BREAKING NEWS
Search

ಗುರುವಾರದ ದಿನ ಭವಿಷ್ಯ

294

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಗುರುವಾರ, ವಿಶಾಖ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 2:03 ರಿಂದ 3:37
ಗುಳಿಕಕಾಲ: ಬೆಳಗ್ಗೆ 9:20 ರಿಂದ 10:54
ಯಮಗಂಡಕಾಲ: ಬೆಳಗ್ಗೆ 6:11 ರಿಂದ 7:46

ಮೇಷ: ಉದ್ಯೋಗ ರಂಗದಲ್ಲಿ ಬರುವ ಅಡೆತಡೆಗಳಿಗೆ ಒಂದು ರೀತಿಯ ಪರಿಹಾರ ಕಂಡುಕೊಳ್ಳುವಿರಿ. ಸಂಗಾತಿಯ ನಿರ್ಧಾರಗಳಿಗೆ ಒಪ್ಪಿ ನಡೆಯಬೇಕಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಅನಿರೀಕ್ಷಿತ ಖರ್ಚುಗಳಾಗಬಹುದು.

ವೃಷಭ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ. ಹಲವು ದಿನಗಳ ನಂತರ ಹಳೆಯ ಮಿತ್ರನ ಭೇಟಿಯಾಗುವಿರಿ. ಉದ್ಯೋಗ ರಂಗದಲ್ಲಿ ಸಹೋದ್ಯೋಗಗಿಳ ಸಹಕಾರ ಸಿಗಲಿದೆ. ಕುಲದೇವರ ಪ್ರಾರ್ಥನೆ ಮಾಡಿ.

ಮಿಥುನ: ಆರ್ಥಿಕವಾಗಿ ಹಂತ ಹಂತವಾಗಿ ಅಭಿವೃದ್ಧಿ ಗೋಚರಕ್ಕೆ ಬರುವುದು. ಹೊಸ ಕೆಲಸಗಳಿಗೆ ಕೈ ಹಾಕುವಿರಿ. ವಾಹನ ಖರೀದಿ ಯೋಗವಿದೆ. ಆದರೆ ಅಪರಿಮಿತ ಖರ್ಚು ಮಾಡಬೇಡಿ. ಧಾರ್ಮಿಕ ಕೆಲಸಗಳಲ್ಲಿ ಭಾಗಿಯಾಗುವಿರಿ.

ಕರ್ಕಟಕ: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನಗಳು ಹೆಚ್ಚಲಿವೆ. ಆದರೆ ಮಕ್ಕಳ ವಿಚಾರದಲ್ಲಿ ಕೆಟ್ಟ ವಾರ್ತೆ ಕೇಳಿಬಂದೀತು. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗಕ್ಕಾಗಿ ಅಲೆದಾಟ ತಪ್ಪದು.

ಸಿಂಹ: ರಾಜಕೀಯ ರಂಗದಲ್ಲಿರುವವರಿಗೆ ಮುನ್ನಡೆ ಸಿಗಲಿದೆ. ಆದರೆ ಮಹಿಳೆಯರಿಂದ ಅಪವಾದದ ಭೀತಿಯಿದೆ. ಎಚ್ಚರಿಕೆಯಿಂದ ವ್ಯವಹರಿಸಿ. ಶೀತ ಸಂಬಂಧೀ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಂಡುಬರಬಹುದು.

ಕನ್ಯಾ: ಹೊಸ ಜಾಗಕ್ಕೆ ಪ್ರಯಾಣ, ಹೊಸ ಜನರ ಭೇಟಿ ಸಾಧ್ಯತೆ. ಆದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪ್ರೀತಿ ಪಾತ್ರರ ಬಗ್ಗೆ ಹೆಚ್ಚು ಕಾಳಜಿವಹಿಸಬೇಕಾದ ದಿನವಿದು. ಸಾಲದ ಸಮಸ್ಯೆ ಚಿಂತೆಗೆ ಕಾರಣವಾಗಬಹುದು.

ತುಲಾ: ಉದ್ಯೋಗ ಕ್ಷೇತ್ರದಲ್ಲಿ ಅಧಿಕ ಕಾರ್ಯದೊತ್ತಡವಿದ್ದರೂ ನಿಮ್ಮ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗುವುದು. ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡುವಿರಿ. ಇಷ್ಟಮಿತ್ರರ ಭೇಟಿ ಸಾಧ್ಯತೆಯಿದೆ.

ವೃಶ್ಚಿಕ: ಹೊಸ ವ್ಯವಹಾರಗಳಿಗೆ ಕೈ ಹಾಕುವಾಗ ಅಪರಿಚಿತರನ್ನು ನಂಬಿ ಹೂಡಿಕೆ ಮಾಡಬೇಡಿ. ಲೆಕ್ಕಪತ್ರಗಳ ಬಗ್ಗೆ ಎಚ್ಚರಿಕೆಯಿರಲಿ. ಸಂಗಾತಿಯ ಮನೋಕಾಮನೆಗಳನ್ನು ಪೂರೈಸಬೇಕಾಗುತ್ತದೆ. ದಿನದಂತ್ಯಕ್ಕೆ ಶುಭ ಸುದ್ದಿಯಿದೆ.

ಧನು: ನಿರುದ್ಯೋಗಿಗಳು ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ವಾಹನ ಸವಾರರಿಗೆ ಅಪಘಾತದ ಭೀತಿಯಿದೆ, ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಲಸ್ಯತನ ಕಂಡುಬರಬಹುದು.

ಮಕರ: ಉದ್ಯೋಗ ಕ್ಷೇತ್ರದಲ್ಲಿ ಕಾಣದ ಕೈಗಳಿಂದ ನಿಮ್ಮ ಮುನ್ನಡೆಗೆ ಅಡ್ಡಿ ಎದುರಾಗಬಹುದು. ಆದರೆ ನಿರಾಸೆ ಬೇಡ. ನೂತನ ದಂಪತಿಗಳು ಮಾತಿನಲ್ಲಿ ಎಚ್ಚರಿಕೆಇಯಿಂದಿರುವುದು ಮುಖ್ಯ. ವಿರಸದ ಸಾಧ್ಯತೆಯೂ ಇದೆ.

ಕುಂಭ: ಸಂಗಾತಿಯ ಸಂತೋಷಕ್ಕಾಗಿ ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ. ಯಾರಿಗೂ ನೋವುಂಟು ಮಾಡದ ನಿಮ್ಮ ಗುಣ ಕೆಲವೊಮ್ಮೆ ನಿಮಗೇ ಮುಳುವಾಗಬಹುದು. ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಎಚ್ಚರಿಕೆ ಅಗತ್ಯ.

ಮೀನ: ಕೆಲಸದಲ್ಲಿ ನಿರುತ್ಸಾಹ ಕಂಡುಬರಬಹುದು. ನಂಬಿಕೊಂಡ ವ್ಯಕ್ತಿಗಳಿಂದಲೇ ವಂಚನೆಗೊಳಗಾಗುವ ಭೀತಿಯಿದೆ. ಆದರೆ ಆರ್ಥಿಕವಾಗಿ ನಿಮ್ಮ ಮುನ್ನಡೆಯನ್ನು ತಡೆಯಲು ಯಾರಿಗೂ ಸಾಧ‍್ಯವಿಲ್ಲ.
Leave a Reply

Your email address will not be published. Required fields are marked *