ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಸದಸ್ಯರಾಗಿ ಕನ್ನಡವಾಣಿ ಗೌರವ ಸಂಪಾದಕ ಶ್ರೀರಾಜ್ ಗುಡಿ ಆಯ್ಕೆ.

289

ಬೆಂಗಳೂರು :- ರಾಜ್ಯದ ಪ್ರತಿಷ್ಠಿತ ಅಕಾಡೆಮಿ ಆದ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಸದಸ್ಯರನ್ನಾಗಿ ಏಳು ಜನರನ್ನು ನಾಮ ನಿರ್ದೇಶನ ಮಾಡಿ ಸರಕಾರ ಆದೇಶ ಹೊರಡಿಸಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲ್ಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುವ, ಅಕಾಡೆಮಿ ಗೆ ಹಿರಿಯ ನಟ ಸುನಿಲ್ ಪುರಾಣಿಕ್ ಅಧ್ಯಕ್ಷರಾಗಿದ್ದು
ಕನ್ನಡವಾಣಿ.ನ್ಯೂಸ್ ನ ಗೌರವ ಸಂಪಾದಕರು ಹಾಗೂ ಮಣಿಪಾಲ್ ಇನ್ಸ್ಟಿಟ್ಯೂಟ್ ಅಫ್ ಕಮ್ಯುನಿಕೇಶನ್ ಅಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ರಾಜ ಗುಡಿರವರನ್ನು ಆಯ್ಕೆ ಮಾಡಿದೆ. ಇವರು ದೆಹಲಿಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಈಟಿವಿ ಕನ್ನಡ ,ಎ.ಎನ್.ಐ ನಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.ನಂತರ ಮಣಿಪಾಲ್ ನಲ್ಲಿ ಮಣಿಪಾಲ್ ಇನ್ಸ್ಟಿಟ್ಯೂಟ್ ಆಪ್ ಕಮ್ಯುನಿಕೇಷನ್ ನಲ್ಲಿ ಸಹಾಯಕ ಪ್ರಧ್ಯಾಪಕರಾಗಿ ಸೇವೆಸಲ್ಲಿಸುತಿದ್ದು ಕನ್ನಡವಾಣಿ.ನ್ಯೂಸ್ ನ ಸಂಸ್ಥಾಪಕ ಗೌರವ ಸಂಪಾದಕರಾಗಿದ್ದಾರೆ.

ಇನ್ನು ಉಳಿದ ಆರು ಜನರಲ್ಲಿ ಅಶೋಕ್ ಕಶ್ಯಪ್ ಹಿರಿಯ ಛಾಯಾಗ್ರಾಹಕ,ಸೋನು ಗೌಡ ನಟಿ ,
ಉಮೇಶ್ ನಾಯಕ್ ನಿರ್ದೇಶಕ,ತುಂಗಾ ರೇಣುಕಾ ಪತ್ರಕರ್ತೆ,ಪಾಲ್ ಸುದರ್ಶನ್ ಚಿತ್ರಕಥೆ ಬರಹಗಾರರು,ಪ್ರದೀಪ್ ಕುಮಾರ್ ಬೈಂದೂರು ಸರಕಾರಿ ಕಾಲೇಜು ಉಪನ್ಯಾಸಕರು ಆಯ್ಕೆಯಾಗಿದ್ದಾರೆ.
Leave a Reply

Your email address will not be published. Required fields are marked *