ಕೋವಿಡ್ ಲಸಿಕೆ ಕೊಡಲು ಸಿದ್ದ:ಹೇಗಿದೆ ವ್ಯವಸ್ಥೆ? ನೀವು ಲಸಿಕೆ ಪಡೆದುಕೊಳ್ಳಲು ಏನುಮಾಡಬೇಕು ವಿವರ ನೋಡಿ.

384

ಕನ್ನಡವಾಣಿ ಡೆಸ್ಕ್ :- ಕೋವಿಡ್ ಲಸಿಕೆ ನೀಡಲು ಕ್ಷಣಗಣನೆ ಪ್ರಾರಂಭವಾಗಿದ್ದು ಡ್ರೈ ರನ್ ಮುಗಿದು ಈಗ ಮೊದಲ ಹಂತದಲ್ಲಿ ಲಸಿಕೆ ನೀಡಲು ಕರ್ನಾಟಕ ಸಿದ್ದವಾಗಿದೆ. ಲಸಿಕಾ ಕೇಂದ್ರಗಳ ಮಾಹಿತಿ ಜೊತೆ ಲಸಿಕೆ ಪಡೆದುಕೊಳ್ಳುವುದು ಹೇಗೆ?,ಯಾವ ದಾಖಲೆಗಳು ಬೇಕು?,ರಿಜಿಸ್ಟರ್ ಹೇಗೆ ನಿಮ್ಮ ಹಲವು ಗೊಂದಲಗಳಿಗೆ ಉತ್ತರ ನೀಡುವ ಪ್ರಯತ್ನವನ್ನು ಆರೋಗ್ಯ ಇಲಾಖೆಯಿಂದ ಕನ್ನಡವಾಣಿ ಪತ್ರಿಕೆ ಪಡೆದು ನಿಮ್ಮ ಮುಂದಿಡುತ್ತಿದೆ‌. ಉಪಯುಕ್ತವಾಗಿದ್ದರೆ ನಿಮ್ಮವರಿಗೂ ಶೇರ್ ಮಾಡಿ ಗೊಂದಲ ಭಯದಲ್ಲಿರುವವರಿಗೆ ಸಹಕರಿಸಿ ಎಂಬ ಕಳಕಳಿಯೊಂದಿಗೆ ವಿವರ ನೀಡುತಿದ್ದೇನೆ.

ಮೊದಲು ಓದುಗರ ಪ್ರಾಮುಖ್ಯತೆ ಮೇಲೆ ಉತ್ತರ ಕನ್ನಡ, ಶಿವಮೊಗ್ಗ,ಬೀದರ್,ಉಡುಪಿ,ದಕ್ಷಿಣ ಕನ್ನಡ, ಹುಬ್ಬಳ್ಳಿ,ಧಾರವಾಡದ ಪ್ರಥಮ ಹಂತದ ಲಸಿಕಾ ಕೇಂದ್ರಗಳ ಮಾಹಿತಿ ನೀಡುತಿದ್ದು ನೊಂದಣಿ ಗೊಂದಲದ ಮಾಹಿತಿಗಳು ಸಹ ಈ ಕೆಳಗೆ ಕೊಡಲಾಗಿದೆ.

ಉತ್ತರ ಕನ್ನಡ

103 – ಲಸಿಕೆ ವಿತರಣೆ ಕೇಂದ್ರ (ಈ ಕೇಂದ್ರವನ್ನು ಹೆಚ್ಚಿಸಲಾಗುತ್ತದೆ. ನಾಳೆ ಸಂಜೆ ಒಟ್ಟು ಎಷ್ಟು ಕೇಂದ್ರ ಹೆಚ್ಚುವರಿ ಮಾಡಲಾಗುತ್ತದೆ ಎಂಬುದು ನಿರ್ಧಾರ ಆಗಲಿದೆ)

ಮೊದಲ ಹಂತದಲ್ಲಿ 12,000 ಮಂದಿಗೆ ಲಸಿಕೆ ನೀಡಲಾಗುತಿದ್ದು , ತಲಾ ಬಂದು ಲಸಿಕಾ ಕೇಂದ್ರಕ್ಕೆ ಐದು ಸಿಬ್ಬಂದಿ ( ಓರ್ವ ಪೊಲೀಸ್ ಸೇರಿ) 515 ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 105 ಕಡೆ ಕೋಲ್ಡ್ ಸ್ಟೋರೇಜ್ ವ್ಯವಸ್ತೆ ಮಾಡಲಾಗಿದೆ.

ಬೀದರ್

71 – ಲಸಿಕೆ ವಿತರಣೆ ಕೇಂದ್ರಗಳಿದ್ದು ಮೊದಲ ಹಂತದಲ್ಲಿ 9076 ಮಂದಿಗೆ ಲಸಿಕೆ ನೀಡಲಾಗುತ್ತದೆ. ಇದಕ್ಕಾಗಿ 355 ಸಿಬ್ಬಂದಿ ನಿಯೋಜನೆ ಮಾಡಲಾಗುತಿದ್ದು ಜಿಲ್ಲೆಯ 71 ಕಡೆ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಲಾಗಿದೆ.

ಉಡುಪಿ ಜಿಲ್ಲೆ

ಜಿಲ್ಲೆಯಾಧ್ಯಾಂತ 76 ಲಸಿಕಾ ಕೇಂದ್ರ ಗಳಿದ್ದು
19562 ಜನರಿಗೆ ಲಸಿಕೆ ನೀಡಲಾಗುತ್ತಿದೆ.
ಲಸಿಕಾ ಕೇಂದ್ರದಲ್ಲಿ 380 ಸಿಬ್ಬಂದಿ ನಿಯೋಜನೆ ಮಾಡಲಾಗುತಿದ್ದು ಜಿಲ್ಲೆಯ 76 ಕಡೆ ಕೋಲ್ಡ್ ಸ್ಟೋರೇಜ್ ,ವಾಕ್ ಇನ್ ಕೂಲರ್ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಯಲ್ಲಿ 110 – ಲಸಿಕೆ ವಿತರಣೆ ಕೇಂದ್ರ ತೆರೆಯಲಾಗಿದ್ದು ಮೊದಲ ಹಂತದಲ್ಲಿ 21,650 ಮಂದಿಗೆ ಲಸಿಕೆ ನೀಡಲಾಗುತ್ತಿದೆ. ಲಸಿಕಾ ಕೇಂದ್ರಗಳಲ್ಲಿ ಒಟ್ಟು 550 ಸಿಬ್ಬಂದಿ ನಿಯೋಜನೆ ಮಾಡಲಾಗುತಿದ್ದು ಜಿಲ್ಲೆಯ ವಿವಿಧಕಡೆ 113 ಕಡೆ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಕಲ್ಪಿಸಲಾಗಿದೆ.

ದಕ್ಷಿಣ ಕನ್ನಡ

ಜಿಲ್ಲೆಯಲ್ಲಿ 651 ಒಟ್ಟು ಲಸಿಕೆ ವಿತರಣೆ ಕೇಂದ್ರಗಳಿದ್ದು ಮೊದಲ ಹಂತದಲ್ಲಿ 39,517 ಮಂದಿಗೆ ಲಸಿಕೆ ನೀಡಲಾಗುತ್ತಿದೆ.ಲಸಿಕಾ ಕೇಂದ್ರಗಳಲ್ಲಿ 4,129 ಜನ ಸಿಬ್ಬಂದಿ ನಿಯೋಜನೆ ಮಾಡಲಾಗುತಿದ್ದು 651ಕಡೆ ಲಸಿಕೆ ಸಂಗ್ರಹಕ್ಕೆ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಲಾಗುತ್ತಿದೆ.

ಧಾರವಾಡ ಜಿಲ್ಲೆ.

ಜಿಲ್ಲೆಯಲ್ಲಿ 111ಲಸಿಕಾ ವಿತರಣೆ ಕೇಂದ್ರ ತೆರೆಯಲಾಗುತಿದ್ದು ಮೊದಲ ಹಂತದಲ್ಲಿ 22,000 ಜನರಿಗೆ ಲಸಿಕೆ ನೀಡಲಾಗುತ್ತದೆ. ಒಟ್ಟು ಲಸಿಕಾ ಕೇಂದ್ರದಲ್ಲಿ 550 ಸಿಬ್ಬಂದಿ ನಿಯೋಜನೆ ಮಾಡಲಾಗುತಿದ್ದು 61 ಕಡೆ ಲಸಿಕೆ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಲಾಗಿದೆ.

ಹಲವು ಜನರಲ್ಲಿ ಕರೋನಾ ಲಸಿಕೆ ಬಗ್ಗೆ ಹಲವು ಗೊಂದಲಗಳಿವೆ. ಅವುಗಳ ಸಂದೇಹ ನಿವಾರಣೆಗೆ ಈ ಕೆಳಗೆ ನಿಮಗೆ ಕಾಡುವ ಚಿಕ್ಕ ಪ್ರಶ್ನೆಗಳಿಗೆ ಉತ್ತರಗಳಿವೆ.

ಕರೋನಾ ಲಸಿಕೆ ಮೊದಲು ಯಾರಿಗೆ ಸಿಗಲಿದೆ?.

ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಕರೋನಾ ವಾರಿಯರ್ಸ ಗಳಿಗೆ ನೀಡಲಾಗುತ್ತದೆ.ನಂತರ 50 ವರ್ಷ ಮೇಲ್ಪಟ್ಟ ಹಾಗು ಅಗತ್ಯವಿರುವ 50 ವರ್ಷ ಒಳಪಟ್ಟವರಿಗೂ ನೀಡಲಾಗುತ್ತದೆ.

ಕೋವಿಡ್ ಲಸಿಕೆ ಎಲ್ಲರಿಗೂ ನೀಡಲಾಗುತ್ತದೆಯೇ?

ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ ಅವಷ್ಯಕತೆಗನುಗುಣವಾಗಿ ಯಾರಿಗೆ ಅತ್ಯವಷ್ಯವಿದೆಯೋ ಅವರಿಗೆ ಪ್ರಯಾರಿಟಿ ಮೇಲೆ ನೀಡಲಾಗುತ್ತದೆ.

ಎಲ್ಲರು ತೆಗೆದುಕೊಳ್ಳುವ ಅವಷ್ಯವೇ?ಯಾರಿಗೆ ಅವಷ್ಯ.

ಅವಷ್ಯಕತೆಗಣುಗುಣವಾಗಿ ಕರೋನಾ ಸೊಂಕಿತರ ಕುಟುಂಬ,ಸಂಪರ್ಕ ಇರುವವರಿಗೆ ಲಸಿಕೆ ತೆಗೆದುಕೊಳ್ಳುವುದು ಅವಷ್ಯ.

ಅತ್ಯಲ್ಪ ಅವಧಿಯಲ್ಲಿ ಲಸಿಕೆ ಬಂದಿದೆ.ಇದು ಸುರಕ್ಷಿತವಾಗಿದೆಯೇ?

ಲಸಿಕೆ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿದೆ.ಈಗಾಗಲೇ ಪರೀಕ್ಷೆ ನಡೆಸಿ ಇದು ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದಾಗಿ ದೃಡೀಕರಿಸಲಾಗಿದೆ.

ಕೋವಿಡ್ ನಿಂದ ಗುಣಮುಖರಾದವರು ತೆಗೆದುಕೊಳ್ಳಲೇ ಬೇಕಾ?

ಹೌದು ಕೋವಿಡ್ ನಿಂದ ಗುಣಮುಖರಾದವರು ತೆಗೆದುಕೊಳ್ಳುವುದರಿಂದ ಅವರ ದೇಹದಲ್ಲಿ ಹ್ಯೂಮಿಡಿಟಿ ಅತ್ಯಂತ ಭಲಿಷ್ಟವಾಗುತ್ತದೆ.

ಲಸಿಕೆ ತೆಗೆದುಕೊಳ್ಳಲು ನಾನು ಆರ್ಹನಾಗಿದ್ದೇನಾ ತಿಳಿಯುವುದು ಹೇಗೆ.

ಲಸಿಕೆಯನ್ನು ಪ್ರಾಮುಖ್ಯತೆಯ ಆಧಾರದಲ್ಲಿ ನೀಡಲಾಗುತ್ತಿದೆ. ಎರಡನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತದೆ. 50 ವರ್ಷ ಮೇಲ್ಪಟ್ಟ ಅರ್ಹರು ಎಲ್ಲಿ ಲಸಿಕೆ ನೀಡುತ್ತಾರೆ ಅಲ್ಲಿ ಅವರ ಮೊಬೈಲ್ ನಂಬರ್ ರಿಜಿಸ್ಟರ್ ಮಾಡಿಸಿದ ನಂತರ ಮೊಬೈಲ್ ನಂಬರ್ ಗೆ ಎಲ್ಲಿ ಯಾವ ಸಮಯ ನೀಡಲಾಗುತ್ತದೆ ಎಂದು ಮೆಸೇಜ್ ಮಾಡಲಾಗುತ್ತದೆ. ಮೊಬೈಲ್ ನಂಬರ್ ರಿಜಿಸ್ಟರ್ ಮಾಡಿಸಿಕೊಳ್ಳದವರು ಆನ್ ಲೈನ್ ಹೆಲ್ತ್ ವೆಬ್ ಸೈಟ್ ಮೂಲಕ ಚಕ್ ಮಾಡಿಕೊಂಡು ತೆರಳಬಹುದು.

ರಿಜಿಸ್ಟರ್ ಮಾಡಿಸಲು ಯಾವ ದಾಖಲೆ ಬೇಕಾಗುತ್ತದೆ.ಪೋಟೋ ಕಡ್ಡಾಯವೇ?

ಸರ್ಕಾರದ ಮಾನ್ಯತೆ ಇರುವ ಡಿ.ಎಲ್,ಓಟರ್ ಐಡಿ,ಪಾನ್ ಕಾರ್ಡ,ಆದಾರ್ ಕಾರ್ಡ , ಕೇಂದ್ರ ಸರ್ಕಾರದ ಸ್ವಾಮ್ಯದ ಬ್ಯಾಂಕ್ ಪಾಸ್ ಬುಕ್ ,ಪಾಸ್ ಪೋರ್ಟ ,ಎಂ.ಪಿ,ಎಮ್.ಎಲ್.ಎ. ಎಮ್.ಎಲ್.ಸಿ ಗಳಿಂದ ಪಡೆದ ಅಫೀಷಿಯಲ್ ಐಡಂಟಿಟಿ ಕಾರ್ಡ ,ಪಬ್ಲಿಕ್ ಲಿಮಿಟೆಡ್ ಕಂಪನಿ ಐಡಿ ಕಾರ್ಡ,ಜಾಬ್ ಕಾರ್ಡ ,ಪೆನ್ ಷನ್ ಡಾಕಿಮೆಂಟ್ ಗಳು ಸಹ ಬಳಸಬಹುದಾಗಿದ್ದು ಕಡ್ಡಾಯವಾಗಿ ನಿಮ್ಮ ಒಂದು ಫೋಟೋ ಬೇಕಿರುತ್ತದೆ. ಕಡ್ಡಾಯವಾಗಿ ಇವುಗಳಲ್ಲಿ ಯಾವುದಾದರು ಒಂದು ದಾಖಲೆ ಬೇಕಿರುತ್ತದೆ.

ರಿಜಿಷ್ಟರ್ ಮಾಡಿಸಿದವರು ಮಾಹಿತಿ ಪಡೆಯುವುದು ಹೇಗೆ? ಎಷ್ಟು ಬಾರಿ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು.

ಆನ್ ಲೈನ್ ನಲ್ಲಿ ರಿಜಿಸ್ಟರ್ ಮಾಡಿಸಬೇಕು.ಮೊಬೈಲ್ ಮೂಲಕ ಮೆಸೇಜ್ ಕಳುಹಿಸಲಾಗುತ್ತದೆ.ಅದರಲ್ಲಿ ದಿನಾಂಕ ,ನಿಗದಿ ಸಮಯ ತಿಳಿಸಲಾಗುತ್ತದೆ.ಹಾಗೂ ಎರಡುಬಾರಿ ವ್ಯಾಕ್ಸಿನ್ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಒಂದನ್ನು ತೆಗೆದುಕೊಂಡ ನಂತರ 28 ದಿನದ ನಂತರ ಮತ್ತೊಂದು ಲಸಿಕೆ ತೆಗೆದುಕೊಳ್ಳಬೇಕು.ವ್ಯಾಕ್ಸಿನ್ ಪೂರ್ಣ ಗೊಂಡ ನಂತರ QR ಕೋಡ್ ಹೊಂದಿದ ಮೆಸೇಜ್ ನಿಮ್ಮ ಮೊಬೈಲ್ ಗೆ ಬರುತ್ತದೆ. ಇದು ನೀವು ವ್ಯಾಕ್ಸಿನ್ ಪೂರ್ಣಗೊಳಿಸಿದ ಸಟಿಫಿಕೇಟ್ ಇದರಲ್ಲಿರುತ್ತದೆ.

ಲಸಿಕೆಯ ಅಡ್ಡ ಪರಿಣಾಮ ಇದೆಯಾ?

ಲಸಿಕೆ ತೆಗೆದುಕೊಂಡ ನಂತರ ಅರ್ಧ ಘಂಟೆ ಕಾಲ ರೆಸ್ಟ್ ತೆಗೆದುಕೊಳ್ಳಲೇ ಬೇಕು. ಲಸಿಕೆ ಕೊಡುವ ಸಮಯದಲ್ಲಿ ಉರಿ,ನೊವು ಈತರದ ಚಿಕ್ಕಪುಟ್ಟ ಸಮಸ್ಯೆಗಳಾಗುತ್ತದೆ. ಜ್ವರ ಕೂಡ ಬರಬಹುದು.ಆದರೇ ಅಡ್ಡ ಪರಿಣಾಮ ಹೆಚ್ಚಿನದ್ದು ಇರುವುದಿಲ್ಲ. ಲಸಿಕೆ ತೆಗೆದುಕೊಂಡ ನಂತರ ದೇಹದ ನೋವು,ವಾಂತಿ ಮತ್ತಿತರೇ ಸಮಸ್ಯೆ ಬಂದಾಗ ಕೇಂದ್ರದಲ್ಲಿ ಅಂಬುಲೆನ್ಸ್ ವ್ಯವಸ್ತೆ ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತದೆ.

ಮೇಲ್ಕೊಟ್ಟ ವಿವರಗಳು ಕೇವಲ ಆಯ್ದ ಉತ್ತರಗಳಾಗಿದ್ದು ಹೆಚ್ವಿನ ಮಾಹಿತಿ ಬೇಕಾದಲ್ಲಿ www.mohfw.gov.in ಗೆ ಲಾಗಿನ್ ಆಗಿ ಮಾಹಿತಿ ಪಡೆಯಬಹುದಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ