BREAKING NEWS
Search

07-09-2021-ದಿನಭವಿಷ್ಯ.

361

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಶ್ರವಣ ಮಾಸ, ಕೃಷ್ಣ ಪಕ್ಷ,
ವಾರ: ಮಂಗಳವಾರ,
ತಿಥಿ: ಅಮಾವಾಸ್ಯೆ,
ನಕ್ಷತ್ರ: ಪುಬ್ಬ,
ರಾಹುಕಾಲ: 3.25 ರಿಂದ 4. 57
ಗುಳಿಕಕಾಲ: 12.21 ರಿಂದ 1.53
ಯಮಗಂಡಕಾಲ: 9.17 ರಿಂದ 10.49

ಉದ್ಯೋಗ ಫಲ.

ಸರ್ಕಾರಿ ಉದ್ಯೋಗಿಗಳಿಗೆ ಕರ್ಚು ಏರಿಕೆ ಆಗಲಿದೆ,ಹಣ ಉಳಿಯುವುದಿಲ್ಲ.ಖಾಸಗಿ ಉದ್ಯೋಗಿಗಳಿಗೆ ಶ್ರಮಕ್ಕೆ ತಕ್ಕ ಫಲ ಇರದು,ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಇಲ್ಲದಿದ್ದರೂ ತಕ್ಕ ಮಟ್ಟಿಗೆ ಸುಧಾರಣೆ ಆಗಲಿದೆ.ಮೀನುಗಾರರು ಈ ವಾರದಲ್ಲಿ ವ್ಯಾಪಾರದಲ್ಲಿ ನಷ್ಟ ಹೊಂದಿದರೂ ಸಮುದ್ರದಲ್ಲಿ ಮೀನಿನ ಕೊರತೆ ಇರದು.ಇವರು ದುಂದುವೆಚ್ಚಕ್ಕೆ ಕಡಿವಾಣ ಹಾಕದಿದ್ದಲ್ಲಿ ನಷ್ಟ ಹೊಂದುವರು,ಕೃಷಿಕರಿಗೆ ತೋಟಗಾರಿಕಾ ಬೆಳೆ ಬೆಳೆಯುವವರಿಗೆ ಲಾಭ ದಲ್ಲಿ ಏರಿಕೆ ಆಗಲಿದೆ.

ರಾಶಿಫಲ

ಮೇಷ: ಈ ದಿನ ಮಿಶ್ರ ಫಲ, ಹಣದ ಕರ್ಚು ಅಧಿಕ, ನ್ಯಾಯಾಲಯದ ಕೆಲಸಗಳಲ್ಲಿ ವಿಳಂಬ, ಸ್ತ್ರೀಯರಿಗೆ ಶುಭ, ಮನಃಶಾಂತಿ, ಮಾತಿನ ಚಕಮಕಿ, ಅಕಾಲ ಭೋಜನ.

ವೃಷಭ: ವ್ಯಾಪಾರಿಗಳಿಗೆ ಲಾಭ,ಸರ್ಕಾರಿ ಉದ್ಯೋಗಿಗಳಿಗೆ ಕರ್ಚು ಹೆಚ್ಚು,ಯತ್ನ ಕಾರ್ಯಗಳಲ್ಲಿ ಜಯ, ಪರರ ಕಷ್ಟಕ್ಕೆ ಸ್ಪಂದಿಸುವಿರಿ, ಅವಿವಾಹಿತರಿಗೆ ವಿವಾಹ ಯೋಗ.

ಮಿಥುನ: ಮಾನಸಿಕ ಒತ್ತಡ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಸ್ಥಳ ಬದಲಾವಣೆ, ವಿದೇಶ ಪ್ರಯಾಣ, ಉತ್ತಮ ಬುದ್ಧಿಶಕ್ತಿ.

ಕಟಕ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಆಪ್ತರ ಹಿತನುಡಿ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಅವಾಚ್ಯ ಶಬ್ದಗಳಿಂದ ನಿಂದನೆ.

ಸಿಂಹ: ಅಭಿವೃದ್ಧಿ ಕುಂಠಿತ, ಶತ್ರು ಭಾದೆ, ಚೋರ ಭಯ, ತೀರ್ಥಕ್ಷೇತ್ರ ದರ್ಶನ, ಸ್ಥಳ ಬದಲಾವಣೆ, ಉದ್ಯೋಗದಲ್ಲಿ ಅಲ್ಪ ಪ್ರಗತಿ.

ಕನ್ಯಾ: ಕಫ,ವಾತ ಬಾದೆ,ಹಣದ ಕರ್ಚು ,ಕೈಯಲ್ಲಿ ದುಡ್ಡು ಉಳಿಯುವುದಿಲ್ಲ, ದೇವತಾ ಕಾರ್ಯಗಳಲ್ಲಿ ಭಾಗಿ, ಸೇವಕರಿಂದ ತೊಂದರೆ, ಆಕಸ್ಮಿಕ ದ್ರವ್ಯಲಾಭ, ಗೊಂದಲಗಳಿಂದ ಆದಷ್ಟು ದೂರವಿರಿ.

ತುಲಾ: ಅನಿರೀಕ್ಷಿತ ಖರ್ಚು, ದೂರ ಪ್ರಯಾಣ, ಕುಟುಂಬದಲ್ಲಿ ನೆಮ್ಮದಿ, ಅಮೂಲ್ಯ ವಸ್ತುಗಳ ಖರೀದಿ, ಸಾಲದಿಂದ ಮುಕ್ತಿ.

ವೃಶ್ಚಿಕ: ಶ್ರಮಕ್ಕೆ ತಕ್ಕ ಫಲ, ಶತ್ರು ಭಾದೆ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಮನೋವ್ಯಥೆ.

ಧನಸ್ಸು: ಆಪ್ತರೊಡನೆ ದೂರ ಪ್ರಯಾಣ, ದುಷ್ಟರಿಂದ ದೂರವಿರಿ, ಕೆಲಸ ಕಾರ್ಯಗಳಲ್ಲಿ ಜಯ, ದೈವಾನುಗ್ರಹದಿಂದ ಅನುಕೂಲ.

ಮಕರ: ಮಕ್ಕಳಿಗಾಗಿ ಹಣ ವ್ಯಯ, ವಾದ-ವಿವಾದದಲ್ಲಿ ಎಚ್ಚರ, ಮನಃಶಾಂತಿ, ಸ್ತ್ರೀ ಅಪವಾದಗಳು ದೂರ.

ಕುಂಭ: ಅನಗತ್ಯ ಖರ್ಚು, ಉದ್ಯೋಗದಲ್ಲಿ ಬಡ್ತಿ, ಭೂಲಾಭ, ಅನಾರೋಗ್ಯ, ವೈಯಕ್ತಿಕ ಕೆಲಸಗಳ ಕಡೆ ಗಮನ ನೀಡಿ.

ಮೀನ: ಹೊಸ ಪ್ರಯತ್ನದಿಂದ ಅನುಕೂಲ, ಕೋರ್ಟ್ ವ್ಯಾಜ್ಯಗಳಲ್ಲಿ ರಾಜಿ, ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ, ಆರೋಗ್ಯ ಸುಧಾರಣೆ,ಅಧಿಕ ಕರ್ಚು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ