BREAKING NEWS
Search

ಕರೋನಾ ಮುಂಜಾಗೃತೆ ಕ್ರಮವಾಗಿ ಶೈಕ್ಷಣಿಕ ಪ್ರಕ್ರಿಯೆ ಮುಂದಕ್ಕೆ! ಏಪ್ರಿಲ್ 20 ರ ನಂತರ ಪ್ರಕಟಣೆ?

222

ಕಾರವಾರ :- ರಾಜ್ಯದಲ್ಲಿ ಕರೋನಾ ವೈರಸ್ ಹರಡುವಿಕೆ ಮುಂದುವರಿಯುತ್ತಿರುವುದರಿಂದ ಹಾಗೂ ಏಪ್ರಿಲ್ 15 ರ ವರೆಗೆ ದೇಶಾದ್ಯಂತ ಲಾಕ್ ಡೌನ್ ಮಾಡುವಂತೆ ಪ್ರಧಾನ ಮಂತ್ರಿಗಳು ಘೋಷಿಸಿರುವ ಹಿನ್ನಲೆಯಲ್ಲಿ ಶೈಕ್ಷಣಿಕ ಪ್ರಕ್ರಿಯೆಗಳನ್ನು ಏಪ್ರಿಲ್ 20 ರ ವರೆಗೆ ಮುಂದೂಡಲಾಗಿದೆ.

7 ರಿಂದ 9 ನೇ ತರಗತಿಯ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಗಳು, ಆರ್.ಟಿ.ಇ ಅಡಿಯಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆಗಳು ಸೇರಿದಂತೆ ವಿವಿಧ ಮಾದರಿಯ ಶಾಲೆಗಳಲ್ಲಿನ 2020-21 ನೇ ಸಾಲಿನ ದಾಖಲಾತಿ ಪ್ರಕ್ರಿಯೆಗಳನ್ನು ಮುಂದೂಡಲಾಗಿದೆ.

ಪರಿಷ್ಕೃತ ವೇಳಾಪಟ್ಟಿಯನ್ನು ಎಪ್ರಿಲ್ 20 ರ ನಂತರ ಪ್ರಕಟಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿರುತ್ತಾರೆ.
Leave a Reply

Your email address will not be published. Required fields are marked *