BREAKING NEWS
Search

ಹೊಸವರ್ಷಕ್ಕೆ ಶಿವಮೊಗ್ಗ ಜಿಲ್ಲೆ ಜನರಿಗೆ ಸಿಗಲಿದೆ ಕರೋನಾ ಲಸಿಕೆ!

314

ಬೆಂಗಳೂರು:-ಕೇಂದ್ರ ಸರ್ಕಾರ ನಿಗದಿ ಮಾಡಿರುವಂತೆ ಮೊದಲ ಬಾರಿಗೆ ಕರ್ನಾಟಕದಲ್ಲಿ ಶಿವಮೊಗ್ಗ ಜಿಲ್ಲೆ ಸೇರಿದಂತೆ ಬೆಂಗಳೂರು,ಬೆಳಗಾವಿ,ಮೈಸೂರು,ಕಲ್ಬುರ್ಗಿ ಜಿಲ್ಲೆಗಳಿಗೆ ಕರೋನಾ ವ್ಯಾಕ್ಸಿನ್ ನೀಡಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಆದೇಶ ಮಾಡಿದೆ. ಈ ಮೂಲಕ ಹೊಸವರ್ಷಕ್ಕೆ ಈ ಜಿಲ್ಲೆಗಳಿಗೆ ಸರ್ಕಾರ ಉಡುಗರೆ ನೀಡಿದೆ.

ಆದೇಶ ಪ್ರತಿ:-

ಯಾರಿಗೆ ಸಿಗಲಿದೆ ಮೊದಲ ಲಸಿಕೆ?

ಸದ್ಯ ಹೊಸ ವರ್ಷದ ಮೊದಲ ವಾರದಲ್ಲಿ ಶಿವಮೊಗ್ಗ ನಗರದಲ್ಲಿರುವ ಆರೋಗ್ಯ ಇಲಾಖೆಯ ಕೋಲ್ಡ್ ಸ್ಟೋರೇಜ್ ಗೆ ಲಸಿಕೆ ರವಾನಿ ಮಾಡಲಾಗುತ್ತಿದೆ. ಮೊದಲ ಹಂತವಾಗಿ ಆರೋಗ್ಯ ಕಾರ್ಯಕರ್ತರಿಗೆ ಮತ್ತುಕರೋನಾ ವಾರಿಯರ್ಸ ಗಳಿಗೆ ನೀಡಲಾಗುತ್ತದೆ. ನಂತರ ತಾಲೂಕು ಕೇಂದ್ರದ ಆಸ್ಪತ್ರೆಗಳು,ಆರೋಗ್ಯ ಕೇಂದ್ರಗಳಲ್ಲಿ ಹಂತ ಹಂತವಾಗಿ ಲಸಿಕೆ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ. ಇನ್ನು ಬೆಂಗಳೂರು,ಶಿವಮೊಗ್ಗ,ಬೆಳಗಾವಿ,ಮೈಸೂರು,ಕಲ್ಬುರ್ಗಿ ಜಿಲ್ಲೆಯಲ್ಲಿ ಲಸಿಕೆ ನೀಡಿದ ನಂತರ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನೀಡಲಾಗುತ್ತದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ