ಕನ್ನಡವಾಣಿ ಡೆಸ್ಕ : ಐದನೇ ಹಂತದ ಲಾಕ್ಡೌನ್ ಗೈಡ್ಲೈನ್ಸ್ ಅನ್ನ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ನಿನ್ನೆ ನೀಡಿರುವ ಗೈಡ್ಲೈನ್ಸ್ ಆಧಾರದ ಮೇಲೆಯೇ ರಾಜ್ಯ ಸರ್ಕಾರ ಹೊಸ ಗೈಡ್ಲೈನ್ಸ್ ಬಿಡುಗಡೆ ಮಾಡಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನ ಯಥಾವತ್ ರಾಜ್ಯ ಸರ್ಕಾರ ಪ್ರಕಟ ಮಾಡಿದ್ದು ವಿಶೇಷವಾಗಿದೆ.
ರಾಜ್ಯ ಸರ್ಕಾರ ಗೈಡ್ಲೈನ್ಸ್ನಲ್ಲಿ ಏನಿರುತ್ತೆ..? ಏನಿರಲ್ಲ..? ಇಲ್ಲಿದೆ ನೋಡಿ
ರಾಜ್ಯ ಸರ್ಕಾರದಿಂದಲೂ ಜೂನ್ 30ರವರೆಗೆ ಲಾಕ್ಡೌನ್ ವಿಸ್ತರಣೆ
ಜೂನ್ 8ರಿಂದ ದೇವಾಲಯ, ಚರ್ಚ್, ಮಸೀದಿಗಳು ಓಪನ್ಗೆ ಅಸ್ತು
ಥಿಯೇಟರ್, ಮೆಟ್ರೋ ಸಂಚಾರ, ಮನೋರಂಜನ ಸ್ಥಳಗಳಿಗೆ ನಿರ್ಬಂಧ ಮುಂದುವರಿಕೆ.
ಸದ್ಯಕ್ಕೆ ಶಾಲಾ-ಕಾಲೇಜುಗಳು ಓಪನ್ ಇರಲ್ಲ, ಜುಲೈ ನಂತರ ನಿರ್ಧಾರ.
ರಾತ್ರಿ 9ರಿಂದ ಬೆಳಗ್ಗೆ 5 ರವರೆಗೆ ಕರ್ಫ್ಯೂ ಮುಂದುವರಿಕೆ.
ಮದುವೆಗೆ 50 ಜನ, ಅಂತ್ಯ ಸಂಸ್ಕಾರಕ್ಕೆ 20 ಜನರಿಗೆ ಅವಕಾಶ.
ಜೂನ್ 8ರಿಂದ ಹೋಟೆಲ್, ರೆಸ್ಟೋರೆಂಟ್ ಹಾಗೂ ಶಾಪಿಂಗ್ ಮಾಲ್ಗಳನ್ನು ತೆರೆಯಲು ಅನುಮತಿ.
65ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, 10ವರ್ಷ ಕೆಳಗಿನವರು ಮನೆಯಿಂದ ಹೊರಬರುವಂತಿಲ್ಲ.
ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ನಿರ್ಬಂಧ
ಜಿಮ್, ಸ್ವಿಮ್ಮಿಂಗ್ ಪೂಲ್ ಎಂದಿನಂತೆ ಬಂದ್
ಕಂಟೈನ್ ಮೆಂಟ್ ಝೋನ್ಗಳಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಯತಾಪ್ರಕಾರ ಮುಂದುವರಿಕೆ.