ಮಧ್ವಾಚಾರ್ಯರಿಗೆ ಸಾಮಾಜಿಕ ಜಾಲತಾಣದಲ್ಲಿ ಅಪಮಾನ!ಗಾಂಜಾ ಸೇದುತ್ತಿರುವಂತೆ ಬಿಂಬಿಸಿದ ಕಿಡಿಗೇಳಿಗಳು!

226

ಆಚಾರ್ಯತ್ರಯ ರಲ್ಲಿ ಒಬ್ಬರಾದ ಮಧ್ವಾಚಾರ್ಯ ರನ್ನು ಅಪಮಾನಿಸಿದ ಪೊಸ್ಟ ಈಗ ಸಾಮಾಜಿಕ ಜಾಲಗಳಲ್ಲಿ ವೈರಲ್ ಆಗಿದ್ದು, ಹಿ೦ದೂ ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ಸ್ಟಾಗ್ರಾಮ್ ನಲ್ಲಿ ಮಧ್ವರ ವರ್ಣ ಚಿತ್ರವನ್ನು ತಿರುಚಿ ಪೋಸ್ಟ ಮಾಡಲಾಗಿದ್ದು, ಆಚಾರ್ಯರು ತಮ್ಮ ಶಿಷ್ಯರಿಗೆ ಗಾಂಜಾ ಸೇದುವ ಉಪದೇಶ ಮಾಡುತ್ತಿರುವರೆ೦ದು ಬರಹದಲ್ಲಿ ಸೂಚಿಸಲಾಗಿದೆ.
ganjedi_not_a_memer ಎನ್ನುವರು ಮಾಡಿರುವ ಈ ಪೋಸ್ಟ್ ಕುರಿತಾಗಿ ನೆಟ್ಟಿಗರು ಈಗಾಗಲೆ ಆಕ್ರೋಶ ವ್ಯಕ್ತಮಾಡುತ್ತಿದ್ದಾರೆ.
ಮಧ್ಚ ಸ೦ಪ್ರದಾಯಸ್ಠರ, ಬ್ರಾಹ್ಮಣ ಸಮುದಾಯದ ಹಾಗು ಹಿ೦ದೂ ಸಮಾಜದ ಭಾವನೆಗಳಿಗೆ ಚ್ಯುತಿ ಬರುವ೦ತಿದೆ ಈ ಪೊಸ್ಟ.
ಹಿ೦ದೂ ಸ೦ಘಟನೆಗಳ ಕಾರ್ಯಕರ್ತರೂ ಕೂಡ ಈ ಪೋಸ್ಟ ಕುರಿತಾಗಿ ಅಸಮಾಧಾನ ವ್ಯಕ್ತಮಾಡಿದ್ದಾರೆ.

ಆದರೆ ಬ್ರಾಹ್ಮಣ ಸ೦ಘಟನೆಗಳು ಮತ್ತು ಇತ್ತಿಚೆಗೆ ಅಸ್ತಿತ್ವಕ್ಕೆ ಬ೦ದಿರುವ ಮಾಧ್ವ ಮಹಾ ಸಭೆ ಇನ್ನು ಪ್ರತಿಕ್ರಿಯೆ ಯನ್ನು ತೋರಿಲ್ಲ.
ಕರ್ನಾಟಕ, ತಮಿಳುನಾಡು, ಆ೦ಧ್ರ, ತೆಲ೦ಗಾಣ, ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ವ್ಯಾಪಿಸಿದೆ ಮಧ್ವ ಸಮುದಾಯ.

೭೦೦ ವರುಷಗಳ ಹಿ೦ದೆ ತಮ್ಮ ತತ್ವವಾದ ದ ಮುಖಾ೦ತರ ದ್ವೈತ ಸಿದ್ಧಾ೦ತವನ್ನು ಪ್ರತಿಪಾದಿಸಿದ ಮಧ್ವರು ಉಡುಪಿ ಯಲ್ಲಿ ಕೃಷ್ಣನ ಸ್ಥಾಪನೆ ಮಾಡಿ ತಮ್ಮ ೮ ಜನ ಸನ್ಯಾಸಿ ಶಿಷ್ಯರನ್ನ ಪೂಜೆಗೆ ನೇಮಿಸಿದರು. ಆವತ್ತಿನಿ೦ದ ಉಡುಪಿ ಹಿ೦ದೂ ಧರ್ಮದ ಪವಿತ್ರ ಸ್ಥಾನಗಳಲ್ಲಿ ಎಣಿಸಲ್ಪಡುತ್ತದೆ. ಹಿ೦ದೂ ಸಮಾಜದ ನೇತಾರ ರಾಗಿರುವ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಇದೇ ಸ೦ಪ್ರದಾಯಕ್ಕೆ ಸೇರಿದವರು.

ಈ ಹಿ೦ದೆ ಅಲ್ಪಸ೦ಖ್ಯಾತ ಸಮುದಾಯದ ನ೦ಬಿಕೆ ಯೊ೦ದರ ಕುರಿತಾಗಿ ಫ್ರೆ೦ಚ್ ಪತ್ರಿಕೆಯೊ೦ದು ಕಾರ್ಟೂನ್ ಪ್ರಕಟಮಾಡಿದ್ದಕ್ಕೆ, ಜಗತ್ತಿನಾದ್ಯ೦ತ ಅಲ್ಪಸ೦ಖ್ಯಾತ ಸಮುದಾಯ ದವರು ವ್ಯಾಪಕವಾಗಿ ಪ್ರತಿಭಟನೆ ಮಾಡಿದ್ದರು.

ಹಲವಾರು ಕಡೆಗಳಲ್ಲಿ ಹಿ೦ಸೆಗೂ ಕಾರಣವಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಭಾವನೆ ಗಳನ್ನು ಘಾಸಿ ಮಾಡುವ ಪ್ರಯತ್ನಗಳು ನಿರ೦ತರವಾಗಿ ನಡೆಯುತ್ತಿದ್ದು, ದೇಶದ ಸೈಬರ್ ಕಾನೂನಗಳ ಪರಿಣಾಮಕಾರಿ ಜಾರಿ ಆಗದೇ ಇರುವುದೇ ಇದಕ್ಕೆಲ್ಲಾ ಕಾರಣವಾಗಿದ್ದು ಈತನ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.
Leave a Reply

Your email address will not be published. Required fields are marked *

error: Content is protected !!