಿದೆ ಬುಲಟಿನ್ ಮಾಹಿತಿ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ