GOLD,SILVER PRICE :ಇಳಿಕೆಯತ್ತ ಮುಖ ಮಾಡಿದ ಚಿನ್ನ,ಬೆಳ್ಳಿ ದರ.

775

ಬೆಂಗಳೂರು: ದಿನದಿಂದ ದಿನಕ್ಕೆ ಏರಿಕೆ ಕಾಣುತಿದ್ದ ಚಿನ್ನ ,ಬೆಳ್ಳಿ ದರ ಈಗ ಇಳಿಕೆ ಕಂಡಿದೆ. ಹಾಗಿದ್ರೆ ಇಂದಿನ ದರ ಹೇಗಿದೆ? ಮತ್ತೆ ಇಳಿಕೆ ಕಾಣಲಿದೆಯಾ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಇಂದಿನ ದರದಲ್ಲಿ 22 ಕ್ಯಾರೆಟ್ ಚಿನ್ನ ದರ 10 ಗ್ರಾಂಗೆ 42,700₹ ಇದೆ. ನಿನ್ನೆದರಕ್ಕಿಂತ ಇಂದು 550₹ ಇಳಿಕೆ ಕಂಡಿದೆ.

24 ಕ್ಯಾರೆಟ್​ 10ಗ್ರಾಂ ಚಿನ್ನ ದರ ನಿನ್ನೆ 47,180₹ಇತ್ತು. ಇದೀಗ ಚಿನ್ನ ದರ 46,580₹ ಗೆ ಇಳಿದಿದೆ.

ಇಂದು 600₹ ಇಳಿಕೆ ಕಂಡಿದೆ. ಹಾಗೂ ಬೆಳ್ಳಿ ದರವೂ ಇಳಿಕೆಯತ್ತ ಮುಖ ಮಾಡಿದ್ದು 1 ಕೆ.ಜಿ ಬೆಳ್ಳಿ ದರ ನಿನ್ನೆ 70,600₹ ಮಾರಾಟವಾಗಿದೆ.

ಇಂದು 69,600₹ ಇಳಿದಿದೆ. ದೈನಂದಿನ ದರ ಬದಲಾವಣೆಯಲ್ಲಿ 1,000 ₹ ಇಳಿಕೆ ಕಂಡಿದೆ.

ಕೊರೊನಾ ಸಮಯದಲ್ಲಿ ಏರಿಕೆ ಕಂಡಿದ್ದ ಚಿನ್ನ ದರ ಇದೀಗ ಇಳಿಕೆಯತ್ತ ಸಾಗಿದೆ. ಸತತವಾಗಿ ಎರಡು ದಿನಗಳ ಕಾಲ ಚಿನ್ನ ದರ ಕುಸಿಯುತ್ತಿದೆ. ಚಿನ್ನ ದರ ದಿನೇ ದಿನೇ ವ್ಯತ್ಯಾಸವಾಗುತ್ತಿರುವುದನ್ನು ನೋಡುತ್ತಿದ್ದ ಜನರಿಗೆ ಚಿನ್ನ ಖರೀದಿಸ ಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಗೊಂದಲ ಸೃಷ್ಟಿಯಾಗಿತ್ತು. ಆದರೆ ಎರಡು ದಿನಗಳಿಂದ ಇಳಿಕೆ ಕಂಡಿರುವ ಗ್ರಾಹಕರಿಗೆ ಚಿನ್ನಕೊಳ್ಳಲು ಇದು ಒಳ್ಳೆಯ ಸಮಯ.

22 ಕ್ಯಾರೆಟ್​ ಚಿನ್ನ:

1 ಗ್ರಾಂ ಚಿನ್ನ ದರ ನಿನ್ನೆ 4,325₹ ಇದ್ದು, ಇದೀಗ ದರ 4,270₹ ಕ್ಕೆ ಇಳಿದಿದೆ. ಅಂದರೆ ದೈನಂದಿನ ಬದಲಾವಣೆಯಲ್ಲಿ 55₹ ಇಳಿಕೆ ಕಂಡಿದೆ. 8ಗ್ರಾಂ ಚಿನ್ನ ನಿನ್ನೆ 34,600₹ ಇದ್ದು, ಇಂದಿನ ದರ 34,160 ರೂಪಾಯಿ ಇದೆ. ದರ ಬದಲಾವಣೆಯಲ್ಲಿ 440 ರೂಪಾಯಿ ಇಳಿಕೆ ಕಂಡಿದೆ. 10 ಗ್ರಾಂ ಚಿನ್ನ ದರ ನಿನ್ನೆ 43,250₹ ಇದ್ದು, ಇಂದಿನ ದರ 42,700₹ ಇದೆ. ದರ ಬದಲಾವಣೆಯಲ್ಲಿ 550 ರೂಪಾಯಿ ಬದಲಾವಣೆ ಆಗಿದೆ. ಹಾಗೂ 100 ಗ್ರಾಂ ಚಿನ್ನ ದರ ನಿನ್ನೆ 4,32,500 ರೂಪಾಯಿ ಇದ್ದು ಇಂದು 4,27,000₹ ಕ್ಕೆ ಇಳಿದಿದೆ. ದೈನಂದಿನ ದರ ಬದಲಾವಣೆಯಲ್ಲಿ 5,500₹ ಇಳಿಕೆ ಕಂಡಿದೆ.

24 ಕ್ಯಾರೆಟ್​ ಚಿನ್ನ:

1 ಗ್ರಾಂ ಚಿನ್ನ ದರ ನಿನ್ನೆ 4,718₹ ಇದ್ದು, ಇದೀಗ ದರ 4,658₹ ಕ್ಕೆ ಇಳಿದಿದೆ. ಅಂದರೆ ದೈನಂದಿನ ಬದಲಾವಣೆಯಲ್ಲಿ 60₹ ಇಳಿಕೆ ಕಂಡಿದೆ. 8ಗ್ರಾಂ ಚಿನ್ನ ನಿನ್ನೆ 37,744₹ ಇದ್ದು, ಇಂದಿನ ದರ 37,264₹ ಇದೆ. ದರ ಬದಲಾವಣೆಯಲ್ಲಿ 480₹ ಇಳಿಕೆ ಕಂಡಿದೆ. 10 ಗ್ರಾಂ ಚಿನ್ನ ದರ ನಿನ್ನೆ 47,180₹ ಇದ್ದು, ಇಂದಿನ ದರ 46,580₹ ಇದೆ. ದರ ಬದಲಾವಣೆಯಲ್ಲಿ 600₹ ಬದಲಾವಣೆ ಆಗಿದೆ. ಹಾಗೂ 100 ಗ್ರಾಂ ಚಿನ್ನ ದರ ನಿನ್ನೆ 4,71,800₹ ಇದ್ದು ಇಂದು 4,65,800₹ ಕ್ಕೆ ಇಳಿದಿದೆ. ದೈನಂದಿನ ದರ ಬದಲಾವಣೆಯಲ್ಲಿ 6,000₹ ಇಳಿಕೆ ಕಂಡಿದೆ.

ಬೆಳ್ಳಿದರ :

ಇಂದು ಬೆಂಗಳೂರಿನಲ್ಲಿ ಬೆಳ್ಳಿ ದರವೂ ಇಳಿಕೆಯತ್ತ ಸಾಗಿದ್ದು, 1 ಗ್ರಾಂ ಬೆಳ್ಳಿ ದರ ನಿನ್ನೆ 70.60₹ ಇದ್ದ ದರ ಇಂದು, 69.60₹ ಆಗಿದೆ. ದರ ಬದಲಾವಣೆಯಲ್ಲಿ 1 ರೂಪಾಯಿಯಷ್ಟು ಇಳಿಕೆ ಕಂಡಿದೆ. 8 ಗ್ರಾಂ ಬೆಳ್ಳಿ ದರ ನಿನ್ನೆ 564.80₹ ಇದ್ದು, ಇಂದು 556.80₹ ಇಳಿದಿದೆ.

ದರ ಬದಲಾವಣೆಯಲ್ಲಿ 8 ರೂಪಾಯಿಯಷ್ಟು ಇಳಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ದರ ನಿನ್ನೆ 706 ಇದ್ದು, ಇಂದು 696₹ ಇಳಿದಿದೆ. ದೈನಂದಿನ ದರ ಬದಲಾವಣೆಯಲ್ಲಿ 10₹ ವ್ಯತ್ಯಾಸ ಕಂಡಿದೆ. 100 ಗ್ರಾಂ ಬೆಳ್ಳಿ ದರ ನಿನ್ನೆ 7,060₹ ಇದ್ದು, ಇಂದು ದರ 6,960₹ ಆಗಿದೆ.

ದರದಲ್ಲಿ 100₹ ಇಳಿಕೆ ಕಂಡಿದೆ. ಹಾಗೂ 1 ಕೆ.ಜಿ ಬೆಳ್ಳಿ ದರ 70,600 ₹ ಮಾರಾಟವಾಗಿದ್ದು, ಇಂದಿನ ಬೆಲೆ 69,600₹ ಇಳಿದಿದೆ. ಅಂದರೆ, ದರ ಬದಲಾವಣೆಯಲ್ಲಿ 1,000₹ ಇಳಿಕೆ ಕಂಡಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ