BREAKING NEWS
Search

ರಾಘವೇಶ್ವರ ಶ್ರೀ ನಕಲಿ ಸಿಡಿ ಪ್ರಕರಣ-2015ರಲ್ಲಿ ಹಿಂಪಡೆದ ಪ್ರಕರಣ ಮುಂದುವರೆಸಲು ಸಚಿವ ಸಂಪುಟ ಸಭೆ ತೀರ್ಮಾನ!

3821

ಬೆಂಗಳೂರು:- 2010 ರಲ್ಲಿ ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿ ನಕಲಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಜನರ ವಿರುದ್ಧ ಗೋಕರ್ಣ ಠಾಣೆಯಲ್ಲಿ ದಾಖಲಾದ ಪ್ರಕರಣ ಕುಮಟಾ ನ್ಯಾಯಾಲಯದಲ್ಲಿ ಚಾರ್ಷೀಟ್ ಸಲ್ಲಿಕೆ ಮಾಡಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 2015 ರಲ್ಲಿ ಅಂದಿನ ಸಿದ್ದರಾಮಯ್ಯ ಸರ್ಕಾರ ಆರೋಪಿತರ ಮೇಲೆ ಸಲ್ಲಿಸಲಾಗಿದ್ದ ಚಾರ್ ಶೀಟ್ ಅನ್ನು ಅಭಿಯೋಜನೆ ಮೂಲಕ ಆರೋಪಿತರ ಮೇಲೆ ದಾಖಲಾಗಿದ್ದ ಪ್ರಕರಣವನ್ನು ಹಿಂಪಡೆಯಲು ಆದೇಶಿಸಿತ್ತು.


ಈ ಆದೇಶವನ್ನು ಹಿಂಪಡೆಯಬೇಕು ಎಂದು ಸರ್ಕಾರಿ ವಕೀಲರು ಕುಮಟಾ ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡಿದ್ದರು. ಇದರ ನಂತರ ಆರೋಪಿತರು ಹೈಕೋರ್ಟ ಮೊರೆ ಹೋಗಿದ್ದು ಇದೇ ತಿಂಗಳಲ್ಲಿ ಚಾರ್ ಶೀಟ್ ಹಾಗೂ ಪ್ರಕರಣ ಹಿಂಪಡೆಯುವಂತೆ ಹಾಗೂ ಪ್ರಕರಣ ಕೈ ಬಿಡುವಂತೆ ಮನವಿ ಮಾಡಿದ್ದರು.
ಇನ್ನು ಕುಮಟಾ ನ್ಯಾಯಾಲಯದಲ್ಲಿ ಕೂಡ ಅಭಿಯೋಜನೆ ಆದೇಶ ಹಿಂಪಡೆಯಲು ಸರ್ಕಾರಕ್ಕೆ ಆದೇಶ ನೀಡಿತ್ತು.

ಈ ಹಿನ್ನಲೆಯಲ್ಲಿ ಇಂದು ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ನಕಲಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ಅಭಿಯೋಜನೆ ಆದೇಶವನ್ನು(2015 ರಲ್ಲಿ ಮಾಡಿದ ಆದೇಶ) ಹಿಂಪಡೆಯಲು ತೀರ್ಮಾನ ಕೈಗೊಂಡಿದೆ.


ಈ ಹಿನ್ನಲೆಯಲ್ಲಿ ಸಚಿವ ಸಂಪುಟ ಸಭೆ ತೀರ್ಮಾನವನ್ನು ಸಂಪುಟ ಸಭೆಯಲ್ಲಿ ಮಂಡಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸೂಚಿಸಿದ್ದಾರೆ.

ಆರೋಪ ಪಟ್ಟಿಯಲ್ಲಿ ಏನಿತ್ತು?

(ದೂರು ಪ್ರತಿಯ ಪ್ರಮುಖ ದಾಖಲೆ ಮಾತ್ರ ಹಾಕಲಾಗಿದೆ)

ಸದ್ಯ ನಕಲಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಚಂದ್ರಾಪುರ ಮಠಕ್ಕೆ ಮತ್ತೊಮ್ಮೆ ಗೆಲುವು ತಂದುಕೊಟ್ಟಂತಾಗಿದ್ದು ಮುಂದಿನ ದಿನದಲ್ಲಿ ಯಾವ ಪರಿಣಾಮ ಬೀಳಲಿದೆ ಎಂಬುದನ್ನು ಕಾದು ನೋಡಬೇಕಿದೆ‌
Leave a Reply

Your email address will not be published. Required fields are marked *