ಆರೋಗ್ಯ ಇಲಾಖೆ ಬುಲಟಿನ್ ನಲ್ಲಿ ತಪ್ಪು ವರದಿ! ಉತ್ತರ ಕನ್ನಡ ಜಿಲ್ಲೆಯಲ್ಲಿ ಎಷ್ಟು ಫಾಸಿಟಿವ್ ಗೊತ್ತಾ?

1325

ಕಾರವಾರ :- ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ 100 ರ ಸಂಖ್ಯೆಗೆ ಏರಿಕೆಯಾಗಿದೆ. ಮಹಾರಾಷ್ಟ್ರದಿಂದ ವಾಪಸ್ಸಾದ 56 ವರ್ಷದ ಕುಮಟಾ ಮೂಲದ ವ್ಯಕ್ತಿ ಸೋಂಕಿತ ಸಂಖ್ಯೆ 6250 ಆಗಿದೆ. ಆದರೇ ಇಂದಿನ ಬುಲಟಿನ್ ನಲ್ಲಿ ಸೊಂಕಿತರ ಸಂಖ್ಯೆಯೇ ತಪ್ಪಾಗಿ ಪ್ರಕಟವಾಗಿದೆ.

ತಪ್ಪಾಗಿ ಪ್ರಕಟಗೊಂಡ ಬುಲಟಿನ್ .

ಇಂದು ಪ್ರಕಟವಾದ ಹೆಲ್ತ್ ಬುಲೆಟಿನ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಪ್ರಕರಣ ಎಂದು ತಪ್ಪಾಗಿ ನಮೂದು ಮಾಡಲಾಗಿದೆ .ಆದರೇ ಹಿಂದೆ ಇದೇ ತಿಂಗಳ ಏಳನೇ ತಾರೀಕಿನಂದು ಪ್ರಕಟವಾದ ದಾಂಡೇಲಿ,ಹಳಿಯಾಳ ಪ್ರಕರಣವನ್ನು ಇಂದಿನ ಬುಲಟಿನ್ ನಲ್ಲಿ ತೋರಿಸಲಾಗಿದೆ‌. ಇದರಿಂದ ಸೊಂಕಿತರ ಸಂಖ್ಯೆ 100 ಗಡಿ ದಾಟುತ್ತದೆ. ಆದರೇ ಇಂದು ಒಂದೇ ಪ್ರಕರಣ ವರದಿಯಾಗಿದ್ದಾಗಿದ್ದು ಹೆಲ್ತ್ ಬುಲೆಟಿನ್‌ನಲ್ಲಿ ತಪ್ಪಾಗಿದ್ದನ್ನ ಜಿಲ್ಲಾಡಳಿತ ಸ್ಪಷ್ಟಪಡಿಸಿದ್ದು ಉತ್ತರಕನ್ನಡ ಜಿಲ್ಲೆಯಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ 100 ಮಾತ್ರ ಆಗಿದ್ದು ಕೋವಿಡ್-19 ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 85 ಇದ್ದು
ಓರ್ವನ ಸೇರ್ಪಡೆಯೊಂದಿಗೆ 15ಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ